ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 15ರಂದು ಮತ ಎಣಿಕೆ:ರಾಜ್ಯಾದ್ಯಂತ ಬಿಗಿ ಬಂದೋಬಸ್ತ್

By Nayana
|
Google Oneindia Kannada News

ಬೆಂಗಳೂರು, ಮೇ 14: ವಿಧಾನಸಭಾ ಚುನಾವಣೆ ಫಲಿತಾಂಶ ಮೇ 15ರಂದು ಹೊರ ಬೀಳಲಿದೆ. ಅಂದು ಅಭ್ಯರ್ಥಿಗಳ ಹಣೆ ಬರಹ ನಿರ್ಧಾರವಾಗಲಿದೆ. ಸೂಕ್ತ ಬಂದೋಬಸ್ತ್ ಕಲ್ಪಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ 222 ಕ್ಷೇತ್ರಗಳ ಒಟ್ಟು 2622 ಹುರಿಯಾಳುಗಳು ರಾಜಕೀಯ ಭವಿಷ್ಯ ಮಂಗಳವಾರ ಹೊರಬರಲಿದೆ. ಇದಕ್ಕಾಗಿ ರಾಜ್ಯದಲ್ಲಿ 38 ಮತೆಣಿಕೆ ಕೇಂದ್ರಗಳನ್ನು ಆಯೋಗವು ಸ್ಥಾಪಿಸಿದ್ದು 80 ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಅಂತಿಮವಾಗಿ ಕರ್ನಾಟಕದಲ್ಲಿ 70.91 % ಮತದಾನ, ಬೆಂಗಳೂರು ಕನಿಷ್ಠಅಂತಿಮವಾಗಿ ಕರ್ನಾಟಕದಲ್ಲಿ 70.91 % ಮತದಾನ, ಬೆಂಗಳೂರು ಕನಿಷ್ಠ

ಮತೆಣಿಕೆ ಕಾರ್ಯಕ್ಕೆ ಯಾವುದೇ ತೊಂದರೆ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ. ಪ್ರತಿ ಜಿಲ್ಲಾ ಕೇಂದ್ರದಲ್ಲೂ ಮತ ಎಣಿಕೆ ಕೇಂದ್ರ ತೆರೆಯಲಾಗಿದೆ, ಬೆಂಗಳೂರು ನಗರದಲ್ಲಿ ಗ್ರಾಮಾಂತರ ಜಿಲ್ಲೆಗಳ ಕ್ಷೇತ್ರಗಳು ಸೇರಿ ಐದು ಕಡೆ ಮತ ಎಣಿಕೆ ನಡೆಯಲಿದೆ.

Security on counting centers across the state: Prohibition impose

ಇನ್ನುಳಿದಂತೆ ಚಿತ್ರದುರ್ಗ ಮತ್ತು ಮೈಸೂರಿನಲ್ಲಿ ಎರಡು ಹಾಗೂ ತುಮಕೂರಿನಲ್ಲಿ ಮೂರು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕಾರ್ಯಕ್ಕೆ 11,160 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.

ಕ್ಲೈಮ್ಯಾಕ್ಸ್ ಹಂತದಲ್ಲಿ ಚುನಾವಣೆ : ಕ್ಷಣಕ್ಷಣಕ್ಕೂ ಕುತೂಹಲಕ್ಲೈಮ್ಯಾಕ್ಸ್ ಹಂತದಲ್ಲಿ ಚುನಾವಣೆ : ಕ್ಷಣಕ್ಷಣಕ್ಕೂ ಕುತೂಹಲ

ಮಂಗಳವಾರ ಮತ ಎಣಿಕೆ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಸೂಕ್ತ ಭದ್ರತೆ ಕಲ್ಪಿಸಲಾಗಿದೆ. ಮತ ಎಣಿಕೆ ದಿನ 278 ಡಿವೈಎಸ್‌ಪಿ, 947 ಇನ್ಸ್‌ಪೆಕ್ಟರ್‌ಗಳು, 5,322 ಪಿಎಸ್‌ ಮತ್ತು ಎಎಸ್‌ಐಗಳು, 45,685 ಹೆಡ್‌ ಕಾನ್‌ಸ್ಟೆಬಲ್‌ ಮತ್ತು ಕಾನ್‌ಸ್ಟೇಬಲ್‌ಗಳು ಹಾಗೂ 26,672 ಗೃಹ ರಕ್ಷಕ ಸಿಬ್ಬಂದಿ ಭದ್ರತೆಯಲ್ಲಿ ತೊಡಗಲಿದ್ದಾರೆ ಎಂದು ಎಡಿಜಿಪಿ ಕಮಲ್‌ ಪಂತ್ ತಿಳಿಸಿದ್ದಾರೆ.

English summary
More than 80,000 police personnel have been deployed across the state for security during counting of votes on May 15. ADGP Jamal Panth has said that there will be prohibition order on Tuesday to curb untoward incidents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X