ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಗದ ರಾಜ್ಯಸಭೆ ಟಿಕೆಟ್: ಕಾಂಗ್ರೆಸ್ ತೊರೆದ ಬ್ರಿಜೇಶ್ ಕಾಳಪ್ಪ

|
Google Oneindia Kannada News

ಬೆಂಗಳೂರು, ಜೂ.1: ಕಾಂಗ್ರೆಸ್ ಹಿರಿಯ ನಾಯಕ, ಸುಪ್ರೀಂ ಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಪಕ್ಷ ತೊರೆಯುತ್ತಿರುವ ಪ್ರಮುಖ ನಾಯಕರ ಪಟ್ಟಿಗೆ ಬ್ರಿಜೇಶ್ ಕಾಳಪ್ಪ ಸೇರಿದ್ದು, ಈ ಮೂಲಕ ಕಾಂಗ್ರೆಸ್‌ಗೆ ಬಹುದೊಡ್ಡ ಹಿನ್ನಡೆಯಾಗಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಬರೆದಿರುವ ಬ್ರಿಜೇಶ್ ಕಾಳಪ್ಪ ಪತ್ರದ ಯಥಾವತ್ ಪ್ರತಿಯನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. "ಪಕ್ಷದಲ್ಲಿ ನೀವು ನನಗೆ ಹಲವಾರು ಅವಕಾಶಗಳನ್ನು ಒದಗಿಸಿಕೊಟ್ಟಿರುವುದಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತಿದ್ದೇನೆ. ರಾಷ್ಟ್ರದ ಎಲ್ಲಾ ಭಾಗಗಳಲ್ಲಿ ನಾನು ಪರಿಚಿತ ಮುಖವೆಂದು ಗುರುತಿಸಲ್ಪಟ್ಟಿದ್ದರೆ- ಅದು ನಿಮ್ಮ ಪ್ರೋತ್ಸಾಹದಿಂದ ಸಾಧ್ಯವಾಗಿದೆ. ನಿಮ್ಮ ಆಶೀರ್ವಾದದಿಂದ ನಾನು ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರನಾಗಿ, ಸಚಿವ ಸ್ಥಾನಮಾನಗಳೊಂದಿಗೆ ನೇಮಕಗೊಂಡಿದ್ದೆ. ಅದಕ್ಕಾಗಿ ಧನ್ಯವಾದಗಳು," ಎಂದು ತಿಳಿಸಿದ್ದಾರೆ.

"ನಾನು 2013ರಿಂದಲೂ ಹಿಂದಿ, ಇಂಗ್ಲಿಷ್ ಮತ್ತು ಕನ್ನಡ ಚಾನೆಲ್‌ಗಳಲ್ಲಿ ಪಕ್ಷವನ್ನು ಪ್ರತಿನಿಧಿಸುತ್ತಿದ್ದೇನೆ. ಸುಮಾರು ಒಂದು ದಶಕದ ಕಾಲ ನಾನು 6,497 ಚರ್ಚೆಗಳನ್ನು ನಡೆಸಿದ್ದೇನೆ. ಇದಲ್ಲದೆ, ಪಕ್ಷವು ನನಗೆ ರಾಜಕೀಯ ಕೆಲಸಗಳನ್ನು ನಿಯಮಿತವಾಗಿ ನಿಯೋಜಿಸುತ್ತಿದೆ, ಅದನ್ನು ನಾನು ನನ್ನ ತೃಪ್ತಿಗೆ ತಕ್ಕಂತೆ ನಿರ್ವಹಿಸಿದ್ದೇನೆ. ಟಿವಿ ಚರ್ಚೆಗಳಿಗೆ ಸಂಬಂಧಿಸಿದಂತೆ, ನಾನು ಎಲ್ಲಾ ಸಮಯದಲ್ಲೂ ನನ್ನ ಅತ್ಯುತ್ತಮ ಕೆಲಸವನ್ನು ಮಾಡಿದ್ದೇನೆ. ಅಲ್ಲದೆ, ಯಾವುದೇ ಪೂರ್ವ ತಯಾರಿ ಇಲ್ಲದೆ ಚರ್ಚೆಯಲ್ಲಿ ಎಂದಿಗೂ ಕಾಣಿಸಿಕೊಂಡಿಲ್ಲ. ಪಕ್ಷವನ್ನು ಸಮರ್ಥವಾಗಿ ಮತ್ತು ಯಾವುದೇ ಚರ್ಚೆಗೆ ಸಾಕಷ್ಟು ತಯಾರಿ ಇಲ್ಲದೆ ಎಂದಿಗೂ ಕಾಣಿಸಿಕೊಂಡಿಲ್ಲ" ಎಂದು ಬಿಜೇಶ್ ಕಾಳಪ್ಪ ಹೇಳಿದ್ದಾರೆ.

Senior Leader Brijesh Kalappa resigns from Congress

2014 ಮತ್ತು 2019 ರ ಸೋಲುಗಳ ನಂತರ ಪಕ್ಷಕ್ಕೆ ಅತ್ಯಂತ ಕೆಟ್ಟ ಸಮಯದಲ್ಲೂ, ನಾನು ಎಂದಿಗೂ ಉತ್ಸಾಹದ ಕೊರತೆಯನ್ನು ಅನುಭವಿಸಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ನಾನು ಭಾವೋದ್ರೇಕದ ಕೊರತೆಯನ್ನು ಎದುರಿಸುತ್ತಿದ್ದೇನೆ. ಈ ಪರಿಸ್ಥಿತಿಯಲ್ಲಿ ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ 1997ರಿಂದ ಅಖಿಲ ಭಾರತ ಕಾಂಗ್ರೆಸ್ ಜೊತೆ ಹೊಂದಿದ್ದ ನಂಟು ಬಿಡಿಸಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ಬ್ರಿಜೇಶ್ ಕಾಳಪ್ಪ ಪತ್ರದಲ್ಲಿ ವಿವರಿಸಿದ್ದಾರೆ.

ರಾಜೀನಾಮೆಗೆ ಕಾರಣವೇನು?

ರಾಜ್ಯ ರಾಜಕಾರಣದಲ್ಲೂ ಸಕ್ರಿಯವಾಗಿದ್ದ ಬ್ರಿಜೇಶ್ ಕಾಳಪ್ಪ ರಾಜ್ಯಸಭಾ ಚುನಾವಣೆಯ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದರು. ಕಾಂಗ್ರೆಸ್ ಟಿಕೆಟ್ ತಮಗೆ ದೊರೆಯಬಹುದು ಎಂದು ಪ್ರಯತ್ನವನ್ನೂ ನಡೆಸಿದ್ದರು. ಆದರೆ, ಅಂತಿಮವಾಗಿ ಜೈರಾಮ್ ರಮೇಶ್ ಅವರಿಗೆ ಟಿಕೆಟ್ ಹಂಚಿಕೆಯಾದ್ದರಿಂದ ಬ್ರಿಜೇಶ್ ಕಾಳಪ್ಪ ಪಕ್ಷ ತೊರೆಯುವ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

English summary
Senior Congress leader and Supreme Court lawyer Brijesh Kallappa resigns from Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X