• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇಂದ್ರ ಮಾಜಿ ಸಚಿವ ಸಿ.ಕೆ.ಜಾಫರ್ ಪರಿಚಯ

|

ಬೆಂಗಳೂರು, ನವೆಂಬರ್ 25 : ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಷರೀಫ್ ವಿಧಿವಶರಾಗಿದ್ದಾರೆ. ಕರ್ನಾಟಕ ಕಾಂಗ್ರೆಸ್ ಹಿರಿಯ ನಾಯಕರೊಬ್ಬರನ್ನು ಕಳೆದುಕೊಂಡಿದೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಇದು ಪಕ್ಷಕ್ಕೆ ಹಿನ್ನಡೆ ತಂದಿದೆ.

ಚಳ್ಳಕೆರೆ ಕರೀಂ ಜಾಫರ್ ಷರೀಫ್ (ಸಿ.ಕೆ.ಜಾಫರ್ ಷರೀಫ್) ಸಂಸದರಾಗಿ, ರೈಲ್ವೆ ಸಚಿವರಾಗಿ ರಾಜ್ಯದ ಜನರಿಗೆ ಚಿರಪರಿಚಿತರು. ರೈಲ್ವೆ ಮಾರ್ಗಗಳ ಅಭಿವೃದ್ಧಿ, ಗೇಜ್ ಪರಿವರ್ತನೆ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ.

ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ನಿಧನ

ಯಲಹಂಕ ರೈಲ್ವೆ ನಿಲ್ದಾಣದ ಸಮೀಪದ ರೈಲು ಮತ್ತು ಗಾಲಿ ಕಾರ್ಖಾನೆ ಸ್ಥಾಪನೆ ಹಿಂದೆ ಜಾಫರ್ ಷರೀಫ್ ಶ್ರಮವಿದೆ. ಕಾಂಗ್ರೆಸ್‌ ಪಕ್ಷದಲ್ಲಿ ಇಂದಿರಾ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಜಾಫರ್ ಷರೀಫ್ ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.

ಪಿ.ವಿ.ನರಸಿಂಹರಾವ್ ಅವರು ಪ್ರಧಾನಿಯಾಗಿದ್ದಾಗ (1991-1995) ಸಿ.ಕೆ.ಜಾಫರ್ ಷರೀಫ್ ರೈಲ್ವೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2004ರ ಲೋಕಸಭೆ ಚುನಾವಣೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಸಾಂಗ್ಲಿಯಾನ ವಿರುದ್ಧ ಸೋಲು ಅನುಭವಿಸಿದ್ದರು.

ಚಿತ್ರದುರ್ಗದವರು

ಚಿತ್ರದುರ್ಗದವರು

* ನವೆಂಬರ್ 3,1933ರಲ್ಲಿ ಜನನ

* ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಹುಟ್ಟೂರು

* ಎಸ್.ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್‌ ಸೇರ್ಪಡೆ

ಚಳವಳಿ ನೋಡಿ ರಾಜಕೀಯಕ್ಕೆ

ಚಳವಳಿ ನೋಡಿ ರಾಜಕೀಯಕ್ಕೆ

* ತಂದೆ ಚಳ್ಳಕೆರೆಯ ದೊಡ್ಡೇರಿ ಗ್ರಾಮದ ಸಿ.ಅಬ್ದುಲ್ ಕರೀಮ್

* ಮೆಟ್ರುಕ್ಯುಲೇಷನ್ ತನಕ ಶಿಕ್ಷಣ

* ಸ್ವಾತಂತ್ರ್ಯ ಚಳವಳಿ ನೋಡಿ ರಾಜಕೀಯದತ್ತ ಆಕರ್ಷಣೆ

* ನಿಜಲಿಂಗಪ್ಪ ಗರಡಿಯಲ್ಲಿ ಪಳಗಿದರು

* ನಿಜಲಿಂಗಪ್ಪ ಮುಖ್ಯಮಂತ್ರಿಯಾದ ಮೇಲೆ ಬೆಂಗಳೂರಿಗೆ ಬಂದರು

ಮಾಜಿ ಸಚಿವ ಜಾಫರ್ ಷರೀಫ್ ಅಗಲಿಕೆಗೆ ಗಣ್ಯರ ಕಂಬನಿ

ಕಾಂಗ್ರೆಸ್ ಇಬ್ಬಾಗವಾಯಿತು

ಕಾಂಗ್ರೆಸ್ ಇಬ್ಬಾಗವಾಯಿತು

* ಕಾಂಗ್ರೆಸ್‌ ಇಬ್ಬಾಗವಾದಾಗ ನಿಜಲಿಂಗಪ್ಪ ಅವರ ಜೊತೆ ಹೋಗಲಿಲ್ಲ

* ಇದರಿಂದಾಗಿ ಇಂದಿರಾ ಗಾಂಧಿ ಅವರ ಮೆಚ್ಚುಗೆಗೆ ಕಾರಣದರು

* 1971ರಲ್ಲಿ ಬೆಂಗಳೂರು ದಕ್ಷಿಣದಿಂದ ಸಂಸದರಾಗಿ ಆಯ್ಕೆ

* 1991-1995ರ ತನಕ ರೈಲ್ವೆ ಸಚಿವರಾಗಿ ಕಾರ್ಯ ನಿರ್ವಹಣೆ

ಪುತ್ರರನ್ನು ಕಳೆದುಕೊಂಡರು

ಪುತ್ರರನ್ನು ಕಳೆದುಕೊಂಡರು

* 1999ರಲ್ಲಿ ಕಿರಿಯ ಪುತ್ರ ನಿಧನ

* 2008ರಲ್ಲಿ ಪತ್ನಿ ನಿಧನ

* 2009ರಲ್ಲಿ ಹಿರಿಯ ಪುತ್ರ ನಿಧನ

ಸಂಸದರಾಗಿ ಆಯ್ಕೆ

ಸಂಸದರಾಗಿ ಆಯ್ಕೆ

* 1971ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆ

* 1977ರಲ್ಲಿ 2ನೇ ಬಾರಿಗೆ ಸಂಸತ್‌ಗೆ ಆಯ್ಕೆ

* 1980ರಲ್ಲಿ 3ನೇ ಬಾರಿಗೆ ಆಯ್ಕೆ

* 1984 4ನೇ ಬಾರಿಗೆ ಆಯ್ಕೆ, ನೀರಾವರಿ ಖಾತೆ ರಾಜ್ಯ ಸಚಿವ ಸ್ಥಾನ

* 1988-89 ಕಲ್ಲಿದ್ದಲು ಖಾತೆ ರಾಜ್ಯ ಸಚಿವ ಖಾತೆ ಹೊಣೆ

* 1989 ಲೋಕಸಭೆಗೆ 5ನೇ ಬಾರಿಗೆ ಆಯ್ಕೆ

* 1991-95 ಲೋಕಸಭೆಗೆ 6ನೇ ಬಾರಿಗೆ ಆಯ್ಕೆ ರೈಲ್ವೆ ಖಾತೆ ಹೊಣೆ

* 2004ರಲ್ಲಿ ಪರಾಭವವ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Union railway minister C.K.Jaffer (85) Sharief died at a hospital in Bengaluru on November 25, 2018. He was admitted to a private hospital few days ago after he collapsed while getting into his car. Here is a profile.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more