ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಸಂಪುಟ ಸಭೆ: ಮತ್ತೆ ವಿಧಾನ ಮಂಡಲ ಅಧಿವೇಶನ ಕರೆಯಲು ತೀರ್ಮಾನ?

|
Google Oneindia Kannada News

ಬೆಂಗಳೂರು, ಡಿ. 28: ವಿಧಾನಪರಿಷತ್ ಸಭಾಪತಿ ಅವರನ್ನು ಪದಚ್ಯುತಿಗೊಳಿಸಲು ಅವಕಾಶವಾಗುವಂತೆ ಮತ್ತೊಮ್ಮೆ ವಿಧಾನ ಪರಿಷತ್ ಅಧಿವೇಶನ ಕರೆಯುವುದು ಸೇರಿದಂತೆ, ಹಲವು ಮಹತ್ವದ ನಿರ್ಧಾರಗಳನ್ನು ಇಂದು ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆಯಿದೆ. ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ಬಿಜೆಪಿ ಸದಸ್ಯರು, ಈ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನ ಕರೆಯಲು ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.

ಇಂದು ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರುವ ಸಾಧ್ಯತೆಯಿದೆ. ವಿಶೇಷ ಕಲಾಪ ಕರೆದು ಮತ್ತೊಮ್ಮೆ ಅವಿಶ್ವಾಸ ಗೊತ್ತುವಳಿ ಮಂಡಿಸಲು ಚಿಂತನೆ ನಡೆಸಲಾಗಿದೆ. ಹೀಗಾಗಿ ವಿಶೇಷ ಅಧಿವೇಶನವನ್ನು ಯಾವಾಗ ಕರೆಯಬಹುದು ಎಂಬ ಬಗ್ಗೆ ಇಂದು ನಿರ್ಧಾರ ಮಾಡುವ ಸಾಧ್ಯತೆಯಿದೆ. ಅದರೊಂದಿಗೆ ಇನ್ನಷ್ಟು ಮಹತ್ವದ ನಿರ್ಣಯಗಳನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳುಲಾಗುತ್ತಿದೆ. ಅವುಗಳು ಹೀಗಿವೆ.

 Several Decisions Will be Taken In The Cabinet Meeting On Monday

* ರಾಜ್ಯ ನಾಗರೀಕ ಸೇವೆ ತಿದ್ದುಪಡಿ ಬಗ್ಗೆ ಚರ್ಚೆ

* ಮೋಟಾರು ವಾಹನ ಆನೂನಿಗೆ ತಿದ್ದುಪಡಿ ತರುವ ಬಗ್ಗೆ ನಿರ್ಧಾರ ಸಾಧ್ಯತೆ

* ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಕಾಲೇಜು ರಚನೆ ಕುರಿತು ಕಾನೂನಿಗೆ ತಿದ್ದುಪಡಿ

* ಸೊಸೈಟಿ ನೊಂದಣಿ ತಿದ್ದುಪಡಿ ಕಾಯ್ದೆ ಬಗ್ಗೆಯೂ ಚರ್ಚೆ

* ತುರ್ತು ಸಂದರ್ಭ ಪ್ರತಿಕ್ರಿಯಾ ವ್ಯವಸ್ಥೆ ಬದಲಾವಣೆ, ಸಹಾಯವಾಣಿ ಸಂಖ್ಯೆ 100ನ್ನು ಬದಲಾಯಿಸಿ 112 ನಂಬರ್ ತರಲು ಚಿಂತನೆ. ಸುಮಾರು 35.47 ಕೋಟಿ ರೂ.ಗಳ ವೆಚ್ಚದ ಯೋಜನೆ

* ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಿಸಲು ಜಪಾನ್ ತಂತ್ರಜ್ಞಾನ ಅಳವಡಿಕೆ ಕುರಿತು ತೀರ್ಮಾನ

* ಎಪಿಎಂಸಿ ಆವರಣದ ಹೊರಗಡೆಯೂ ತೆರಿಗೆ ಕುರಿತು ಅಂತಿಮ ನಿರ್ಧಾರ

* ಖಾಸಗಿ ಭದ್ರತಾ ನಿಯಾಮವಳಿಗೆ ತಿದ್ದುಪಡಿ

* ತೋಟಗಾರಿಕಾ ವಿವಿ ತಿದ್ದುಪಡಿಯ ಬಗ್ಗೆಯೂ ಚರ್ಚೆ

* ಶಿವಮೊಗ್ಗದಲ್ಲಿ ಯಾರ್ಪಿಡ್ ಫೋರ್ಸ್‌ ಕಚೇರಿ ಆರಂಭಿಸಲು 50 ಎಕರೆ ಜಮೀನು ಮಂಜೂರು ಬಗ್ಗೆ ಸಮ್ಮತಿ ಸಾಧ್ಯತೆ

Recommended Video

ಇಟಲಿಗೆ ಹೋಗ್ತಿರೋದಾದ್ರು ಯಾಕೆ ?? | Rahul Gandhi | Oneindia Kannada

* ಬಂಗಾರಪೇಟೆಗೆ ಕುಡಿಯುವ ನೀರು ಯೋಜನೆಗೆ ಒಪ್ಪಿಗೆ ಸಾಧ್ಯತೆ-125.46 ಕೋಟಿ ರೂ. ವೆಚ್ಚದ ಯೋಜನೆ.

English summary
Several decisions will be taken in the Cabinet meeting on Monday, including the Special Assembly session, Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X