ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IAS ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆ ಹಿಂದಿವೆಯಾ ಆ ಎರಡು ಕಾರಣಗಳು?

|
Google Oneindia Kannada News

ಬೆಂಗಳೂರು, ಜೂ. 23: ಅಮಾನತುಗೊಂಡಿದ್ದ ಹಿರಿಯ ಐಎಎಸ್ ಅಧಿಕಾರಿ, ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವಾಗ ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಬಿ.ಎಂ. ವಿಜಯ ಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಗರಣದ ತನಿಖೆ ಹಿನ್ನೆಲೆಯಲ್ಲಿ ಅಮಾನತಾಗಿದ್ದ ವಿಜಯ ಶಂಕರ್ ಇನ್ನೂ ನಿವೃತ್ತಿ ಆಗಿರಲಿಲ್ಲ. ಮೃತ ವಿಜಯ ಶಂಕರ್ ಅವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಬೆಂಗಳೂರಿನ ಜಯನಗರದ ತಮ್ಮ ನಿವಾಸದಲ್ಲಿಯೇ ನೇಣಿಗೆ ಶರಣಾಗಿರುವ ವಿಜಯಶಂಕರ್ ಅವರು 1.5 ಕೋಟಿ ರೂ. ಲಂಚ ಪಡೆದ ಆರೋಪ ಎದುರಿಸುತ್ತಿದ್ದರು. ಈ ಹಿಂದೆ ಬೆಂಗಳೂರು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾಗ ಐಎಂಎ ಜ್ಯುವೆಲ್ಲರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಆರೋಪ ಎದುರಿಸುತ್ತಿದ್ದರು. ಇದೀಗ ಅವರ ಆತ್ಮಹತ್ಯೆಯ ಹಿಂದೆ ಎರಡು ಪ್ರಮುಖ ಕಾರಣಗಳಿವೆ ಎನ್ನಲಾಗುತ್ತಿದೆ.

ಕಾರಣ 1

ಕಾರಣ 1

ಕಳೆದ ಜೂನ್ 10 ರಂದು ಕರ್ನಾಟಕ ಸರ್ಕಾರ ವಿಜಯ್ ಶಂಕರ್ ಅವರನ್ನು ಪ್ರಾಸಿಕ್ಯೂಷನ್ ಮಾಡಲು ಅನುಮತಿ ನೀಡಿತ್ತು. ವಿಜಯ್ ಶಂಕರ್ ಅವರೊಂದಿಗೆ ಮೂವರು ಇತರ ಅಧಿಕಾರಿಗಳ ವಿಚಾರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು.

ಐಎಂಎ ಪ್ರಕರಣವನ್ನು ತನಿಖೆ ಮಾಡುತ್ತಿರುವ ಸಿಬಿಐ ಮೊದಲು ಕೇಂದ್ರದಿಂದ ಅನುಮತಿ ಪಡೆದು, ನಂತರ ಕೇಂದ್ರದ ಮುಖಾಂತರವೇ ರಾಜ್ಯ ಸರ್ಕಾರದ ಅನುಮತಿಯನ್ನೂ ಪಡೆದಿತ್ತು. ಎಸ್‌ಐಟಿಯಿಂದ ಬಂಧಿತರಾಗಿದ್ದ ವಿಜಯ್ ಶಂಕರ್ ನಂತರ ಪ್ರಕರಣ ಸಿಬಿಐಗೆ ವರ್ಗಾವಣೆಯಾದ ನಂತರ ಹಲವು ಬಾರಿ ವಿಚಾರಣೆಗೆ ಒಳಗಾಗಿದ್ದರು.

ಹೀಗಾಗಿ ಮತ್ತೊಮ್ಮೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ವಿಚಾರಣೆಗೆ ಅನುಮತಿ ಸಿಕ್ಕ ನಂತರ ವಿಜಯ್ ಶಂಕರ್‌ಗೆ ಮತ್ತಷ್ಟು ಸಂಕಷ್ಟ ಶುರುವಾಗಿತ್ತು. ಜೊತೆಗೆ ಈಗಾಗಲೆ ಪ್ರಕರಣದ ಚಾರ್ಜ್ ಶೀಟ್ ಕೂಡ ಸಿಬಿಐ ಸಲ್ಲಿಸಿದೆ. ಇದರಿಂದ ಆತಂಕಕ್ಕೆ ಒಳಗಾಗಿದ್ದರು ಎನ್ನಲಾಗಿದೆ.

ಐಎಎಸ್ ಅಧಿಕಾರಿ ಬಿ. ಎಂ. ವಿಜಯ್ ಶಂಕರ್ ಆತ್ಮಹತ್ಯೆಐಎಎಸ್ ಅಧಿಕಾರಿ ಬಿ. ಎಂ. ವಿಜಯ್ ಶಂಕರ್ ಆತ್ಮಹತ್ಯೆ

ಕಾರಣ 2

ಕಾರಣ 2

ಇದರೊಂದಿಗೆ ಐಎಂಎ ಪ್ರಕರಣದಿಂದ ಮಾನಸಿಕ ಖಿನ್ನತೆಗೆ ವಿಜಯಶಂಕರ್ ಒಳಗಾಗಿದ್ದರು. ಪದೇ ಪದೇ ವಿಚಾರಣೆ ಎದುರಿಸಿ ಕುಗ್ಗಿದ್ದರು ಎನ್ನಲಾಗಿದೆ. ಕಳೆದ 8-10 ತಿಂಗಳಿಗಳಿಂದ ಮನೆಯಲ್ಲಿಯೇ ಇದ್ದರು.

