ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ದುರಂತ ನಾಯಕ ಖರ್ಗೆಗೆ 80 ವರ್ಷ, ಪಾಪ ದುಃಖಿಸುವವರೇ ಇಲ್ಲ!'

|
Google Oneindia Kannada News

ಕರ್ನಾಟಕ ಬಿಜೆಪಿ ಮತ್ತು ಕಾಂಗ್ರೆಸ್ ಐಟಿ ಘಟಕದ ಟ್ವೀಟ್ ಸಮರ ಮುಂದುವರಿಯುತ್ತಲೇ ಇದೆ. ಅವರು ಇವರ ಕಾಲೆಳೆದರೆ, ಇವರು ಅವರ ಕಾಲೆಳೆಯಲು ಒದೊಂದು ವಿಚಾರವನ್ನು ಕೈಗೆತ್ತಿಗೊಳ್ಳುತ್ತಾರೆ.

ಸಂಸತ್ತಿನ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಸಮನ್ಸ್ ಜಾರಿಯಾಗಿದೆ. ಸೋನಿಯಾ ಗಾಂಧಿ ಕುಟುಂಬ ಪ್ರಧಾನ ಪಾಲುದಾರಿಕೆಯನ್ನು ಹೊಂದಿರುವ 'ಯಂಗ್ ಇಂಡಿಯನ್' ಕಚೇರಿಗೆ ಬೀಗ ಜಡಿದಿದ್ದ ಇಡಿ, ಖರ್ಗೆಯವರನ್ನು ವಿಚಾರಣೆ ನಡೆಸಿದೆ.

ಈ ವರ್ಷ ಇಡಿ ರೇಡ್ ಆದ ದೊಡ್ಡದೊಡ್ಡವರು; ಜಪ್ತಿಯಾದ ಹಣ ಸಿಕ್ಕಾಪಟ್ಟೆಈ ವರ್ಷ ಇಡಿ ರೇಡ್ ಆದ ದೊಡ್ಡದೊಡ್ಡವರು; ಜಪ್ತಿಯಾದ ಹಣ ಸಿಕ್ಕಾಪಟ್ಟೆ

ಗುರುವಾರ (ಆ 4) ಸುಮಾರು ಎಂಟು ತಾಸು ವಿಚಾರಣೆಯನ್ನು ಖರ್ಗೆ ಎದುರಿಸಬೇಕಾಯಿತು. ಈ ಸಂಬಂಧ, ಸಂಸತ್ತಿನ ಹೊರಗೆ ಮತ್ತು ಒಳಗೆ ಕಾಂಗ್ರೆಸ್ ಪ್ರತಿಭಟನೆಯನ್ನು ನಡೆಸಿತು. ಸದನ ನಡೆಯುತ್ತಿರಬೇಕಾದರೆ ಸಮನ್ಸ್ ಬಂದರೆ, ಅಧಿಕಾರಿಗಳ ಬಳಿ ಹೋಗಬೇಕೋ ಅಥವಾ ಕಲಾಪದ ಕರ್ತವ್ಯವನ್ನು ನಿರ್ವಹಿಸಬೇಕೋ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಈಗ, ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿ ಐಟಿ ಘಟಕ ಸಾಲುಸಾಲು ಟ್ವೀಟ್ ಅನ್ನು ಮಾಡಿದೆ. ಪಾಪ.. ಮಲ್ಲಿಕಾರ್ಜುನ ಖರ್ಗೆಯವರನ್ನು ಕೇಳುವವರೇ ಇಲ್ಲ. ಯಾಕೆ, ದಲಿತ ನಾಯಕ ಎನ್ನುವ ಕಾರಣಕ್ಕಾಗಿಯಾ? ಎಂದು ಬಿಜೆಪಿ, ಕೆಪಿಸಿಸಿಯ ಕಾಲೆಳೆದಿದೆ.

Breaking: ಖರ್ಗೆ ಹಾಜರಿ; ಯಂಗ್ ಇಂಡಿಯನ್ ಕಚೇರಿಯಲ್ಲಿ ಇಡಿ ಶೋಧBreaking: ಖರ್ಗೆ ಹಾಜರಿ; ಯಂಗ್ ಇಂಡಿಯನ್ ಕಚೇರಿಯಲ್ಲಿ ಇಡಿ ಶೋಧ

 ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸುವ ಮೂಲಕ ಬಿಜೆಪಿ ಲೇವಡಿ

ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸುವ ಮೂಲಕ ಬಿಜೆಪಿ ಲೇವಡಿ

"ನಕಲಿ ಗಾಂಧಿಗಳು ತನಿಖಾ ಸಂಸ್ಥೆಯ ಎದುರು ವಿಚಾರಣೆಗೆ ಹಾಜರಾದಾಗ ಕಾಂಗ್ರೆಸ್‌ ಪಕ್ಷ ಆಕಾಶ ಭೂಮಿ ಒಂದಾಗುವಂತೆ ಪ್ರತಿಭಟಿಸಿತು. ಆದರೆ ಈಗ ದಲಿತ ನಾಯಕ, ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಜಾರಿ ನಿರ್ದೇಶನಾಲಯದ ಎದುರು ಕುಳಿತಾಗ ಕಾಂಗ್ರೆಸ್‌ ದಿವ್ಯ ಮೌನ ಅನುಸರಿಸುತ್ತಿದೆ. ಏಕೆ ಈ ದ್ವಂದ್ವ ನೀತಿ?"ಎಂದು ಕರ್ನಾಟಕ ಬಿಜೆಪಿಯ ಐಟಿ ಘಟಕ, ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸುವ ಮೂಲಕ ಲೇವಡಿ ಮಾಡಿದೆ.

