ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವ ಮಂತ್ರಾಲಯದ ಹರಿಕಾರ ಸುಯತೀಂದ್ರತೀರ್ಥರ ದೇಹಾಂತ್ಯ

By Mahesh
|
Google Oneindia Kannada News

ರಾಯಚೂರು, ಮಾ.21: ನವ ಮಂತ್ರಾಲಯದ ಹರಿಕಾರ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾಗಿದ್ದ ಹಿರಿಯ ಸ್ವಾಮೀಜಿ ಶ್ರೀಸುಯತೀಂದ್ರ ತೀರ್ಥರು (80) ಗುರುವಾರ ಮಧ್ಯರಾತ್ರಿ 12.10 ರ ನಂತರ ದೇಹ ತ್ಯಜಿಸಿ ಹರಿಪಾದ ಸೇರಿದ್ದಾರೆ ಎಂದು ಶ್ರೀಮಠ ಪ್ರಕಟಿಸಿದೆ. ಶುಕ್ರವಾರ ಬೆಳಗ್ಗೆ 9ರ ಹೊತ್ತಿಗೆ ಶ್ರೀಮಠದ ಪ್ರಾಕಾರದಲ್ಲಿ ನೆರವೇರಿಸಲಾಗಿದೆ. ಶ್ರೀ ಸುಯತೀಂದ್ರ ತೀರ್ಥರ ಗುರುಗಳಾಗಿದ್ದ ಶ್ರೀ ಸುಶಮೀಂದ್ರತೀರ್ಥರ ವೃಂದಾವನ ಸ್ಥಳದ ಪಕ್ಕದಲ್ಲಿಯೇ ಶ್ರೀ ಸುಯತೀಂದ್ರ ತೀರ್ಥರ ವೃಂದಾವನಸ್ಥರಾಗುವ ಧಾರ್ಮಿಕ ವಿಧಿವಿಧಾನ ನೆರವೇರಿಸಲಾಗುತ್ತದೆ ಎಂದು ಶ್ರೀಮಠದ ಸ್ವಾಮೀಜಿಗಳಾದ ಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾಗಿದ್ದ ಸುಯತೀಂದ್ರತೀರ್ಥ ಸ್ವಾಮೀಜಿ ಅವರು ವಯೋಸಹಜ ಅನಾರೋಗ್ಯದ ಕಾರಣದಿಂದ ಮಠದ ಉಸ್ತುವಾರಿಕೆಯನ್ನು ತಮ್ಮ ಉತ್ತರಾಧಿಕಾರಿ ಸುಬುಧೇಂದ್ರತೀರ್ಥ ಸ್ವಾಮೀಜಿ ಅವರಿಗೆ ನೀಡಿದ್ದರು. ಈ ಮೂಲಕ ಆಡಳಿತಾತ್ಮಕ ಕಾರ್ಯಭಾರವನ್ನು ಅಧಿಕೃತವಾಗಿ ಹಸ್ತಾಂತರ ಮಾಡಿದ್ದರು.

ಮಠಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಕಿರಿಯಶ್ರೀಗಳಿಗೆ ಹಿರಿಯ ಶ್ರೀಗಳು ನೀಡುವ ಮೂಲಕ ಮಂತ್ರಾಲಯ ಮಠಕ್ಕೆ ಸಂಬಂಧಿಸಿದ ಎಲ್ಲ ಆಡಳಿತ ಜವಾಬ್ದಾರಿ ವಹಿಸಿಕೊಟ್ಟಿದ್ದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ] ಸುಯತೀಂದ್ರರು ನವ ಮಂತ್ರಾಲಯದ ಹರಿಕಾರ ಎನಿಸಿರುವ ಸುಯತೀಂದ್ರತೀರ್ಥರ ಕುರಿತ ಇನ್ನಷ್ಟು ಮಾಹಿತಿ ಮುಂದೆ ಓದಿ.. ಚಿತ್ರಗಳ ಕೃಪೆ: ‎ರಾಘವೇಂದ್ರಮಠದ ವೆಬ್ ತಾಣ

ಸುಯತೀಂದ್ರರು ನವ ಮಂತ್ರಾಲಯದ ಹರಿಕಾರರು

ಸುಯತೀಂದ್ರರು ನವ ಮಂತ್ರಾಲಯದ ಹರಿಕಾರರು

ಸುಯತೀಂದ್ರರು ನವ ಮಂತ್ರಾಲಯದ ಹರಿಕಾರರು: 2006ರಿಂದ ಅವರು ಶ್ರೀಮಠದ ಪೀಠಾಧಿಪತಿಗಳಾಗಿದ್ದರು. ಪ್ರವಾಹೋತ್ತರದಲ್ಲಿ ನವಮಂತ್ರಾಲಯದ ನಿರ್ಮಾಣದಲ್ಲಿ ತಮ್ಮದೇ ಆದ ರೀತಿಯಲ್ಲಿ ಮಾರ್ಗದರ್ಶನ ನೀಡುವ ಮೂಲಕ ಶ್ರೀಗಳು ಮಂತ್ರಾಲಯದ ಸಮಗ್ರ ಪ್ರಗತಿಯ ಹರಿಕಾರರಾಗಿದ್ದಾರೆ.

