ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಎಸ್ ಅಧಿಕಾರಿ ಕೆ. ಮಥಾಯಿ ಸೇವೆಯಿಂದ ನಿವೃತ್ತಿ

|
Google Oneindia Kannada News

ಬೆಂಗಳೂರು, ಮೇ 31 : ಹಿರಿಯ ಕೆಎಎಎಸ್ ಅಧಿಕಾರಿ ಕೆ. ಮಥಾಯಿ ಸೇವೆಯಿಂದ ನಿವೃತ್ತರಾಗಿದ್ದಾರೆ. ತಮ್ಮ ಹಲವಾರು ದಿಟ್ಟ ಕ್ರಮಗಳಿಂದ ಸರ್ಕಾರವನ್ನು ಹಲವು ಬಾರಿ ಎದುರುಹಾಕಿಕೊಂಡು ಅವರು ಸುದ್ದಿಯಾಗಿದ್ದರು.

14 ವರ್ಷಗಳ ಕಾಲ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದ ಕೆ. ಮಥಾಯಿ ಶನಿವಾರ ಸೇವೆಯಿಂದ ನಿವೃತ್ತರಾದರು. 2006ರಲ್ಲಿ ಅವರು ಶೃಂಗೇರಿಯಲ್ಲಿ ತಹಶೀಲ್ದಾರ್‌ ಆಗಿ ಕರ್ತವ್ಯ ಆರಂಭಿಸಿದ್ದರು.

ಬಿಬಿಎಂಪಿ ವಿರುದ್ಧ ಪೊಲೀಸರಿಗೆ ದೂರು ಕೊಟ್ಟ ಕೆಎಎಸ್ ಅಧಿಕಾರಿ ಮಥಾಯಿ!ಬಿಬಿಎಂಪಿ ವಿರುದ್ಧ ಪೊಲೀಸರಿಗೆ ದೂರು ಕೊಟ್ಟ ಕೆಎಎಸ್ ಅಧಿಕಾರಿ ಮಥಾಯಿ!

ಬಿಬಿಎಂಪಿ ಜಾಹೀರಾತು ಹಗರಣವನ್ನು ಬೆಳಕಿಗೆ ತಂದಿದ್ದ ಕೆ. ಮಥಾಯಿ ಭ್ರಷ್ಟಾಚಾರಕ್ಕೆ ತಡೆ ಹಾಕಿದ ಕಾರಣಕ್ಕಾಗಿಯೇ ಹಲವು ಬಾರಿ ವರ್ಗಾವಣೆಯಾಗಿದ್ದರು. ಕರ್ನಾಟಕದಲ್ಲಿ ಸಕಾಲ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಅವರ ಪಾತ್ರವೂ ಮಹತ್ವದ್ದಾಗಿದೆ.

ಸೈಕಲ್ ಏರಿ ಕಚೇರಿಗೆ ಬಂದ ಕೆಎಎಸ್ ಅಧಿಕಾರಿ ಕೆ.ಮಥಾಯ್!ಸೈಕಲ್ ಏರಿ ಕಚೇರಿಗೆ ಬಂದ ಕೆಎಎಸ್ ಅಧಿಕಾರಿ ಕೆ.ಮಥಾಯ್!

Senior KAS Officer K Mathai Retired

ವಾಯುಪಡೆಯಲ್ಲಿ 19 ವರ್ಷ ಕೆಲಸ ಮಾಡಿದ್ದ ಕೆ. ಮಥಾಯಿ ಅವರು 8 ವರ್ಷ ಮಂಗಳೂರಿನಲ್ಲಿ ವಕೀಲರಾಗಿ ಕೆಲಸ ಮಾಡಿದ್ದರು. ಜೋಯಿಡಾ, ಭಟ್ಕಳ, ಹಿರೇಕೆರೂರು, ಮಡಿಕೇರಿ, ಹಾಸನದಲ್ಲಿಯೂ ಅವರು ತಹಶೀಲ್ದಾರ್ ಆಗಿ ಕೆಲಸ ಮಾಡಿದ್ದರು.

ಬಿಬಿಎಂಪಿ ಜಾಹೀರಾತು ಹಗರಣ ಬೆಳಕಿಗೆ ತಂದ ಮಥಾಯಿ ವರ್ಗಾವಣೆಬಿಬಿಎಂಪಿ ಜಾಹೀರಾತು ಹಗರಣ ಬೆಳಕಿಗೆ ತಂದ ಮಥಾಯಿ ವರ್ಗಾವಣೆ

ಕರ್ನಾಟಕ ಸರ್ಕಾರ ಕಚೇರಿ ಕೆಲಸಕ್ಕೆ ವಾಹನ ನೀಡಲು ನಿರಾಕರಿಸಿದ ಕಾರಣಕ್ಕೆ ಮನೆಯಿಂದ ಎಂ. ಎಸ್. ಬಿಲ್ಡಿಂಗ್‌ನಲ್ಲಿರುವ ಕಚೇರಿಗೆ ಸೈಕಲ್‌ನಲ್ಲಿ ಆಗಮಿಸಿದ್ದರು. ಆಗ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ 2 ಸಾವಿರ ಕೋಟಿ ರೂ. ಹಗರಣವನ್ನು ಅವರು ಬಯಲಿಗೆಳೆದಿದ್ದರು. ಆಗ ಕೆಲವು ಬಿಬಿಎಂಪಿ ಸದಸ್ಯರು, ಜಾಹೀರಾತು ಏಜೆನ್ಸಿಯಾವರು ಕೆ. ಮಥಾಯಿ ಕಚೇರಿಗೆ ನುಗ್ಗಿ ಧಮಕಿ ಹಾಕಿದ್ದರು.

English summary
Karnataka senior KAS Officer K.Mathai retired. He started work as tahsildar of Sringeri taluk in 2006.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X