ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಕ್ತಿ ಎಂಬ ಪೃಥ್ವಿಯ ಮೇಲೆ ಗುರುವೆಂಬ ಬೀಜ

By ಡಾ. ಶಶಿಕಾಂತ ಪಟ್ಟಣ, ಪೂನಾ
|
Google Oneindia Kannada News

ಅಷ್ಟಾವರಣದಲ್ಲಿ ಗುರು ಒಂದು ಪ್ರಮುಖ ಘಟ್ಟ. ಸನಾತನ ಸಂಸ್ಥೆಯ ಗುರುಕುಲದ ವ್ಯವಸ್ಥೆಯ ಗುರು ಪದ್ಧತಿಗೆ ವ್ಯತಿರಿಕ್ತವಾಗಿ ಶರಣರು ಗುರು ಪದವನ್ನು ಕಂಡುಕೊಂಡರು. ಗುರು ಅದು ಸ್ಥಾಯಿ ಭಾವವಲ್ಲ, ಅದು ಸಂಚಾರಿ ಚೇತನ. ಅರಿವಿನ ಪ್ರಜ್ಞೆ .

ಭಕ್ತಿ ಎಂಬ ಪೃಥ್ವಿಯ ಮೇಲೆ, ಗುರುವೆಂಬ ಬೀಜವಂಕುರಿಸಿ
ಲಿಂಗವೆಂಬ ಎಲೆಯಾಯಿತ್ತು ವಿಚಾರವೆಂಬ ಹೂವಾಯಿತ್ತು.
ಆಚಾರವೆಂಬ ಕಾಯಾಗಿತ್ತು, ನಿಷ್ಪತ್ತಿಯೆಂಬ ಹಣ್ಣಾಯಿತ್ತು.
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ - ಬಸವಣ್ಣನವರು.

seed-of-guru-on-earth-of-devotion-an-article-on-vachanas

ಈ ವಚನವನ್ನು ನಾವು ಮತ್ತೆ ಮತ್ತೆ ಅವಲೋಕಿಸುವುದು ಅಗತ್ಯವಾಗಿದೆ.

ಗುರುವೆಂಬ ಬೀಜ ಎಂದರೆ ಏನು? ಬಸವ ಪೂರ್ವ ಯುಗದ ಗುರು ಪದ್ಧತಿಯನ್ನು ಭೌತಿಕ ಗುರುವಿನಿಂದ ಭೌದ್ಧಿಕ ಗುರುವಿಗೆ ಮಾರ್ಪಾಡುಗೊಳಿಸಿ, ಪ್ರತಿಯೊಬ್ಬ ವ್ಯಕ್ತಿಯ ಅರಿವಿನ ಆಳವನ್ನು ಜಾಗೃತಗೊಳಿಸಿ, ಅಂತಹ ಅರಿವನ್ನು ಗುರುವಾಗಿಸಿಕೊಂಡರು ನಮ್ಮ ಶರಣರು.

ಧರ್ಮ ಒಡೆಯಲು ಹೊರಟವರನ್ನು ಬಸವಣ್ಣನೇ ಕ್ಷಮಿಸಲಿ!ಧರ್ಮ ಒಡೆಯಲು ಹೊರಟವರನ್ನು ಬಸವಣ್ಣನೇ ಕ್ಷಮಿಸಲಿ!

ಪೃಥ್ವಿ ಇದು ಧೃಢತೆ ಹಾಗು ಸಂಚಲನದ ಗಟ್ಟಿಮುಟ್ಟಾದ ಸಂಕೇತವಾಗಿದೆ. ಇಂತಹ ಮನವುಳ್ಳ ಭಕ್ತನ ಮನದಲ್ಲಿ ಅರಿವೆಂಬ ಗುರುವು ಬೀಜವಾಗಿ ಅಂಕುರಿಸಿ, ಪಂಚ ಮಹಾಭೂತಗಳ ಶಕ್ತಿಯಿಂದಾಗಿ ಪಂಚೇಂದ್ರಿಯ ಮೂಲಕ ಸಮಷ್ಟಿಯನ್ನು ಗ್ರಹಿಸುವ ಅರಿವಿನ ಅನುಸಂಧಾನಕ್ಕೆ ಲಿಂಗವೆಂಬುದು ಸಾಧನವಾಗಿದೆ.

ಅರಿವಿನ ಬೀಜ ಬಿದ್ದಲ್ಲಿ ಲಿಂಗವೆಂಬ ಎಲೆಯು ವಿಕಸಿತಗೊಂಡಿತು. ಸಸ್ಯದ ಸಮಗ್ರ ಬೆಳವಣಿಗೆಯಲ್ಲಿ ಎಲೆ ಮತ್ತು ಬೇರು ಪ್ರಮುಖ ಪಾತ್ರ ವಹಿಸುತ್ತವೆ.

