• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಷಯ ಏನೂಂತಾ ಗೊತ್ತಾಯ್ತಾ? ಯಡಿಯೂರಪ್ಪ-ಕುಮಾರಸ್ವಾಮಿ ಮತ್ತೆ ಕ್ಲೋಸ್ ಡೋರ್ ಮೀಟಿಂಗ್

|

ಕೆಲವೇ ಕೆಲವು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ದಾಸರಹಳ್ಳಿಯ ಜೆಡಿಎಸ್ ಶಾಸಕರ ಜೊತೆ, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದರು. ಈ ಸುದ್ದಿಗೆ, ಹಲವು ರೆಕ್ಕೆಪುಕ್ಕಗಳು ಸೇರಿದ್ದವು.

ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಇದಕ್ಕೆ ಸ್ಪಷ್ಟನೆಯನ್ನು ನೀಡಿದ್ದರು. ರಾಜ್ಯದ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ದೆಹಲಿ ಪ್ರವಾಸದಲ್ಲಿದ್ದಾಗಲೇ, ಈ ಎಚ್ಡಿಕೆ-ಬಿಎಸ್ವೈ ಭೇಟಿಯಾಗಿದ್ದರಿಂದ, ಇದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.

ಯಡಿಯೂರಪ್ಪ ಕರೆದಿದ್ದ ಡಿನ್ನರ್ ಪಾರ್ಟಿಯಲ್ಲಿ, ಅಮಿತ್ ಶಾ ಕಡೆಯ ಜಾಸೂಸ್ ಯಾರು?

ಈ ಸುದ್ದಿಯ ಸುತ್ತಮತ್ತ ಹಸಿಬಿಸಿ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ, ಮತ್ತೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ, ವಿಧಾನಸಭೆಯ ಕಚೇರಿಯಲ್ಲಿ ಮಾತುಕತೆ ನಡೆಸಿದ್ದಾರೆ. ಈ ಬಾರಿ, ಇದು ಅವಿಶ್ವಾಸ ಗೊತ್ತುವಳಿ ಮಂಡನೆಯ ಒಂದು ದಿನದ ಹಿಂದೆ.

ರಾಜಕೀಯ ನಿಂತ ನೀರಲ್ಲ, ಇಲ್ಲಿ ಯಾರೂ ಶತ್ರುಗಳಿಲ್ಲ, ಮಿತ್ರರಿಲ್ಲ ಎನ್ನುವುದಕ್ಕೆ, ರಾಜ್ಯ ರಾಜಕಾರಣ ಇತಿಹಾಸದ ಪುಟವೇ ಸಾಕ್ಷಿ. ಹಾಗಾಗಿ, ಬಿಎಸ್ವೈ ಅವರನ್ನು, ಬಿಜೆಪಿ ವರಿಷ್ಠರು ಕೆಳಗಳಿಸಲಿದ್ದಾರೆ ಎನ್ನುವ ಸುದ್ದಿಗೂ, ಎಚ್ಡಿಕೆ-ಬಿಎಸ್ವೈ ಮೊದಲ ಭೇಟಿಗೂ ತಾಳೆ ಹಾಕಲಾಗುತ್ತಿತ್ತು. ಬಿಜೆಪಿ ಶಾಸಕರ ಡಿನ್ನರ್ ಮೀಟಿಂಗ್ ನಲ್ಲಿ ಪ್ರಲ್ಹಾದ್ ಜೋಶಿ ಏನಕ್ಕಾಗಿ ಬಂದರು?

ಕುತೂಹಲ ಮೂಡಿಸಿದ ಎಚ್‌ಡಿಕೆ, ಯಡಿಯೂರಪ್ಪ ಭೇಟಿ!

ಗೃಹ ಕಚೇರಿ ಕೃಷ್ಣಾದಲ್ಲಿ ಕುಮಾರಸ್ವಾಮಿ-ಬಿಎಸ್ವೈ ಭೇಟಿ

ಗೃಹ ಕಚೇರಿ ಕೃಷ್ಣಾದಲ್ಲಿ ಕುಮಾರಸ್ವಾಮಿ-ಬಿಎಸ್ವೈ ಭೇಟಿ

ಇದೇ ಸೆಪ್ಟಂಬರ್ ಹನ್ನೊಂದರಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಕುಮಾರಸ್ವಾಮಿ, ದಾಸರಹಾಳ್ಳಿಯ ಶಾಸಕ ಮಂಜುನಾಥ್ ಜೊತೆ ಯಡಿಯೂರಪ್ಪನವರನ್ನು ಭೇಟಿಯಾಗಿದ್ದರು. ಮಳೆಗಾಲದ ಅಧಿವೇಶನದ ಬಳಿಕ ನಾಯಕತ್ವ ಬದಲಾವಣೆ ಬೇಡಿಕೆಯೊಂದಿಗೆ ಬಿಜೆಪಿಯ ಹಲವು ಶಾಸಕರು ಹೈಕಮಾಂಡ್ ಭೇಟಿಗೆ ಸಿದ್ಧತೆ ನಡೆಸಿದ್ದಾರೆ ಎನ್ನುವ ಗಾಢವಾಗಿ ಹರಿದಾಡುತ್ತಿದ್ದ ಸುದ್ದಿಯ ವೇಳೆ, ಇಬ್ಬರು ನಾಯಕರು ಪರಸ್ಪರ ಭೇಟಿಯಾಗಿದ್ದರು.

