ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯುಸಿ: ಉತ್ತರ ಪತ್ರಿಕೆ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳುವ ವಿಧಾನ

|
Google Oneindia Kannada News

ಬೆಂಗಳೂರು, ಜುಲೈ 05: ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದು ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಮತ್ತು ಅನುತ್ತೀರ್ಣರಾಗಿರುವ ವಿದ್ಯಾರ್ಥಿ ತಾವು ಗಳಿಸಿರುವ ಅಂಕದ ಕಡಿಮೆಯಾಯ್ತು, ಮೌಲ್ಯ ಮಾಪನ ಸರಿಯಾಗಿ ಆಗಿಲ್ಲ, ಉತ್ತರವನ್ನು ಬರೆದಿದ್ದೆ ಅಂಕ ಬಂದಿಲ್ಲ ಎಂದು ಉತ್ತರ ಪ್ರತಿಯ ಸ್ಕ್ಯಾನ್ ಪ್ರತಿಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಹಾಕಿದ್ದರೆ, ಜುಲೈ 6ರಿಂದ ಉತ್ತರ ಪತ್ರಿಕೆ ಲಭ್ಯವಾಗಲಿದೆ.

ಏಪ್ರಿಲ್ - ಮೇ2022ರಂದು ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ಜೂನ್ 18ರಂದು ದ್ವಿತೀಯ ಪಿಯುಸಿ ಫಲಿತಾಂಶವನ್ನು ಸಹ ಪ್ರಕಟಿಸಲಾಗಿತ್ತಿ. ಜೂನ್ 30ರವರೆಗೂ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಯನ್ನು ಪಡೆಯಲ್ಲಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿತ್ತು.

ವೆಬ್‌ಸೈಟ್‌ನಲ್ಲಿ ಉತ್ತರ ಪತ್ರಿಕೆಗಳು ಲಭ್ಯ

ಜುಲೈ 6(ಬುಧವಾರ)ರಿಂದ ಹಂತ ಹಂತವಾಗಿ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್ ಲೋಡ್ ಆಗಲಿದೆ. ವಿದ್ಯಾರ್ಥಿಗಳು ಸಂಬಂಧಿಸಿದ ಉತ್ತರ ಪತ್ರಿಕೆಗಳ ಸ್ಕಾನ್ಡ್ ಪ್ರತಿಯನ್ನು https://pue.karnataka.gov.in ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

Second PUC scanned answer sheet will be available from July 6

ವಿದ್ಯಾರ್ಥಿಗಳ ಮೊಬೈಲ್‌ಗೆ ಸಂದೇಶ

ವಿದ್ಯಾರ್ಥಿಗಳು ಉತ್ತರ ಪ್ರತಿಗಳ ಸ್ಕ್ಯಾನ್ ಕಾಪಿಯನ್ನು ಪಡೆಯಲಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವೇಳೆಯಲ್ಲಿ ನೀಡಲಾಗಿರುವ ಫೋನ್ ನಂಬರ್‌ಗೆ ಎಸ್‌ಎಂಎಸ್ ಬರದಲಿದ್ದು ಆ ಎಸ್ಎಂಎಸ್ ಸ್ವೀಕರಿಸಿದ ಮೇಲೆ ವೆಬ್‌ಸೈಟ್‌ನಲ್ಲಿ ಉತ್ತರ ಪತ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಡೌನ್ ಲೋಡ್ ಮಾಡಿಕೊಂಡ ಬಳಿಕ ಅಂಕಗಳಲ್ಲಿ ವ್ಯತ್ಯಾಸವೋ , ಮೌಲ್ಯ ಮಾಪನದಲ್ಲಿ ದೋಷವಾಗಿದೆಯೇ ಎಂದು ತಿಳಿದುಕೊಳ್ಳಬಹುದಾಗಿದೆ.

Second PUC scanned answer sheet will be available from July 6

ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲೇಬೇಕು

ಉತ್ತರ ಪತ್ರಿಕೆಯ ಸ್ಕಾನ್ ಕಾಪಿಯನ್ನು ಪಡೆಯುವುದಕ್ಕಷ್ಟೇ ಸೀಮಿತವಾಗಿದೆ. ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಪರೀಕ್ಷೆಯನ್ನು ಕಟ್ಟುವಂತೆ ಶಿಕ್ಷಣ ಇಲಾಖೆ ಸೂಚನೆಯನ್ನು ನೀಡಿದ್ದರು. ಅದರಂತೆ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲೇ ಬೇಕಿದೆ. ಮರು ಮೌಲ್ಯಮಾಪನಕ್ಕೆ ಅರ್ಜಿಯನ್ನು ಸಲ್ಲಿಸಿ ಉತ್ತೀರ್ಣರಾಗಿದ್ದವರಿಗೆ ಮಾತ್ರ ಪರೀಕ್ಷೆಯನ್ನು ಬರೆಯುವ ಅವಶ್ಯಕತೆಯಿರುವುದಿಲ್ಲ.

Recommended Video

ಚಂದ್ರಶೇಖರ್ ಗುರೂಜಿ ಹಂತಕರನ್ನ ಪೊಲೀಸರು ಚೇಸ್ ಮಾಡಿದ್ದು ಹೀಗೆ.. | OneIndia Kannada

English summary
Students who have written and passed the second PUC examination and the students who have failed have reduced their marks. Valuation is not correct. If the application is submitted online for the scanned copy of the answer copy, the answer sheet will be available from July 6, know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X