ಬಜೆಟ್ 2017: ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ 2000 ಪಿಂಚಣಿ

Subscribe to Oneindia Kannada

ಬೆಂಗಳೂರು, ಮಾರ್ಚ್ 15: ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಸಿದ್ದರಾಮಯ್ಯ ವಿಧಾನಸಭೆಯಲ್ಲಿ 2017-18 ಬಜೆಟ್ ಮಂಡಿಸುತ್ತಿದ್ದಾರೆ.

ಬಜೆಟಿನಲ್ಲಿ ರಾಜ್ಯದ ಕೃಷಿ ಸಮುದಾಯಕ್ಕೆ ಹಲವು ಘೋಷಣೆಗಳನ್ನು ಸಿದ್ದರಾಮಯ್ಯನವರು ನೀಡಿದ್ದಾರೆ.

ಇದೇ ವರ್ಷದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಮತ್ತು ಮೇಕೆದಾಟು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕೆರೆಗಳ ಪುನಶ್ಚೇತನಗೊಳಿಸಲು ಕೆರೆ ಸಂಜೀವಿನಿ ಯೋಜನೆಯನ್ನು ಬಜೆಟಿನಲ್ಲಿ ಘೋಷಿಸಲಾಗಿದೆ. ಕೋಲಾರ ಚಿಕ್ಕಾಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

Several project announced for farmers in Siddarmaiah’s 2017-18 budget

ಗೇರು ಅಭಿವೃದ್ಧಿ ಮಂಡಳಿ ರಚಿಸಲು ಸರಕಾರ ನಿರ್ಧರಿಸಿದ್ದು 10 ಕೋಟಿ ಅನುದಾನದಲ್ಲಿ 10,000 ಎಕರೆ ಪ್ರದೇಶದಲ್ಲಿ ಗೇರು ಬೆಳೆಯುವ ಉದ್ದೇಶ ಹಾಕಿಕೊಳ್ಳಲಾಗಿದೆ.

ಕರ್ನಾಟಕದಲ್ಲಿ ನೀರಾ ತೆಗೆಯಲು ಲೈಸನ್ಸ್ ನೀಡಲಾಗುವುದು. ಹಾಗೂ ಸಂಸ್ಕರಣ ಘಟಕಗಳಿಗೆ 100 ಕೋಟಿ ಅನುದಾನ ನೀಡಲಾಗುವುದು ಎಂದೂ ಮುಖ್ಯಮಂತ್ರಿ ಹೇಳಿದ್ದಾರೆ.

ಇನ್ನು ಬರ ಪರಿಹಾರಕ್ಕೆ 850 ಕೋಟಿ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.ಬರ ಪೀಡಿತ ಪ್ರದೇಶಗಳಲ್ಲಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ಮೋಡ ಭಿತ್ತನೆ ಮಾಡಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ.

ರಾಜ್ಯದ ರೈತರ ಸಾಲ ಮನ್ನಾ ಇಲ್ಲ. ಆದರೆ ರಾಜ್ಯದಲ್ಲಿರುವ ಒಟ್ಟು 25 ಲಕ್ಷ ರೈತರಿಗೆ 13,500 ಕೋಟಿ ರೂಪಾಯಿ ಸಾಲ ನೀಡಲಾಗುವುದು. ಇನ್ನು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುತ್ತಿರುವ ಸಾಲವನ್ನು 3 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗುವುದು ಎಂದು ಹೇಳಿದ್ದಾರೆ.

ರಾಜ್ಯದ ನೋಂದಾಯೊತ ಕೃಷಿ ಸಹಕಾರಿ ಸಂಘಗಳಿಗೆ 705 ಲಕ್ಷ ಸಹಾಯಧನವನ್ನು ನೀಡಲಾಗುವುದು. ಬಳ್ಳಾರಿಯಲ್ಲಿ ಕುರಿ ತಳಿ ಸಂವರ್ಧನಾ ಕೇಂದ್ರ ಸ್ಥಾಪಿಸಲು ಬಜೆಟಿನಲ್ಲಿ 1 ಕೋಟಿ ಮೀಸಲಿಡಲಾಗಿದೆ.

ಬಜೆಟಿನಲ್ಲಿ ಪಶುಸಂಗೋಪನೆಗೆ 2245 ಕೋಟಿ ರೂಪಾಯಿಗಳನ್ನು ಎತ್ತಿಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೃಷಿಗೆ ತೆರಿಗೆ ವಿನಾಯ್ತಿಯನ್ನೂ ಬಜೆಟಿನಲ್ಲಿ ಘೋಷಿಸಲಾಗಿದೆ. ದ್ವಿದಳ ಧಾನ್ಯ ಮತ್ತು ತೆಂಗಿನಕಾಯಿ ಸಿಪ್ಪೆಗಳ ಮೇಲೆ ತೆರಿಗೆ ವಿನಾಯಿತಿಯನ್ನು ಸಿದ್ದರಾಮಯ್ಯ ಗೋಷಿಸಿದ್ದಾರೆ.

ಇನ್ನು ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ಮಾಸಿಕ 2 ಸಾವಿರ ರೂಪಾಯಿ ಪಿಂಚಣಿ ನೀಡಲಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Chief Minister and Finance Minister Siddaramaiah has tabled Karnataka Budget 2017-18 on Wednesday, March 15, 2017. Siddaramaiah announced several project for farmers.
Please Wait while comments are loading...