ಇಂದು ಒಬ್ಬರೇ ಇದ್ದಾಗ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಸಿಬಿಐ ವಿಚಾರಣೆ

ಸಿಬಿಐ ವಿಚಾರಣೆ

ನಂತರ ಬಹುಕೋಟಿ ಹಗರಣ ಎಸ್‌ಐಟಿಯಿಂದ ಸಿಬಿಐಗೆ ವರ್ಗಾವಣೆ ಆದ ಮೇಲೆಯೂ ವಿಜಯಶಂಕರ್ ಸಿಬಿಐ ತನಿಖೆ ಎದುರಿಸಿದ್ದರು. ಆದರೆ ಇದೀಗ ದಿಢೀರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಐಎಎಸ್ ಅಧಿಕಾರಿಯಾಗಿದ್ದ ವಿಜಯಶಂಕರ್ ಆತ್ಮಹತ್ಯೆಯ ಹಿಂದೆ ಈ ಎರಡೂ ಕಾರಣಗಳ ಹೊರತಾಗಿಯೂ ಬೇರೆ ಕಾರಣಗಳು ಇರಬಹುದಾದ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಆತ್ಮಹತ್ಯೆಗೆ ನಿಖರವಾದ ಕಾರಣ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.

ಬಂಧನದ ಭೀತಿಯಲ್ಲಿ ಐಎಎಸ್ ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆ?

ಜಾಮೀನಿನ ಮೇಲೆ ಬಿಡುಗಡೆ

ಜಾಮೀನಿನ ಮೇಲೆ ಬಿಡುಗಡೆ

ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ಮಾಲೀಕ ಮನ್ಸೂರ್ ಖಾನ್‌ನಿಂದ ಒಂದೂವರೆ ಕೋಟಿ ರೂ. ಹಣ ಪಡೆದಿದ್ದ ಆರೋಪ ಮಾಡಲಾಗಿತ್ತು.

ವಿಜಯ್ ಶಂಕರ್ಹಣ ಪಡೆದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದರು. ಐಎಂಎ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ವಿಶೇಷ ತನಿಖಾ ತಂಡ ಬಂಧಿಸಿ ವಿಚಾರಣೆ ನಡೆಸಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

2,000 ಕೋಟಿ ವಂಚನೆ ಜಾಲಕ್ಕೆ ಸಿಲುಕಿಸಿದ ಮೊಹ್ಮದ್ ಮನ್ಸೂರ್ ಖಾನ್ ಯಾರು?2,000 ಕೋಟಿ ವಂಚನೆ ಜಾಲಕ್ಕೆ ಸಿಲುಕಿಸಿದ ಮೊಹ್ಮದ್ ಮನ್ಸೂರ್ ಖಾನ್ ಯಾರು?

ವಿಜಯ್ ಶಂಕರ್ ಪಾತ್ರ

ವಿಜಯ್ ಶಂಕರ್ ಪಾತ್ರ

ಐಎಂಎ ಹಗರಣದ ತನಿಖೆ ಬಳಿಕ ವಿಶೇಷ ತನಿಖಾ ದಳ ಜಿಲ್ಲಾಧಿಕಾರಿಯಾಗಿದ್ದ ವಿಜಯ್‌ ಶಂಕರ್‌ ಅವರನ್ನು ಬಂಧಿಸಿತ್ತು. ಗ್ರಾಮ ಲೆಕ್ಕಿಗ ಮಂಜುನಾಥ್‌, ಎಸಿ ನಾಗರಾಜ್‌ ವಿಚಾರಣೆಯ ಬಳಿಕ ವಿಜಯಶಂಕರ್ ಪಾತ್ರ ಹೊರಬಂದಿತ್ತು. ಬಿಲ್ಡರ್ ಕೃಷ್ಣಮೂರ್ತಿ ಕಡೆಯಿಂದ ಲಂಚ ಪಡೆದ ಆರೋಪ ಎದುರಾಗಿತ್ತು. ತನಿಖೆಯ ಬಳಿಕ ಜುಲೈ 7 2019ರಂದು ಬಿಜಯಶಂಕರ್ ಅವರನ್ನು ಬಂಧಿಸಿ ವಿಚಾರಣೆ ಮಾಡಲಾಗಿತ್ತು.

ಐಎಂಎ ಹಗರಣ; ಸರ್ಕಾರಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ಐಎಂಎ ಹಗರಣ; ಸರ್ಕಾರಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್

ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅವರಿಗೆ ಕ್ಲೀನ್ ಚಿಟ್ ರಿಪೋರ್ಟ್ ಕೊಡಲಾಗಿತ್ತು. ವಿಜಯಶಂಕರ್ ಕೈಕೆಳಗೆ ಕೆಲಸ ಮಾಡುತ್ತಿದ್ದ ಎಸಿ ನಾಗರಾಜ್ ತನಿಖೆ ಮಾಡಿದ ರಿಪೋರ್ಟ್‌ಗೆ ವಿಜಯಶಂಕರ್ ಸಹಿ ಹಾಕಿದ್ದರು. ಸಹಿ ಹಾಕಲು 5 ಕೋಟಿ ರೂ. ಬೇಡಿಕೆ ಇಟ್ಟಿದ್ದ ಆರೋಪವಿತ್ತು. ಆನಂತರ 1.5 ಕೋಟಿ ಹಣ ಪಡೆದುಕೊಂಡಿದ್ದರು. ಬಿಲ್ಡರ್ ಕೃಷ್ಣಮೂರ್ತಿ ತನಿಖೆಯ ವೇಳೆ ಹಣ ತಂದುಕೊಟ್ಟಿದ್ದಾಗಿ ಹೇಳಿದ್ದ ಎಂದು ಆರೋಪಿಸಲಾಗಿತ್ತು.

English summary
Senior IAS officer Vijay Shankar commits suicide as CBI probe intensifie
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X