ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ತಿಂಗಳ ಬಳಿಕ ಸಚಿವನಾಗುತ್ತೇನೆ: ಬಿ.ಕೆ. ಸಂಗಮೇಶ್ ವಿಶ್ವಾಸ

|
Google Oneindia Kannada News

ಬೆಂಗಳೂರು, ಜನವರಿ 11: ಶಿವಮೊಗ್ಗ ಜಿಲ್ಲೆಯ ಒಬ್ಬ ಶಾಸಕರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಜಿಲ್ಲೆಗೆ ಹೆಚ್ಚಿನ ಪ್ರಾತನಿಧ್ಯ ಸಿಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆ ಎಂದು ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಹೇಳಿದ್ದಾರೆ.

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಸಂಗಮೇಶ್ ಅವರಿಗೆ ಸಂಪುಟ ವಿಸ್ತರಣೆಯಾದ ಸಂದರ್ಭದಲ್ಲಿಯೂ ಸ್ಥಾನ ನೀಡಿಲ್ಲ. ಆದರೆ, ಅವರನ್ನು ಸಮಾಧಾನಗೊಳಿಸಲು ರಾಜ್ಯ ಭೂಸೇನಾ ನಿಗಮದ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರಕ್ಕೆ ಒಲಿಯದ ಸಚಿವ ಸ್ಥಾನ!ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರಕ್ಕೆ ಒಲಿಯದ ಸಚಿವ ಸ್ಥಾನ!

ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿಗುವ ಆಶಾಭಾವನೆ ಹೊಂದಿದ್ದೆ. ಆದರೆ, ಅದು ಕೈಗೂಡಲಿಲ್ಲ. ಅದ ಬದಲಿಗೆ ನಿಗಮ ಮಂಡಳಿಯ ಸ್ಥಾನ ಅಧ್ಯಕ್ಷ ನೀಡಿದ್ದಾರೆ ಎಂದು ಹೇಳಿದರು.

senior leaders assured minister post 20 months after cabinet reshuffle bk sangamesh bhadravati

ಆದರೆ, ಸಚಿವ ಸ್ಥಾನ ಸಿಗದೆ ಇರುವುದಕ್ಕೆ ಯಾವುದೇ ಬೇಸರವಿಲ್ಲ. 20 ತಿಂಗಳ ಬಳಿಕ ಮತ್ತೆ ಸಚಿವ ಸಂಪುಟ ಪುನರ್‌ ರಚನೆ ಆಗಲಿದೆ. ಆಗ ಸಂಪುಟದಲ್ಲಿ ಅವಕಾಶ ನೀಡುವುದಾಗಿ ಪಕ್ಷದ ನಾಯಕರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಅರಣ್ಯಾಧಿಕಾರಿಗೆ ಧಮ್ಕಿ ಆರೋಪ: ಕ್ಷಮೆಯಾಚಿಸಿದ ಶಾಸಕ ಸಂಗಮೇಶ್ವರ್ಅರಣ್ಯಾಧಿಕಾರಿಗೆ ಧಮ್ಕಿ ಆರೋಪ: ಕ್ಷಮೆಯಾಚಿಸಿದ ಶಾಸಕ ಸಂಗಮೇಶ್ವರ್

ಮುಖಂಡರಿಂದ ಭರವಸೆ ಬಂದಿರುವುದರಿಂದ ಪ್ರಸ್ತುತ ಕೊಟ್ಟಿರುವ ಹೊಸ ಜವಾಬ್ದಾರಿಯನ್ನು ಸದ್ಬಳಕೆ ಮಾಡಿಕೊಂಡು ಅದರ ಬಗ್ಗೆ ಗಮನ ಹರಿಸುತ್ತೇನೆ. ಮೂಲ ಸೌಕರ್ಯ ನಿಗಮಕ್ಕೆ ಹೊಸ ರೂಪ ನೀಡಿ ಅಭಿವೃದ್ಧಿಯ ಪರವಾಗಿ ಕೆಲಸ ನಿರ್ವಹಿಸುತ್ತೇನೆ ಎಂದು ಹೇಳಿದರು.

English summary
Bhadravati Congress MLA BK Sangamesh said that, senior leaders of the party has assured him of minister post after the cabinet reshuffle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X