ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

KSRTC : ಏ.14 ರಿಂದ ಸರಣಿ ರಜೆ; ಕೆಎಸ್‌ಆರ್‌ಟಿಸಿಯಿಂದ 300 ಹೆಚ್ಚುವರಿ ಬಸ್

|
Google Oneindia Kannada News

ಬೆಂಗಳೂರು, ಏಪ್ರಿಲ್ 12; ಸಾಲು-ಸಾಲು ರಜೆಗಳ ಹಿನ್ನಲೆಯಲ್ಲಿ ಕೆಎಸ್ಆರ್‌ಟಿಸಿ ಹೆಚ್ಚುವರಿ ಬಸ್‌ಗಳ ಸಂಚಾರವನ್ನು ನಡೆಸುತ್ತಿದೆ. ವಿಶು ಮತ್ತು ಈಸ್ಟರ್ ಹಬ್ಬಗಳ ಪ್ರಯುಕ್ತ ಕೇರಳ ರಾಜ್ಯಕ್ಕೆ ಸಹ ಹೆಚ್ಚಿನ ಬಸ್ಸುಗಳನ್ನು ಓಡಿಸಲಾಗುತ್ತಿದೆ.

ಏಪ್ರಿಲ್ 14 ರಿಂದ ಸಾಲು ಸಾಲು ರಜೆ ಇದೆ. ಏಪ್ರಿಲ್ 14 ಮಹಾವೀರ ಜಯಂತಿ, ಏಪ್ರಿಲ್ 15 ಗುಡ್ ಫ್ರೈಡೆ, ಏಪ್ರಿಲ್ 16 ಶನಿವಾರ ಮತ್ತು ಏಪ್ರಿಲ್‌ 17 ಭಾನುವಾರವಾಗಿದ್ದು ಸರಣಿ ರಜೆ ಸಿಗಲಿದೆ.

 Bank Holidays in April 2022: ಏಪ್ರಿಲ್‌ನಲ್ಲಿ 15 ದಿನ ಬ್ಯಾಂಕ್‌ ರಜೆ Bank Holidays in April 2022: ಏಪ್ರಿಲ್‌ನಲ್ಲಿ 15 ದಿನ ಬ್ಯಾಂಕ್‌ ರಜೆ

ಈ ಹಿನ್ನಲೆಯಲ್ಲಿ ಏಪ್ರಿಲ್ 13ರಿಂದ ಕೆಎಸ್ಆರ್‌ಟಿಸಿ ಬೆಂಗಳೂರಿನಿಂದ 300 ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತಿದೆ. ಏಪ್ರಿಲ್ 17ರಂದು ರಾಜ್ಯದ ವಿವಿಧ ಜಿಲ್ಲೆಗಳು, ಅಂತರರಾಜ್ಯದಿಂದ ಬೆಂಗಳೂರಿಗೆ ವಿಶೇಷ ಬಸ್ ಓಡಿಸಲಾಗುತ್ತದೆ.

ಹೊಸಪೇಟೆ-ಹರಿಹರ, ಬಳ್ಳಾರಿ-ಹೊಸಪೇಟೆ ಡೆಮು ರೈಲು; ವೇಳಾಪಟ್ಟಿಹೊಸಪೇಟೆ-ಹರಿಹರ, ಬಳ್ಳಾರಿ-ಹೊಸಪೇಟೆ ಡೆಮು ರೈಲು; ವೇಳಾಪಟ್ಟಿ

Series Of Holiday KSRTC To Run 300 Additional Buses From Bengaluru

ಎಲ್ಲಿಗೆ ಬಸ್‌ಗಳ ಸಂಚಾರ?; ಬೆಂಗಳೂರಿನಿಂದ ಬೆಳಗಾವಿ, ಕುಂದಾಪುರ, ಧರ್ಮಸ್ಥಳ, ಗೋಕರ್ಣ, ಹೊರನಾಡು, ಮಂಗಳೂರು, ಮಡಿಕೇರಿ, ಶೃಂಗೇರಿ, ಉಡುಪಿ, ಕುಕ್ಕೆ ಸುಬ್ರಮಣ್ಯ ಮುಂತಾದ ಸ್ಥಳಗಳಿಗೆ ಹೆಚ್ಚುವರಿ ಬಸ್ ಸಂಚಾರ ನಡೆಸಲಿದೆ.

ಮೊಬೈಲ್ ಮೂಲಕವೇ ಸಿಗಲಿದೆ ಬಿಎಂಟಿಸಿ ಬಸ್ ಪಾಸ್ ಮೊಬೈಲ್ ಮೂಲಕವೇ ಸಿಗಲಿದೆ ಬಿಎಂಟಿಸಿ ಬಸ್ ಪಾಸ್

ತಮಿಳುನಾಡಿನ ಮಧುರೈ, ಕೊಡೈಕೆನಾಲ್, ಊಟಿ, ತಂಜಾವೂರ್, ಕೊಯಮತ್ತೂರುಗೆ ಬಸ್ ಸಂಚಾರ ನಡೆಸಲಿದೆ. ವಿಜಯವಾಡ, ಹೈದರಾಬಾದ್, ನೆಲ್ಲೂರು, ಶಿರಡಿ, ಪಣಜಿ, ಪುದುಚೇರಿ ಸೇರಿದಂತೆ ತಮಿಳುನಾಡು, ಆಂಧ್ರ ಪ್ರದೇಶ, ಗೋವಾ, ಮಹಾರಾಷ್ಟ್ರ ರಾಜ್ಯಗಳ ವಿವಿಧ ನಗರಗಳಿಗೆ ಬಸ್‌ಗಳು ಸಂಚಾರ ನಡೆಸಲಿವೆ ಎಂದು ಪ್ರಕಟಣೆ ತಿಳಿಸಿದೆ.

