ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಾರದ ಬದಲು ಶುಕ್ರವಾರ ವಿಶ್ವಾಸ ಮತ ಯಾಚನೆ

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 23: ಗುರುವಾರ ನಡೆಸಲು ಉದ್ದೇಶಿಸಿದ್ದ ವಿಧಾನಸಭೆ ಅಧಿವೇಶನ ಶುಕ್ರವಾರಕ್ಕೆ ಮುಂದೂಡಿಕೆಯಾಗಿದೆ. ಹೀಗಾಗಿ ನೂತನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ವಿಶ್ವಾಸ ಮತ ಯಾಚನೆ ಶುಕ್ರವಾರ ನಡೆಯಲಿದೆ.

ಈ ಹಿಂದೆ ಗುರುವಾರ ವಿಶ್ವಾಸ ಮತ ಯಾಚನೆ, ಶುಕ್ರವಾರ ಸ್ಪೀಕರ್ ಚುನಾವಣೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದರು. ಆದರೆ ಇಂದು ನಡೆದ ಪ್ರಮಾಣ ವಚನ ಸ್ವೀಕರಿಸಿದ ಕುಮಾರಸ್ವಾಮಿ ತಮ್ಮ ನಿರ್ಧಾರ ಬದಲಿಸಿದ್ದು ಶುಕ್ರವಾರ ಅಧಿವೇಶನ ಕರೆದಿದ್ದಾರೆ.

ವಿಶ್ವಾಸ ಮತ ಯಾಚನೆ : ನೇರ ಪ್ರಸಾರಕ್ಕೆ ಸುಪ್ರೀಂ ಸೂಚನೆವಿಶ್ವಾಸ ಮತ ಯಾಚನೆ : ನೇರ ಪ್ರಸಾರಕ್ಕೆ ಸುಪ್ರೀಂ ಸೂಚನೆ

ಶುಕ್ರವಾರ ಮಧ್ಯಾಹ್ನ 12.15ಕ್ಕೆ ಅಧಿವೇಶನ ಆರಂಭವಾಗಲಿದೆ. ಅಂದೇ ಸ್ಪೀಕರ್ ಬದಲಾವಣೆಯೂ ನಡೆಯುವ ಸಾಧ್ಯತೆ ಇದೆ.

Session of Assembly to be convened on 25 May

ವಿಧಾನಸಭೆಯಲ್ಲಿ ಶಾಸಕರ ಭದ್ರತೆಗಾಗಿ 200 ಮಾರ್ಷಲ್‌ಗಳ ನಿಯೋಜನೆ!ವಿಧಾನಸಭೆಯಲ್ಲಿ ಶಾಸಕರ ಭದ್ರತೆಗಾಗಿ 200 ಮಾರ್ಷಲ್‌ಗಳ ನಿಯೋಜನೆ!

ಹಾಲಿ ಹಂಗಾಮಿ ಸ್ಪೀಕರ್ ಕೆ.ಜಿ. ಬೋಪಯ್ಯ ಸ್ಪೀಕರ್ ಚುನಾವಣೆ ನಡೆಸಿಕೊಡಲಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಕೆ.ಆರ್. ರಮೇಶ್ ಕುಮಾರ್ ನೂತನ ಸ್ಪೀಕರ್ ಆಗಲಿದ್ದಾರೆ. ಬಹುಶಃ ಇದಾದ ನಂತರ ವಿಶ್ವಾಸ ಮತ ಯಾಚನೆ ನಡೆಯಲಿದೆ.

English summary
Session of Karnataka Assembly to be convened on 25 May at 12.15 pm. Speaker election and floor test to be held on the same day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X