 ದುರಂತ ನಾಯಕ ಖರ್ಗೆ 80 ವರ್ಷ ದಾಟಿದ್ದಾರೆ

ದುರಂತ ನಾಯಕ ಖರ್ಗೆ 80 ವರ್ಷ ದಾಟಿದ್ದಾರೆ

ಇನ್ನೊಂದು ಟ್ವೀಟ್ ಮಾಡಿರುವ ಬಿಜೆಪಿ, "ಸಿದ್ದರಾಮಯ್ಯ, ಡಿಕೆಶಿ ಆದಿಯಾಗಿ ಕಾಂಗ್ರೆಸ್‌ ನಾಯಕರೆಲ್ಲರೂ 75 ರ ಈ ಇಳಿ ಹರೆಯದಲ್ಲೂ ಸೋನಿಯಾ ED ವಿಚಾರಣೆಯ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮರುಕ ಪಟ್ಟರು. ದುರಂತ ನಾಯಕ ಖರ್ಗೆ 80 ವರ್ಷ ದಾಟಿದ್ದಾರೆ, ದುಃಖಿಸುವವರೇ ಇಲ್ಲ! ದಲಿತ ಎಂಬ ಕಾರಣಕ್ಕಾಗಿ ಇಷ್ಟೊಂದು ನಿಕೃಷ್ಟವೇ?" ಎಂದು ಬಿಜೆಪಿ ಕರ್ನಾಟಕ ಐಟಿ ಸೆಲ್ ಟ್ವೀಟ್ ಮಾಡುವ ಮೂಲಕ ದಲಿತ ಕಾರ್ಡ್ ಅನ್ನು ಎಳೆದು ತಂದಿದೆ.

 ಖರ್ಗೆ ತಮ್ಮ 80 ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ

ಖರ್ಗೆ ತಮ್ಮ 80 ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ

"ಸೋನಿಯಾ ಗಾಂಧಿ ಅವರನ್ನು #ED ವಿಚಾರಣೆ ನಡೆಸುವ ಕಾರಣದಿಂದ ಮಲ್ಲಿಕಾರ್ಜುನ ಖರ್ಗೆ ತಮ್ಮ 80 ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ. ನಕಲಿ ಗಾಂಧಿ ಕುಟುಂಬಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಿರುವ ದಲಿತ ನಾಯಕ ಖರ್ಗೆ ಅವರನ್ನು ತನಿಖೆ ನಡೆಸುತ್ತಿರುವಾಗ ಕಾಂಗ್ರೆಸ್‌ ಪಕ್ಷ ಮೌನವಾಗಿದೆ. ಏಕೆ ಈ ತಾರತಮ್ಯ?" ಎಂದು ಬಿಜೆಪಿ ಇನ್ನೊಂದು ಟ್ವೀಟ್ ಮೂಲಕ ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದೆ.

 ದೇಶದಲ್ಲಿ ನಾಲ್ಕು ಜನರ ಸರ್ವಾಧಿಕಾರವಿದೆ

ದೇಶದಲ್ಲಿ ನಾಲ್ಕು ಜನರ ಸರ್ವಾಧಿಕಾರವಿದೆ

"70 ವರ್ಷಗಳ ಕಾಲ ಈ ದೇಶವನ್ನು ಕಟ್ಟಲಾಗಿದೆ. ಆದರೆ ಕೇವಲ 8 ವರ್ಷಗಳಲ್ಲಿ ಅದನ್ನು ನಾಶ ಮಾಡಲಾಗಿದೆ. ಈಗ ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲ. ದೇಶದಲ್ಲಿ ನಾಲ್ಕು ಜನರ ಸರ್ವಾಧಿಕಾರವಿದೆ. ನಾವು ಬೆಲೆ ಏರಿಕೆ, ನಿರುದ್ಯೋಗ, ವಿಭಜನಾ ನೀತಿ ಸೇರಿದಂತೆ ಜನರಿಗೆ ಸಂಬಂಧಿಸಿದ ವಿಷಯಗಳ ಮೇಲೆ ಸದನದ ಒಳಗೂ - ಹೊರಗೂ ಚರ್ಚೆ ಮಾಡಲು ಬಯಸುತ್ತೇವೆ. ಆದರೆ ಈ ಸರ್ಕಾರ ನಮಗೆ ಸದನದಲ್ಲಿ ಮಾತನಾಡಲು ಬಿಡುತ್ತಿಲ್ಲ. ಚರ್ಚೆಗೆ ಅವಕಾಶ ನೀಡುವುದಿಲ್ಲ, ಮಾತನಾಡಿದರೆ ನಮ್ಮನ್ನು ಬಂಧಿಸುತ್ತಾರೆ. ಇದು ದೇಶದ ಸದ್ಯದ ಪರಿಸ್ಥಿತಿ" ಎಂದು ಕೆಪಿಸಿಸಿ ಐಟಿ ಘಟಕ, ರಾಹುಲ್ ಗಾಂಧಿಯವರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದೆ.

Recommended Video

Rohit Sharma ಅನುಪಸ್ಥಿತಿಯಲ್ಲಿ ಭಾರತ ತಂಡಕ್ಕೆ ಹೊಸ ನಾಯಕ | *Cricket | OneIndia Kannada

English summary
Senior Congress Leader Mallikarjun Kharge ED Drilling, BJP Tweet. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X