ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಸಿಎಂ ಪಟ್ಟಕ್ಕೇರುವ ಮೊದಲೇ ರೈತರ ಹಿತ ಕಾಯುವ ಆಶ್ವಾಸನೆ"

|
Google Oneindia Kannada News

ಬೆಂಗಳೂರು, ಜುಲೈ 24: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಕರ್ನಾಟಕದಲ್ಲಿನ ಮೈತ್ರಿ ಸರ್ಕಾರ ಪತನ ಹಾಗೂ ಬಿಜೆಪಿ ಸರ್ಕಾರದ ಉದಯದ ಬಗ್ಗೆ ಅಧಿಕೃತವಾಗಿ ಪಕ್ಷದ ಹೈಕಮಾಂಡ್ ನಾಯಕರಿಗೆ ತಿಳಿಸಿದ್ದಾರೆ. ಈ ನಡುವೆ ನಿಯೋಜಿತ ಸಿಎಂ ಯಡಿಯೂರಪ್ಪ, ರಾಜ್ಯ ರೈತರ ಹಿತ ಕಾಯುವ ಆಶ್ವಾಸನೆಯನ್ನು ನೀಡಿದ್ದಾರೆ.

ವಿಶ್ವಾಸಾಘಾತದ ಸುತ್ತ ಮುತ್ತ : ಚಿತ್ರಗಳು

"ಕರ್ನಾಟಕದಲ್ಲಿ ಪ್ರಗತಿ ಪಥದತ್ತ ಸಾಗುವ ಹೊಸ ಶಕೆ ಇದಾಗಿದ ಆರಂಭವಾಗಿದೆ" ಎಂದು ಬಿ. ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.

ಯಡಿಯೂರಪ್ಪ ಗದ್ದುಗೆಗೆ ಏರಲು ನಾಲ್ಕು ಮುಹೂರ್ತ ಫಿಕ್ಸ್!ಯಡಿಯೂರಪ್ಪ ಗದ್ದುಗೆಗೆ ಏರಲು ನಾಲ್ಕು ಮುಹೂರ್ತ ಫಿಕ್ಸ್!

ಮೈತ್ರಿ ಸರ್ಕಾರ ವಿಶ್ವಾಸಮತ ಕಳೆದುಕೊಂಡ ಬಳಿಕ ಮಾತನಾಡಿದ ಯಡಿಯೂರಪ್ಪ, "ಪ್ರಜಾಪ್ರಭುತ್ವಕ್ಕೆ ಸಂದ ಜಯ, ಕುಮಾರಸ್ವಾಮಿ ಸರ್ಕಾರದಿಂದ ನಾಡಿನ ಜನತೆ ರೋಸಿ ಹೋಗಿದ್ದರು,ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಭರವಸೆಯನ್ನು ನಾಡಿನ ಜನತೆಗೆ ನೀಡುತ್ತಿದ್ದೇನೆ" ಎಂದು ಹೇಳಿದರು.

Set to take over as CM, Yeddyurappa makes big promise for farmers

ಮೂರು ಬಾರಿ ಮುಖ್ಯಮಂತ್ರಿಯಾಗಿ ಅನುಭವವುಳ್ಳ ಯಡಿಯೂರಪ್ಪ ಅವರು ತಮ್ಮ ಮುಂದಿನ ಸರ್ಕಾರದ ಮುಖ್ಯ ಆದ್ಯತೆ "ರೈತರ ಏಳಿಗೆ" ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ನಮ್ಮ ಸರ್ಕಾರ ಮುಖ್ಯ ವಿಷಯವಾಗಲಿದೆ. ನಾಡಿನಲ್ಲಿ ಹಲವೆಡೆ ಅತಿವೃಷ್ಟಿ, ಅನಾವೃಷ್ಟಿಯಾಗಿ, ಸಮಸ್ಯೆಯುಂಟಾಗಿದೆ, ರೈತರ ನೋವಿಗೆ ಮೊದಲು ಸ್ಪಂದಿಸುವ ಕೆಲಸವಾಗಬೇಕಿದೆ, ಮುಂಬರುವ ದಿನಗಳಲ್ಲಿ ರೈತರ ಆರ್ಥಿಕ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಕಾಣಬಹುದು" ಎಂದು ಹೇಳಿದರು.

ಹೈಕಮಾಂಡ್ ನಾಯಕರ ಸೂಚನೆಗಾಗಿ ಕಾದು ಕುಳಿತ ಯಡಿಯೂರಪ್ಪ! ಹೈಕಮಾಂಡ್ ನಾಯಕರ ಸೂಚನೆಗಾಗಿ ಕಾದು ಕುಳಿತ ಯಡಿಯೂರಪ್ಪ!

15ನೇ ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆಯಲ್ಲಿ ಎಚ್ ಡಿ ಕುಮಾರಸ್ವಾಮಿ ನೇತೃತ್ವ ಮೈತ್ರಿ ಸರ್ಕಾರವು 99 ಮತಗಳಿಸಿತ್ತು, ಬಿಜೆಪಿ 105 ಗಳಿಸಿತು, 14 ತಿಂಗಳ ಸರ್ಕಾರದ ಆಡಳಿತವು ಮಂಗಳವಾರದಂದು ಅಂತ್ಯ ಕಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Yeddyurappa makes big promise for farmers: "Our farmers are suffering due to drought and other reasons. In the coming days we assure the people of Karnataka that we will give more importance to the farmers so that they can live happily," he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X