ಈಸ್ಟರ್ ಮತ್ತು ಗುಡ್ ಫ್ರೈಡೆ ಅಂಗವಾಗಿ ಕೇರಳದ ಕಣ್ಣೂರು, ತಿರುವನಂತಪುರಂ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಕೊಯಿಕ್ಕೋಡ್, ಕಾಸರಗೋಡು ಮುಂತಾದ ಸ್ಥಳಗಳಿಗೆ ಬಸ್ ಓಡಿಸಲಾಗುತ್ತದೆ.

ಪ್ರಯಾಣಿಕರ ಕೆಎಸ್ಆರ್‌ಟಿಸಿ ವೆಬ್ ಸೈಟ್ ಮೂಲಕ ಮುಂಗಡ ಟಿಕೆಟ್ ಬುಕ್‌ ಮಾಡಿಕೊಂಡು ಸಂಚಾರ ನಡೆಸಬಹುದಾಗಿದೆ. ಈ ಹೆಚ್ಚುವರಿ ಬಸ್‌ಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ನೈಋತ್ಯ ರೈಲ್ವೆಯಿಂದ ವಿಶೇಷ ರೈಲು; ಸಾಲು ಸಾಲು ರಜೆ ಹಿನ್ನಲೆಯಲ್ಲಿ ನೈಋತ್ಯ ರೈಲ್ವೆ ಸಹ ವಿಶೇಷ ರೈಲನ್ನು ಓಡಿಸಲಾಗುತ್ತದೆ ಎಂದು ಘೋಷಣೆ ಮಾಡಿದೆ.

ರೈಲು ನಂಬರ್ 06597/06598 ಯಶವಂತಪುರ-ಹುಬ್ಬಳ್ಳಿ-ಯಶವಂತಪುರ ಸೂಪರ್ ಫಾಸ್ಟ್ ಬೇಸಿಗೆ ವಿಶೇಷ ರೈಲು ಒಂದು ಟ್ರಿಪ್ ಮಾತ್ರ ಸಂಚಾರ ನಡೆಸಲಿದೆ.

ರೈಲು ನಂಬರ್ 06597 ಯಶವಂತಪುರ-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲು ಏಪ್ರಿಲ್ 13ರಂದು ರಾತ್ರಿ 9.50ಕ್ಕೆ ಯಶವಂತಪುರದಿಂದ ಹೊರಡಲಿದೆ. ಮರುದಿನ ಬೆಳಗ್ಗೆ 5.30ಕ್ಕೆ ಹುಬ್ಬಳ್ಳಿಗೆ ತಲುಪಲಿದೆ.

ರೈಲು ನಂಬರ್ 06598 ಹುಬ್ಬಳ್ಳಿ-ಯಶವಂತಪುರ ಸೂಪರ್ ಫಾಸ್ಟ್ ರೈಲು ಹುಬ್ಬಳ್ಳಿಯಿಂದ ಏಪ್ರಿಲ್17ರಂದು 8.40ಕ್ಕೆ ಹೊರಡಲಿದೆ. ಮರುದಿನ ಬೆಳಗ್ಗೆ 5 ಗಂಟೆಗೆ ಯಶವಂತಪುರಕ್ಕೆ ಆಗಮಿಸಲಿದೆ.

ಡೆಮು ರೈಲುಗಳ ಸಂಚಾರ; ನೈಋತ್ಯ ರೈಲ್ವೆ ಹುಬ್ಬಳ್ಳಿ-ಹೊಸಪೇಟೆ ನಡುವೆ ವಿಶೇಷ ಪ್ಯಾಸೆಂಜರ್ ಡೆಮು ರೈಲು ವಾರದಲ್ಲಿ ಒಂದು ದಿನ ಸಂಚಾರ ನಡೆಸಲಿದೆ. ರೈಲು ನಂಬರ್ 07394 ಹುಬ್ಬಳ್ಳಿ-ಹೊಸಪೇಟೆ (ಪ್ರತಿ ಭಾನುವಾರ) ಏಪ್ರಿಲ್ 10 ರಿಂದ ಅಕ್ಟೋರಬರ್ 9ರ ತನಕ ಸಂಚಾರ ನಡೆಸಲಿದೆ.

ರೈಲು ನಂಬರ್ 07393 ಹೊಸಪೇಟೆ-ಹುಬ್ಬಳ್ಳಿ (ಪ್ರತಿ ಶನಿವಾರ) ಏಪ್ರಿಲ್ 16 ರಿಂದ ಅಕ್ಟೋಬರ್ 15ರ ತನಕ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ.

English summary
Karnataka State Road Transport Corporation (KSRTC) to run 300 additional buses from April 13 to 17 due to series of holiday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X