ಎಲೆಯು ಸೂರ್ಯ ಕಿರಣಗಳಿಂದ ದ್ಯುತಿ ಸಂಶ್ಲೇಷಣೆಗೆ ಕಾರಣವಾಗಿ (PHOTO SYNTHESIS ) ಸಸ್ಯಕ್ಕೆ ಬೇಕಾದ ಆಹಾರವನ್ನು ತಯಾರಿಸುವ ಘಟಕವಾಗಿದೆ.

seed-of-guru-on-earth-of-devotion-an-article-on-vachanas

ಎಲೆಯು ಮೂಡಿದ ಮೇಲೆ ಆಲೋಚನೆಗಳು ಸದ್ವಿಚಾರಗಳು ಹುಟ್ಟಿಕೊಳ್ಳುತ್ತವೆ. ಈ ವಿಚಾರಗಳ ಅರಳುವಿಕೆಯನ್ನು ಬಸವಣ್ಣ ಹೂವಾಗಿ ಕಂಡಿದ್ದಾರೆ. ವಿಚಾರ ಮತ್ತು ಆಚಾರಗಳ ಸಮನ್ವಯತೆಯೇ ಶರಣ ಸಂಸ್ಕೃತಿಯ ಜೀವಾಳ. ಹೀಗಾಗಿ ವಿಚಾರವೆಂಬ ಹೂವು ಆಚಾರವೆಂಬ ಕಾಯಾಗಿ ಪರಿವರ್ತನೆಗೊಳ್ಳುತ್ತದೆ.

ನಂತರ ಪರಿಪೂರ್ಣತೆ ಎಂಬ ನಿಷ್ಪತ್ತಿ ಎಂಬ ಹಣ್ಣಾಗಿ ರೂಪುಗೊಳ್ಳುತ್ತದೆ. ಆ ಹಣ್ಣು ಕೂಡಲ ಸಂಗಮದೇವವೆಂಬ ಜಂಗಮ ಸಮಾಜವು ತನಗೆ ಬೇಕೆಂದು ಆಯ್ಕೆ ಮಾಡಿಕೊಳುತ್ತದೆ. ಸೃಷ್ಟಿಯೊಳಗಿನ ಸಸಿಯ ಬೆಳವಣಿಗೆಯನ್ನು ಭಕ್ತನ ಅಂತರಂಗದ ವಿಕಾಸಕ್ಕೆ ಹೋಲಿಸಿ ಸುಂದರವಾಗಿ ವಿವರಣೆ ನೀಡುವ ಬಸವಣ್ಣನವರು ಸಾರ್ವಕಾಲಿಕ ಗುರು.

ಬಸವ ಜಯಂತಿ 'ಆಚರಣೆ' ಗಿಂತ ವಿಚಾರ ಮೆರವಣಿಗೆಯಾಗಲಿಬಸವ ಜಯಂತಿ 'ಆಚರಣೆ' ಗಿಂತ ವಿಚಾರ ಮೆರವಣಿಗೆಯಾಗಲಿ

ಅರಿವುಳ್ಳವರಿಗೆ ಗುರುವಿನ ಹಂಗೇಕೆ?
ಅರಿವುಳ್ಳವರಿಗೆ ಲಿಂಗದ ಹಂಗೇಕೆ?
ಅರಿವುಳ್ಳವರಿಗೆ ಪಾದೋದಕ ಪ್ರಸಾದದ ಹಂಗೇಕೆ?
ಅರಿವುಳ್ಳವರಿಗೆ ಅಮುಗೇಶ್ವರವನರಿದವನೆಂಬ ಸಂದೇಹವೇಕೆ?

ಕೆಳಸ್ತರದ ಶರಣೆ ಅಮುಗೆ ರಾಯಮ್ಮ ಅರಿವುಳ್ಳವರಿಗೆ ಗುರುವಿನ ಹಂಗೇಕೆ? ಎಂದು ಕೇಳುವುದರ ಮೂಲಕ ಸ್ಥಾಯಿಭಾವದ ಬಾಹ್ಯ ಗುರುವನ್ನು ಸಂಪೂರ್ಣ ಅಲ್ಲಗಳೆದಿದ್ದಾಳೆ. ಗುರು ಮನೋವಿಕಾಸದ ಮಾರ್ಗ. ದಾಸ್ಯತ್ವದ ಶ್ರೇಣೀಕೃತ ವ್ಯವಸ್ಥೆ ಅಲ್ಲ. ಗುರು ಪಾದ ಅಂದ್ರೆ ಜ್ಞಾನದ ಸಂಚಲನತೆ.

