ವಧುವರರಿಂದ ಪೂಜಾ ಸಾಮಗ್ರಿವರೆಗೆ ಎಲ್ಲವೂ ಬೆರಳ ತುದಿಯಲ್ಲಿ!

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 07 : ಈಗ ಆನ್‌ಲೈನ್‌ನಲ್ಲಿ ಮದುವೆಗೆ ವಧು-ವರರಿಂದ ಹಿಡಿದು ಮನೆಯ ದಿನ ನಿತ್ಯದ ದಿನಸಿವರೆಗೆ ಎಲ್ಲವೂ ಸಿಗುತ್ತದೆ. ಸದ್ಯ, ದಿನನಿತ್ಯದ ದೇವರ ಪೂಜೆಗೆ ಅವಶ್ಯಕವಾಗಿರುವ ಪೂಜಾ ಸಾಮಾಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ವಿನೂತನ ಸೇವೆಗೆ ಸೆಂಡ್ ಮೈ ಗಿಫ್ಟ್ ಚಾಲನೆ ನೀಡಿದೆ.

ಸೆಂಡ್ ಮೈ ಗಿಫ್ಟ್ dailypooja.sendmygift.com ಎಂಬ ನೂತನ ವೆಬ್ ಸೈಟ್ ಆರಂಭಿಸಿದ್ದು, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಭಾನುವಾರ ನೂತನ ವೆಬ್‌ಸೈಟ್‌ಗೆ ಚಾಲನೆ ನೀಡಿದ್ದಾರೆ. 'ಪೂಜಾ ಸಾಮಾಗ್ರಿಗಳನ್ನು ಮನೆಬಾಗಿಲಿಗೆ ತಲುಪಿಸುವ ವಿನೂತನ ಸೇವೆಗೆ ಚಾಲನೆ ನೀಡಿರುವುದು ಬಹಳ ಸಂತಸದ ವಿಷಯ' ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ. [ದೇವಾಲಯಕ್ಕೆ ಹೋಗುವುದರಿಂದ ಏನು ಲಾಭ?]

ಪೂಜಾ ಸಾಮ್ರಾಗಿಗಳನ್ನು ಮನೆ ಬಾಗಿಲಿಗೆ ತಲುಪಿಸಬೇಕೆಂಬುದು ಡೈಲಿಪೂಜಾ.ಕಾಂನ ವ್ಯವಸ್ಥಾಪಕ ನಿರ್ದೇಶಕಿಯಾದ ಡಾ. ಮನದೀಪ್ ಕೌರ್ ಅವರ ಕನಸು. ಡೈಲಿ ಪೂಜಾ ವೆಬ್ ಸೈಟ್ ಆರಂಭಿಸುವ ಮೂಲಕ ಆನ್‌ಲೈನ್ ಶಾಪಿಂಗ್ ಕ್ಷೇತ್ರದಲ್ಲಿ ಅವರು ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದ್ದಾರೆ. [ವಾಟ್ಸಾಪ್ ವಿಶೇಷ : ತಿರುಪತಿ ಶ್ರೀನಿವಾಸ ಮೂರ್ತಿಯ ವಿಸ್ಮಯ]

ಶ್ರೀ ಡಾ. ಆನಂದ ಗುರೂಜಿ, ವಚನಾನಂದ ಸ್ವಾಮೀಜಿ ಮುಂತಾದವರು ಸೆಂಡ್ ಮೈ ಗಿಫ್ಟ್ ಕಂಪನಿಯ ನೂತನ ಪ್ರಯತ್ನಕ್ಕೆ ಶುಭ ಹಾರೈಸಿದ್ದಾರೆ. dailypooja.comನಲ್ಲಿ ಏನು ಸಿಗುತ್ತದೆ? ಎನ್ನುವ ವಿವರ ಚಿತ್ರಗಳಲ್ಲಿ....

ಆನ್‌ಲೈನ್‌ನಲ್ಲಿ ಸಿಗುತ್ತೆ ಪೂಜಾ ಸಾಮಾಗ್ರಿ

ಆನ್‌ಲೈನ್‌ನಲ್ಲಿ ಸಿಗುತ್ತೆ ಪೂಜಾ ಸಾಮಾಗ್ರಿ

ಆನ್‌ಲೈನ್‌ನಲ್ಲಿ ಮದುವೆಗೆ ವಧು-ವರರಿಂದ ಹಿಡಿದು ಮನೆಯ ದಿನ ನಿತ್ಯದ ದಿನಸಿ ವರೆಗೆ ಎಲ್ಲವೂ ಲಭ್ಯವಿದೆ. ಆದರೆ, ನಿತ್ಯದ ಪೂಜೆ, ಹಬ್ಬ, ವಿಶೇಷ ಪೂಜೆ, ಗೃಹ ಪ್ರವೇಶ ಇಂತಹ ಕಾರ್ಯಕ್ರಮಗಳಿಗೆ ಸಾಮಾಗ್ರಿ ಹುಡುಕುವುದು ಕಷ್ಟ. ಆದ್ದರಿಂದ ಸೆಂಡ್ ಮೈ ಗಿಫ್ಟ್ http://dailypooja.sendmygift.com/ ಎಂಬ ವೆಬ್ ಸೈಟ್ ಆರಂಭಿಸಿದೆ.

