ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಕ್ರವಾರ ನಡೆದ ರಾಜ್ಯ ಸಂಪುಟ ಸಭೆಯ ಮಹತ್ವದ ತೀರ್ಮಾನಗಳು!

|
Google Oneindia Kannada News

ಬೆಂಗಳೂರು, ನ. 27: ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಯೂಟರ್ನ್ ಹೊರತಾಗಿಯೂ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಹಲವು ವಿಷಯಗಳಿಂದ ಇಂದು (ನ.27) ನಡೆದ ರಾಜ್ಯ ಸಚಿವ ಸಂಪುಟ ಸಭೆ ಮಹತ್ವ ಪಡೆದುಕೊಂಡಿತ್ತು. ಆದರೆ ಹಿರಿಯ ಸಚಿವರು ಸಚಿವ ಸಂಪುಟ ಸಭೆಗೆ ಗೈರಾಗಿದ್ದರು.

ಸಂಪುಟ ಸಬೆಗೆ ಹಿರಿಯ ಸದಸ್ಯರ ಗೈರುಹಾಜರಿಯ ಮಧ್ಯೆಯೂ ಹಲವು ಮಹತ್ವದ ನಿರ್ಣಯಗಳನ್ನು ಸಂಪುಟ ಸಭೆಯಲ್ಲಿ ಕೈಗೊಂಡಿದ್ದಾರೆ. ಕ್ಯಾಬಿನೆಟ್ ಅಜೆಂಡಾದಲ್ಲಿನ ಕೆಲವು ವಿಷಯಗಳನ್ನು ತಡೆಹಿಡಿಯಲಾಗಿದೆ. ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಸಂಪುಟದ ನಿರ್ಣಯಗಳ ಕುರಿತು ಮಾಹಿತಿ ನೀಡಿದ್ದಾರೆ.

ಜಾತಿಗೆ ಸೀಮಿತ ಗೊಳಿಸಬೇಡಿ

ಜಾತಿಗೆ ಸೀಮಿತ ಗೊಳಿಸಬೇಡಿ

ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿ ಪಟ್ಟಿಗೆ ಸೇರಿಸುವ ಪ್ರಸ್ತಾವನೆಯಿಂದ ಯಡಿಯೂರಪ್ಪ ಹಿಂದಕ್ಕೆ ಸರಿದಿದ್ದಾರೆ. ಇದೇ ವಿಚಾರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಚಿವ ಮಾಧುಸ್ವಾಮಿ ಅವರು, ಸಚಿವ ಸಂಪುಟ ವಿಸ್ತರಣೆ ವಿಷಯಕ್ಕೆ ಕೇಂದ್ರದ ವರಿಷ್ಠರು ವಿಳಂಬ ಮಾಡಿರುವುದಕ್ಕೂ, ವೀರಶೈವ ಲಿಂಗಾಯಿತರನ್ನು ಓಬಿಸಿ ಪಟ್ಟಿಗ ಸೇರಿಸಲು ಶಿಫಾರಸು ಮಾಡುವುದಕ್ಕೂ ಒಂದಕ್ಕೊಂದು ಸಂಬಂಧವಿಲ್ಲ.

ಯಡಿಯೂರಪ್ಪ ಈಗಲೂ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ. ಆದರೆ ಅವರನ್ನು ಜಾತಿಗೆ ಸಿಮೀತ ಮಾಡಬೇಡಿ. ಓಬಿಸಿಯಲ್ಲಿ ಪ್ರಾತಿನಿಧ್ಯ ಕೇಳಲಾಗುತ್ತಿದೆ, ರಾಜ್ಯದ ನೌಕರಿಯಲ್ಲಿ ನಾವು ಪಾಲು ಕೇಳುತ್ತಿಲ್ಲ ಎಂದು ಹೇಳಿದ್ದಾರೆ.

ಸಂಪುಟದ ಇತರ ನಿರ್ಧಾರಗಳು ಹೀಗಿವೆ

ಸಂಪುಟದ ಇತರ ನಿರ್ಧಾರಗಳು ಹೀಗಿವೆ

* ಧಾರವಾಡ ರೈಲ್ವೆ ಸ್ಟೇಷನ್ ಯಾರ್ಡ್ ನಲ್ಲಿ 16.48 ಕೋಟಿ ಅಂದಾಜು ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮೋದನೆ.

* ಕರ್ನಾಟಕ ಗೃಹ ಮಂಡಳಿಯ 98 ವಸತಿ ಯೋಜನೆಗಳನ್ನು 2275 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಅನುಮತಿ.

* ಸಾಫ್ಟವೇರ್ ಟೆಕ್ನಾಲರ್ಜಿ ಪಾರ್ಕ್ ಸಹಯೋಗದಲ್ಲಿ ಉತ್ಕೃಷ್ಟತಾ ಕೇಂದ್ರ ಸ್ಥಾಪನೆಗೆ ಅನುಮತಿ.

* ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಗೆ ಕಟ್ಟಡಗಳ ನಿರ್ಮಾಣಕ್ಕೆ 42.93 ಕೋಟಿ ರೂ. ಕಾಮಗಾರಿಗಳಿಗೆ ಅನುಮತಿ.