ವಿಧಾನಸೌಧದಲ್ಲಿರುವ ಸಿಎಂ ಕಚೇರಿ

ವಿಧಾನಸೌಧದಲ್ಲಿರುವ ಸಿಎಂ ಕಚೇರಿ

ಇದಾದ ನಂತರ, ಅವಿಶ್ವಾಸ ಗೊತ್ತುವಳಿ ಮಂಡನೆಯ ಮುನ್ನಾದಿನ ಕುಮಾರಸ್ವಾಮಿ, ವಿಧಾನಸೌಧದಲ್ಲಿರುವ ಸಿಎಂ ಕಚೇರಿಯಲ್ಲಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದಾರೆ. ಕೆಲವು ಕಡತಗಳಿಗೆ ಸಿಎಂ ಕಡೆಯಿಂದ ಸಹಿಹಾಕಿಸಿಕೊಂಡ ನಂತರ, ತಮ್ಮ ಜೊತೆಗಿದ್ದವರನ್ನು ಹೊರಗೆ ಕಳುಹಿಸಿ, ಇಬ್ಬರು ನಾಯಕರು ಅರ್ಧ ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದ್ದಾರೆ.

ಯಾರ ಕುಟುಂಬದ ವಿರುದ್ದ ಭ್ರಷ್ಟಾಚಾರವಿಲ್ಲ ಹೇಳಿ

ಯಾರ ಕುಟುಂಬದ ವಿರುದ್ದ ಭ್ರಷ್ಟಾಚಾರವಿಲ್ಲ ಹೇಳಿ

ಗಮನಿಸಬೇಕಾದ ವಿಚಾರ ಏನಂದರೆ, ಈ ಸಭೆ ನಡೆದ ನಂತರ, ಪಂಚಾಯತ್ ರಾಜ್ ವಿಧೇಯಕ ಸದನದಲ್ಲಿ ಮಂಡನೆಯಾಗಿದೆ. ಆ ವೇಳೆ, ಜೆಡಿಎಸ್ ಶಾಸಕರು ಬಿಜೆಪಿ ಪರವಾಗಿ ನಿಂತಿದ್ದಾರೆ. ಇನ್ನು, ಬಿಎಸ್ವೈ ಕುಟುಂಬದ ಭ್ರಷ್ಟಾಚಾರದ ಬಗ್ಗೆ ಹರಿದಾಡುತ್ತಿರುವ ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದ ಎಚ್ಡಿಕೆ, "ಅವಿಶ್ವಾಸ ಮಂಡನೆಯ ವಿಚಾರದಲ್ಲಿ ಕಾಂಗ್ರೆಸ್ ನವರು ನಮ್ಮ ಜೊತೆ ಚರ್ಚಿಸಿಲ್ಲ. ಯಾರ ಕುಟುಂಬದ ವಿರುದ್ದ ಭ್ರಷ್ಟಾಚಾರವಿಲ್ಲ ಹೇಳಿ"ಎಂದು ಪ್ರತಿಕ್ರಿಯೆ ನೀಡಿದ್ದಾರೆ.

  SP Balasubramanyam : ಇದು SPB ಹಾಡಿದ ಕೊನೆಯ ಹಾಡು | Oneindia Kannada
  ಸಿಎಂ ಯಡಿಯೂರಪ್ಪ ಕರೆದಿದ್ದ ಡಿನ್ನರ್ ಪಾರ್ಟಿಯಲ್ಲಿ ಪ್ರಲ್ಹಾದ್ ಜೋಶಿ

  ಸಿಎಂ ಯಡಿಯೂರಪ್ಪ ಕರೆದಿದ್ದ ಡಿನ್ನರ್ ಪಾರ್ಟಿಯಲ್ಲಿ ಪ್ರಲ್ಹಾದ್ ಜೋಶಿ

  ಇನ್ನು, ಸಿಎಂ ಯಡಿಯೂರಪ್ಪ ಕರೆದಿದ್ದ ಡಿನ್ನರ್ ಪಾರ್ಟಿಯಲ್ಲಿ ವಿಶೇಷ ಆಹ್ವಾನಿತರಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರನ್ನು ಕರೆಯಲಾಗಿತ್ತು. ಸಭೆಗೆ ಜೋಶಿಯವರನ್ನು ಯಾಕೆ ಕರೆಯಲಾಯಿತು ಎನ್ನುವ ವಿಚಾರ ಬಿಜೆಪಿಯಲ್ಲಿ ಚರ್ಚೆಗೆ ಕಾರಣವಾಗಿರುವ ಇನ್ನೊಂದು ಅಂಶ. ಯಾಕೆಂದರೆ, ಸಿಎಂ ಹುದ್ದೆಗೆ ಜೋಶಿಯವರ ಹೆಸರೂ ಕೇಳಿಬರುತ್ತಿತ್ತು.

  English summary
  Second Time In Recent Days HD Kumaraswamy Met CM Yediyurappa In Vidhana Soudha,
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X