ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲುಸಾಲು ರಜೆ: ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ಪ್ರಕಟಣೆ

ಶುಕ್ರವಾರ (ಸೆ 29) ದಿಂದ ಆರಂಭವಾಗಿ ಸತತ ನಾಲ್ಕು ದಿನಗಳ ರಜೆಯ ಹಿನ್ನಲೆಯಲ್ಲಿ ಭಕ್ತರಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯ ಸಾಮಾಜಿಕ ತಾಣದಲ್ಲಿ ಪ್ರಕಟಣೆಯೊಂದನ್ನು ಹೊರಡಿಸಿದೆ.

By Balaraj Tantry
|
Google Oneindia Kannada News

ಬೆಳ್ತಂಗಡಿ, ಸೆ 28: ಶುಕ್ರವಾರ (ಸೆ 29) ದಿಂದ ಆರಂಭವಾಗಿ ಸತತ ನಾಲ್ಕು ದಿನಗಳ ರಜೆಯ ಹಿನ್ನಲೆಯಲ್ಲಿ ಭಕ್ತರಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯ ಸಾಮಾಜಿಕ ತಾಣದಲ್ಲಿ ಪ್ರಕಟಣೆಯೊಂದನ್ನು ಹೊರಡಿಸಿದೆ.

ನಾಲ್ಕು ದಿನಗಳ ರಜೆಯ ವೇಳೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭಕ್ತರ ಮಹಾಪೂರವೇ ಹರಿದುಬರುವ ಸಾಧ್ಯತೆಯಿರುವುದರಿಂದ, ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲು ಕಷ್ಟವಾಗಬಹುದು ಎಂದು ದೇವಾಲಯ ಭಕ್ತರಲ್ಲಿ ವಿನಂತಿಸಿಕೊಂಡಿದೆ.
(ದಸರಾ ಹಬ್ಬವೆಂದರೆ ಮರೆಯದ ನೆನಪುಗಳ ನವರಾತ್ರಿ)

Series of Holidays, Dharmasthala temple appeal to devotees


ಈ ಸಂಬಂಧ, ಫೇಸ್ ಬುಕ್ ನಲ್ಲಿ ಮನವಿಯೊಂದನ್ನು ಪೋಸ್ಟ್ ಮಾಡಿರುವ ದೇವಾಲಯ, "ಶುಕ್ರವಾರದಿಂದ (ಸೆ 29) ಅಕ್ಟೋಬರ್ 2ರವರರೆಗೆ ಜನಸಂದಣಿ ಜಾಸ್ತಿಯಿರುವ ಸಾಧ್ಯತೆಯಿದೆ. ಹಾಗಾಗಿ, ಈ ಸಂದರ್ಭದಲ್ಲಿ ವಸತಿ ಮತ್ತು ದರ್ಶನಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ" ಎಂದು ಹೇಳಿದೆ.

ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಐತಿಹಾಸಿಕ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಸಾಲುಸಾಲು ರಜೆಯ ವೇಳೆ, ವಿಪರೀತ ಜನದಟ್ಟಣಿ ಇರುವ ಹಿನ್ನಲೆಯಲ್ಲಿ, ದೇವಾಲಯ ಈ ಪ್ರಕಟಣೆ ಹೊರಡಿಸಿದೆ.

ಆಯುಧಪೂಜೆ, ವಿಜಯದಶಮಿ, ಗಾಂಧಿ ಜಯಂತಿ ಪ್ರಯುಕ್ತ ಶುಕ್ರವಾರದಿಂದ ಸತತ ನಾಲ್ಕು ದಿನ ರಜೆಯಿರಲಿದ್ದು, ಗುರುವಾರ (ಅ 5) ವಾಲ್ಮೀಕಿ ಜಯಂತಿ ಪ್ರಯುಕ್ತ ಮತ್ತೆ ರಾಜ್ಯ ಸರಕಾರೀ ರಜೆಯಿರಲಿದೆ.

English summary
Series of Holidays, Dharmasthala Manjunathasway temple appeal to devotees. Temple appealed through Facebook, There may be inconvenience with regard to accommodation and Darshan from 29.10.17 to 02.10.17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X