ಸುಯತೀಂದ್ರತೀರ್ಥರ ಪೂರ್ವಾಶ್ರಮದ ವಿವರ

ಸುಯತೀಂದ್ರತೀರ್ಥರ ಪೂರ್ವಾಶ್ರಮದ ವಿವರ

ಶ್ರೀ ಸುಯತೀಂದ್ರತೀರ್ಥರು ಪೂರ್ವಾಶ್ರಮದಲ್ಲಿ ಗದಗ ಜಿಲ್ಲೆ ಮುಂಡರಗಿ ಪೇಠಾಲೂರುನವರಾಗಿದ್ದು, ಬಿಎಸ್ಸಿ ಬಿಇಡಿ, ಎಎಂಐಇ ಅಧ್ಯಯನ ಮಾಡಿದ್ದರು. ಆನಂತರದಲ್ಲಿ ಸಾಹಿತ್ಯ, ವೇದ ಶಾಸ್ತ್ರಗಳ ಅಧ್ಯಯನವನ್ನು ಹಾಗೂ ನ್ಯಾಯಸುಧಾ ಮತ್ತಿತರೆ ಧಾರ್ಮಿಕ ವ್ಯಾಸಂಗ ಶ್ರೀ ಸುಯಮೀಂದ್ರತೀರ್ಥರ ಬಳಿ ಮಾಡಿದ್ದರು.

ಬೆಂಗಳೂರಿನ ಶ್ರೀಮಠದ ಧರ್ಮಾಧಿಕಾರಿಯಾಗಿದ್ದರು

ಬೆಂಗಳೂರಿನ ಶ್ರೀಮಠದ ಧರ್ಮಾಧಿಕಾರಿಯಾಗಿದ್ದರು

ಬೆಂಗಳೂರಿನ ಸೀತಾಪತಿ ಅಗ್ರಹಾರದಲ್ಲಿ ಶ್ರೀಮಠದ ಧರ್ಮಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅದೇ ವೇಳೆ ಗುರುಗಳಾಗಿದ್ದ ಶ್ರೀಸುಶಮೀಂದ್ರ ತೀರ್ಥರ ಗಮನಕ್ಕೆ ಬಂದಿದ್ದ ಶ್ರೀಸುಶಿಲೇಂದ್ರಾಚಾರ್ಯರು (ಪೂರ್ವಾಶ್ರಮದಲ್ಲಿ ಶ್ರೀಸುಯತೀಂದ್ರ ತೀರ್ಥರ ಹೆಸರು) ನಂತರದಲ್ಲಿ ಶ್ರೀಮಠದ ಗುರುಗಳ ಆಪ್ತರಾದರು.

ಶ್ರೀ ಸುಯತೀಂದ್ರತೀರ್ಥರಾಗಿ ನಾಮಕರಣ

ಶ್ರೀ ಸುಯತೀಂದ್ರತೀರ್ಥರಾಗಿ ನಾಮಕರಣ

ನಂತರ ಮುಂದೆ ಜುಲೈ 4, 2006ರಲ್ಲಿ ಶ್ರೀಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಸುಶಮೀಂದ್ರತೀರ್ಥರ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಶ್ರೀಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕಗೊಂಡು ಶ್ರೀ ಸುಯತೀಂದ್ರತೀರ್ಥರಾಗಿ ನಾಮಕರಣಗೊಂಡಿದ್ದರು.

ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮ ವಂಶದವರೆ

ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮ ವಂಶದವರೆ

ರಾಘವೇಂದ್ರ ಸ್ವಾಮಿಗಳವರ ನಂತರದಲ್ಲಿ ಮದ್ವಾಚಾರ್ಯರ ಮೂಲ ಸಂಸ್ಥಾನವನ್ನು ಆಳಿದ ಬಹುತೇಕ ಎಲ್ಲರೂ ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮ ವಂಶದವರೇ ಆಗಿರುತ್ತಾರೆ. ಧೀರೇಂದ್ರ ಶ್ರೀಪಾದಂಗಳು ಇವರ ಪೂರ್ವಾಶ್ರಮ ಜೇಷ್ಠ ಸಂತತಿಯಲ್ಲಿ ಅನಂತಾಚಾರ್ಯರು ಹಾಗೂ ಪತ್ನಿ ಪದ್ಮಾವತಿಭಾಯಿ ದಂಪತಿಗೆ ಧೀರೇಂದ್ರಾಚಾರ್ಯ, ಶ್ರೀನಿವಾಸಾಚಾರ್ಯ, ಗುರುರಾಜಾಚಾರ್ಯ, ಶ್ರೀಮತಿ ಅಂಜವ್ವ ಮತ್ತು ಸುಶೀಲೇಂದ್ರಾಚಾರ್ಯ(ಸುಯತೀಂದ್ರತೀರ್ಥರಾದವರು)

English summary
Senior pontiff of the Sri Raghavendra Swamy Mutt at Mantralayam, Suyateendra Teertha Swamiji, passed away on Thursday mid night after a brief illness. He was 80. The body will be interred on the right side of the SRS Mutt. Later a Brindavan will be built and daily pujas will commence said Pontiff Subudhendra Thirtha
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X