15ನೇ ಶತಮಾನದ ಶೂನ್ಯ ಸಂಕಲನಾಕಾರರು ಮತ್ತು ಕೆಲ ಕಾಳಾಮುಖಿ ಶೈವರು ತಮ್ಮ ಅನುಕೂಲಕ್ಕೆ ಮತ್ತೆ ಈ ಗುರು ಪದವನ್ನು ಅಲ್ಲಲ್ಲಿ ತುರುಕಿ ಧರ್ಮದಲ್ಲಿ ಯಜಮಾನಿಕೆಯ ಪದ್ಧತಿಯನ್ನು ಮುಂದುವರಿಸಲು ಮಾಡಿಕೊಂಡ ಒಂದು ವ್ಯವಸ್ಥೆ.

ವಚನಗಳು ಹಲವು ಅರ್ಥವನ್ನು ಕೊಡುವ ಅಮೂಲ್ಯ ರತ್ನಗಳು ಅರಿದಷ್ಟೂ ಜ್ಞಾನ ವಿಸ್ತಾರಗೊಳ್ಳುತ್ತದೆ. ಅಂದಿನ ಸನಾತನಕ್ಕೆ ಸಮಗ್ರವಾಗಿ ಪರ್ಯಾಯವಾಗಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಶರಣರು ಅದರಲ್ಲೂ ಬಸವಣ್ಣನವರು ಹೆಣಗಾಡಿದರು.

ನಾನು ಹೇಳಿದ್ದೆ ಸತ್ಯ ಎಂದು ಮೊಳೆ ಹೊಡೆಯುವ ಜಾಯಮಾನ ನನ್ನದಲ್ಲ.
ಅರಿವಿನ ನೈಜ ಮೂರುತಿಯಾದ ಬಸವಣ್ಣ ಸತ್ಯದ ಪ್ರತಿಪಾದಕ. ಬಸವಣ್ಣ ಸರ್ವಕಾಲಿಕ ಅರಿವಿನ ಸತ್ಯದ ಸಂಕೇತವಾಗಿ ನಿಲ್ಲುತ್ತಾನೆ. ಅಂತೆಯೇ ಅಲ್ಲಮರು.

seed-of-guru-on-earth-of-devotion-an-article-on-vachanas

ಮಹಾ ಮಣಿಹ ಸಂಗನ ಬಸವ ಎನಗೆಯು ಗುರು ನಿನಗೂ ಗುರು ಜಗಕೆಲ್ಲಾ ಗುರು ಕಾಣಾ ಗುಹೇಶ್ವರ ಎಂದಿದ್ದಾರೆ.

ಅಕ್ಕ ಬಸವನ ಅರಿವನರಿಯದೆ ಕೆಟ್ಟೆನಲ್ಲ ಎಂದಿದ್ದಾಳೆ. ಮಡಿವಾಳರು ಗುರುವು ಬಸವಣ್ಣನಿಂದಾ ಎಂದರೆ, ಚೆನ್ನ ಬಸವಣ್ಣ ಗುರುವು ಬಸವಣ್ಣನ ಪಾದದಿಂದ ಎಂದಿದ್ದಾರೆ. ಅನೇಕ ಶರಣರು ಬಸವಣ್ಣ ಕಂಡುಕೊಂಡ ಸತ್ಯವನ್ನು ಸಾರ್ವತ್ರಿಕಗೊಳಿಸಿದ್ದಾರೆ. ಹೀಗಿದ್ದಾಗ ಹೊರಗಿನ ಗುರು ಎಷ್ಟು ಸಮಂಜಸ ?

ಇದು ನನ್ನ ವ್ಯಕ್ತಿಗತವಾದ ಅಭಿಮತ. ಚರ್ಚೆಗೆ ಕೊನೆ ಇರುವುದಿಲ್ಲ. ಆದರೆ ನಾನು ಅಂತರಂಗದ ಅರಿವೇ ಅಷ್ಟಾವರಣದಲ್ಲಿನ ಗುರು ಎಂದು ಬಲವಾಗಿ ನಂಬಿದ್ದೇನೆ ಮತ್ತು ಅದಕ್ಕೆ ಬದ್ಧವಾಗಿದ್ದೇನೆ.

ಇನ್ನು ಅವರವರ ಅಭಿಮತ ಅಭಿಪ್ರಾಯಕ್ಕೆ ಉತ್ತರಿಸುವ ಜಾಣತನ ಬುದ್ಧಿ ಮತ್ತೆ ಅಥವಾ ಪಾಂಡಿತ್ಯ ನನ್ನ ಬಳಿ ಇಲ್ಲ. ಸರಳ ವಚನಾಧಾರಿತ ಸತ್ಯವನ್ನು ಒಪ್ಪಿಕೊಂಡಿರುವೆನು. ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ
-ಶರಣಾರ್ಥಿ

English summary
Who is 'Guru'? Sharana's had found the word Guru completely deferent than the system of Gurukula of Sanatan Samstha. Here Dr. Shashikanth Pattana has opinioned his thoughts on 'Guru' Vachanas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X