ಮನೆ ಅಂಗಳಕ್ಕೆ ಸಾಮಾಗ್ರಿ ಬರುತ್ತದೆ

ಮನೆ ಅಂಗಳಕ್ಕೆ ಸಾಮಾಗ್ರಿ ಬರುತ್ತದೆ

ನಿತ್ಯದ ಪೂಜಾ ಕೈಕಂರ್ಯಗಳಿಗೆ ಅಗತ್ಯವಾದ ಹೂವು ಮುಂತಾದ ಪೂಜಾ ದ್ರವ್ಯಗಳನ್ನು ಅರಸಿ ಹೋಗಬೇಕಿತ್ತು. ಸೆಂಡ್ ಮೈ ಗಿಫ್ಟ್ ನಿತ್ಯವು ಪೂಜೆಗೆ ಬೇಕೆಂದ ಹೂವು, ಪೂಜಾ ಸಾಮಾಗ್ರಿಗಳನ್ನು ಕೈಗೆಟಕುವ ದರದಲ್ಲಿ ನಿಮ್ಮ ಮನೆ ಅಂಗಳಕ್ಕೆ ತಲುಪಿಸುವ ಪ್ರಯತ್ನಕ್ಕೆ ಚಾಲನೆ ನೀಡಿದೆ.

ಪುರೋಹಿತರನ್ನು ಬುಕ್ ಮಾಡಬಹುದಾಗಿದೆ

ಪುರೋಹಿತರನ್ನು ಬುಕ್ ಮಾಡಬಹುದಾಗಿದೆ

ಪೂಜೆಗೆ ಬೇಕಾದ ಹೂವು ಮಾತ್ರವಲ್ಲದೇ ವಿಶೇಷ ಪೂಜೆಗಳಿಗೆ ಅಗತ್ಯವಾದ ಸೌಲಭ್ಯವೂ ಇಲ್ಲಿ ಲಭ್ಯವಿದೆ. ಮಗುವಿನ ನಾಮಕರಣ, ಗೃಹಪ್ರವೇಶ, ನವಗ್ರಹ ಶಾಂತಿ ಹೋಮ, ಸತ್ಯನಾರಾಯಣ ಪೂಜೆ ಹೀಗೆ ಯಾವುದೇ ಇರಲಿ ಪೂಜಾ ಸಾಮಾಗ್ರಿ ಮತ್ತು ಪುರೋಹಿತರಿಗೆ ಹುಡುಕುವ ಅಗತ್ಯವಿಲ್ಲ. ನೀವು ದಿನಾಂಕ ನಿಗದಿ ಪಡಿಸಿ, ಬುಕ್ ಮಾಡಿದರೆ ನಿಮ್ಮ ಮನೆ ಬಾಗಿಲಿಗೆ ಪುರೋಹಿತರು ಮತ್ತು ಸಾಮಾಗ್ರಿಗಳನ್ನು ತಲುಪಿಸಲಾಗುತ್ತದೆ.

ವೆಬ್ ಸೈಟ್‌ನಲ್ಲಿ ಏನು ಸಿಗುತ್ತದೆ?

ವೆಬ್ ಸೈಟ್‌ನಲ್ಲಿ ಏನು ಸಿಗುತ್ತದೆ?

40 ರಿಂದ 2000 ರೂ. ವರೆಗೆ ಹೂವು, ಹಾರಗಳು, ಎಲೆ-ಅಡಿಕೆ, ಊದುಬತ್ತಿ-ಕರ್ಪೂರ, ಹೋಮಕುಂಡಗಳು, ವೇದ-ಮಂತ್ರದ ಪುಸ್ತಕಗಳು, ವಿಗ್ರಹಗಳು, ಬುಕ್ ಮತ್ತು ಸಿಡಿಗಳು, ರುದ್ರಾಕ್ಷಿ ಮುಂತಾದ ವಸ್ತುಗಳು ದೊರೆಯುತ್ತವೆ.

ಸಂಪರ್ಕಿಸಲು ವಿಳಾಸ

ಸಂಪರ್ಕಿಸಲು ವಿಳಾಸ

ಡೈಲಿ ಪೂಜಾ ವೆಬ್‌ಸೈಟ್‌ ವಿಳಾಸ http://dailypooja.sendmygift.com/, ಹೆಚ್ಚಿನ ಮಾಹಿತಿಗಾಗಿ 080-46544444 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
To provide fresh pooja items to customers doorsteps every day sendmygift.com launched new website dailypooja.com.
Please Wait while comments are loading...