ಶ್ರೀರಾಮುಲುಗೆ ಬ್ಯಾಕ್‌ಲಾಗ್ ಹುದ್ದೆ ಭರ್ತಿ ಜವಾಬ್ದಾರಿ

ಶ್ರೀರಾಮುಲುಗೆ ಬ್ಯಾಕ್‌ಲಾಗ್ ಹುದ್ದೆ ಭರ್ತಿ ಜವಾಬ್ದಾರಿ

* ಎಸ್ ಸಿ/ಎಸ್ ಟಿ ಬ್ಯಾಕಲಾಗ್ ಹುದ್ದೆ ಭರ್ತಿಗೆ ಸಚಿವ ಸಂಪುಟ ಉಪಸಮಿತಿ ಪುನಾರಚನೆ, ಶ್ರೀರಾಮುಲುಗೆ ಉಪಸಮಿತಿ ಸಮಿತಿ ಅಧ್ಯಕ್ಷತೆ.

* ಕರ್ನಾಟಕ ಗೆಜೆಟೆಡ್ ಪ್ರೊಭೆಷನರಿ ನೇಮಕಾತಿ 1:15 ಅನುಪಾತ ನಿಗದಿ ಪಡಿಸಿ ನಿಯಮಾವಳಿ ತಿದ್ದುಪಡಿ.

* ಮೆಟ್ರೋ ರೈಲು ಅನುಷ್ಠಾನ ಸಮಿತಿಗೆ ಮೂವರು ಸದಸ್ಯರ ನೇಮಕ.

* ಪೋಲೀಸ್ ಅಯುಕ್ತರು, ರೈಲ್ವೆ ವಿಭಾಗೀಯ ವ್ಯವಸ್ಥಾಪಕರು ಮತ್ತು ಕೆಆರ್ ಐಡಿಎಲ್ ನಿರ್ದೇಶಕರ ನೇಮಕ.

Recommended Video

ವಿಜಯಪುರದಲ್ಲಿ Basavana Gowda Yatnal ಬೆಂಬಲಿಗರಿಗೆ ಕರವೇ ಕಾರ್ಯಕರ್ತನ ಉತ್ತರ
ಬಿಬಿಎಂಪಿಗೆ ಸೇರ್ಪಡೆ

ಬಿಬಿಎಂಪಿಗೆ ಸೇರ್ಪಡೆ

* ಮಲ್ಲಸಂದ್ರ ಮತ್ತು ಮನೆವಾರ್ತೆ ಕಾವಲ್, ಶೆಟ್ಟಿಹಳ್ಳಿ ಗ್ರಾಮ ಪಂಚಾಯತ್‌ಗಳು ಬಿಬಿಎಂಪಿಗೆ ಸೇರ್ಪಡೆ.

* ಎಕ್ಸಪೀರಿಯನ್ಸ್ ಬೆಂಗಳೂರು ಯೋಜನೆಗೆ ಮೈಸೂರು ಲ್ಯಾಂಪ್ ಕಾರ್ಖಾನೆಯ ಭೂಮಿ‌ ಮತ್ತು ಉಪಕರಣಗಳನ್ನು ಬಳಕೆ ಮಾಡಲು ತೀರ್ಮಾನ.

* ಶಿವಮೊಗ್ಗ ವಿಮಾನ ನಿಲ್ದಾಣ ಅಭಿವೃದ್ಧಿಗೆ 220 ರಿಂದ 384 ಕೋಟಿ ರೂ.ಗ:ಳಿಗೆ ಪರಿಷ್ಕೃತ ಅಂದಾಜು ಮೊತ್ತಕ್ಕೆ ಅನುಮೋದನೆ.

* ಜಿಂದಾಲ್ ಕಂಪನಿಗೆ 2000 ಎಕರೆ ಭೂಮಿ ಕೊಡುವ ತೀರ್ಮಾನಕ್ಕೂ ಮೊದಲು ಮತ್ತೆ ಪರಿಶೀಲನೆ ಮಾಡಲು ಸಂಪುಟದ ತೀರ್ಮಾನ.

* ಬೆಂಗಳೂರು ಗ್ರಾಮಾಂತರ ಭಾಗದ ಬಾಶಟ್ಟಳ್ಳಿ ಪಟ್ಟಣ ಪಂಚಾಯತಿ ಯಾಗಿ ಮೇಲ್ದರ್ಜೆಗೆ.

* ಹೊನ್ನಾಳಿ ಪಟ್ಟಣ ಪಂಚಾಯ್ತಿಯಿಂದ ಪುರಸಭೆ ಮಾಡಿ ಮೇಲ್ದರ್ಜೆಗೆ ಏರಿಸಲು ತೀರ್ಮಾನ.

* ಬೆಂಗಳೂರು ಯಲಹಂಕ ಹುಣಸಮಾರನಹಳ್ಳಿ ಪುರಸಭೆಯಾಗಿ ಮೇಲ್ದರ್ಜೆಗೆ

* ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ.

English summary
Several decisions were taken at the Cabinet meeting on Friday, including the Taluka distribution for Vijayanagar district and Ballary sdistricts .Addressing a news conference after the cabinet meeting in the Vidhanasoudha, Law Minister Madhuswamy given the Cabinet decisions. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X