ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಾಪಕ್ಕೆ ಪ್ರತ್ಯೇಕ ಟಿವಿ ಚಾನೆಲ್, ದೆಹಲಿಗೆ ಭೇಟಿ

|
Google Oneindia Kannada News

ಬೆಂಗಳೂರು, ಜುಲೈ 20 : ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳನ್ನು ನೇರ ಪ್ರಸಾರ ಮಾಡುವ ಬೇಸಿಲ್ ಸಂಸ್ಥೆ ಅಳವಡಿಸಿಕೊಂಡಿರುವ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಲು ಡಿ.ಎಚ್.ಶಂಕರಮೂರ್ತಿ ಅವರ ನೇತೃತ್ವದ ನಿಯೋಗ ನವದೆಹಲಿಗೆ ಭೇಟಿ ನೀಡಲಿದೆ. ನಂತರ ಕರ್ನಾಟಕದಲ್ಲಿ ಪ್ರತ್ಯೇಕ ಟಿವಿ ಚಾನೆಲ್ ಆರಂಭಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ.

ಕರ್ನಾಟಕದ ಉಭಯ ಸದನಗಳ ಕಾರ್ಯಕಲಾಪಗಳ ನೇರ ಪ್ರಸಾರಕ್ಕೆ ಪ್ರತ್ಯೇಕ ಚಾನೆಲ್ ಆರಂಭಿಸುವ ಕುರಿತಂತೆ ಸೋಮವಾರ ವಿಧಾನಸೌಧದಲ್ಲಿ ಸಮಾಲೋಚನಾ ಸಭೆ ನಡೆಯಿತು. ಪ್ರಸ್ತುತ ಉಭಯ ಸದನಗಳಲ್ಲಿ ಸಿಸಿ ಟಿವಿ ಕ್ಯಾಮರಾ ಮೂಲಕ ಚಿತ್ರೀಕರಣ ನಡೆಸುವ ಉಪಕರಣಗಳು ಸುಮಾರು 20 ವರ್ಷದಷ್ಟು ಹಳೆಯದಾಗಿದ್ದು, ಅದನ್ನು ಅಭಿವೃದ್ಧಿಪಡಿಸಲು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

dh shankara murthy

ಲೋಕಸಭೆ ಮತ್ತು ರಾಜ್ಯ ಸಭೆ ಕಾರ್ಯಕಲಾಪವನ್ನು ನೇರ ಪ್ರಸಾರ ಮಾಡುವ ಬೇಸಿಲ್ (Broadcast Engineering Consultants India Limited) ಸಂಸ್ಥೆ ಸಭೆಯಲ್ಲಿ ನೇರ ಪ್ರಸಾರದ ತಾಂತ್ರಿಕ ಮಾಹಿತಿಯನ್ನು ಒಳಗೊಂಡ ಪ್ರಾತ್ಯಕ್ಷಿಕೆಯನ್ನು ನೀಡಿತು. [ವಿಧಾನಸಭೆ ಕಲಾಪವನ್ನು ಸರ್ಕಾರಿ ಚಾನೆಲ್ ನಲ್ಲಿ ನೋಡಿ]

ಡಿಜಿಟಲ್ ತಂತ್ರಜ್ಞಾನದ ಮುಖಾಂತರ ವಿಧಾನಮಂಡಲದ ಉಭಯಸದನಗಳ ಕಾರ್ಯಕಲಾಪಗಳನ್ನು ಪ್ರಸಾರ ಮಾಡುವ ಸಲುವಾಗಿ ಬೆಸಿಲ್ ಸಂಸ್ಥೆ ಪ್ರಸ್ತುತಪಡಿಸಿದ ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.

assembly session

ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ, ಪರಿಷತ್ ಸಭಾಪತಿ ಡಿ. ಎಚ್. ಶಂಕರಮೂರ್ತಿ, ಕಾನೂನು ಸಚಿವ ಟಿ. ಬಿ. ಜಯಚಂದ್ರ, ವಾರ್ತಾ ಸಚಿವ ರೋಷನ್ ಬೇಗ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

English summary
Karnataka Legislative Council chairman D.H.Shankara Murthy lead delegation will visit New Delhi to study technologies of the Broadcast Engineering Consultants India Limited which telecast live proceedings of the Lok Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X