ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆ; ಮಕ್ಕಳಲ್ಲಿ ಹೆಚ್ಚು ಪ್ರಕರಣ

|
Google Oneindia Kannada News

ಬೆಂಗಳೂರು, ಮಾರ್ಚ್ 28: ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆ ಆರಂಭವಾಗಿದೆ. ಸರ್ಕಾರ ಸೋಂಕು ಹಡುವಿಕೆ ತಡೆಯಲು ಹಲವು ಕ್ರಮ ಕೈಗೊಳ್ಳುತ್ತಿದೆ. ರಾಜ್ಯ ಸರ್ಕಾರದ ಮಾಹಿತಿ ಅನ್ವಯ ಮಕ್ಕಳಲ್ಲಿ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ.

ಹೊಸ ಕೋವಿಡ್ ಪ್ರಕರಣಗಳಲ್ಲಿ 1 ರಿಂದ 10ನೇ ವರ್ಷದ ಮಕ್ಕಳಲ್ಲಿ ಸೋಂಕು ಕಂಡು ಬರುತ್ತಿದೆ. ಮಾರ್ಚ್ 14 ರಿಂದ 21ರ ತನಕ ಬೆಂಗಳೂರು ನಗರದಲ್ಲಿ 160 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ.

ಕೊರೊನಾ 2ನೇ ಅಲೆ ಆರಂಭದ ಸೂಚನೆ, ಮುನ್ನೆಚ್ಚರಿಕೆ ವಹಿಸಿ: ಆರೋಗ್ಯ ಸಚಿವ ಕೆ.ಸುಧಾಕರ್ ಕೊರೊನಾ 2ನೇ ಅಲೆ ಆರಂಭದ ಸೂಚನೆ, ಮುನ್ನೆಚ್ಚರಿಕೆ ವಹಿಸಿ: ಆರೋಗ್ಯ ಸಚಿವ ಕೆ.ಸುಧಾಕರ್

ಶನಿವಾರ ಮತ್ತು ಭಾನುವಾರ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಕ್ರಮವಾಗಿ 33 ಮತ್ತು 32 ಪ್ರಕರಣ ಪತ್ತೆಯಾಗಿದೆ. ರಾಜ್ಯ ಕೋವಿಡ್ ವಾರ್ ರೂಂ ಮಾಹಿತಿ ಪ್ರಕಾರ ಎರಡು ವಾರದಲ್ಲಿ 267 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕೊರೊನಾ 2ನೇ ಅಲೆ ಭೀತಿ: ಯುಗಾದಿ ಸೇರಿದಂತೆ ಎಲ್ಲ ಹಬ್ಬಗಳ ಅದ್ದೂರಿ ಆಚರಣೆಗೆ ಸರ್ಕಾರ ಬ್ರೇಕ್ಕೊರೊನಾ 2ನೇ ಅಲೆ ಭೀತಿ: ಯುಗಾದಿ ಸೇರಿದಂತೆ ಎಲ್ಲ ಹಬ್ಬಗಳ ಅದ್ದೂರಿ ಆಚರಣೆಗೆ ಸರ್ಕಾರ ಬ್ರೇಕ್

Second Covid 19 Wave More Children Hit In Karnataka

ಕಳೆದ ವರ್ಷದ ಜೂನ್‌ನಲ್ಲಿ ಈಗ ಪತ್ತೆಯಾದ ಸಂಖ್ಯೆಯಷ್ಟು ಪ್ರಕರಣ ದಾಖಲಾಗುತ್ತಿತ್ತು. ಆಗ ಕೇವಲ 16 ಮಕ್ಕಳಲ್ಲಿ ಸೋಂಕು ಕಂಡು ಬಂದಿತ್ತು. ಕೋವಿಡ್ ಸೋಂಕಿತರ ವರ್ತನೆಯಿಂದಾಗಿ ಈಗ ಸೋಂಕು ಹೆಚ್ಚಳವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಭಯ ಹುಟ್ಟಿಸಿದ ಕೊರೊನಾವೈರಸ್ 2ನೇ ಅಲೆಭಾರತದಲ್ಲಿ ಭಯ ಹುಟ್ಟಿಸಿದ ಕೊರೊನಾವೈರಸ್ 2ನೇ ಅಲೆ

ಸಿಸಿಎಸ್‌ಯು ಸದಸ್ಯರಾದ ಡಾ. ಅನೂಪ್ ಅಮರನಾಥ್ ಈ ಕುರಿತು ಮಾಹಿತಿ ನೀಡಿದ್ದಾರೆ. "2020ರಲ್ಲಿ ಹಲವು ಮಕ್ಕಳು ಪೋಷರು, ಸಂಬಂಧಿಕರಿಂದ ಸೋಂಕಿಗೆ ಒಳಗಾಗಿದ್ದರು. ಈಗಲೂ ಅದೇ ಮಾದರಿ ಕಂಡು ಬರುತ್ತಿದೆ" ಎಂದು ಹೇಳಿದ್ದಾರೆ.

ಈಗ ವೃದ್ಧರಿಂದ ಹಿಡಿದು ಮಕ್ಕಳ ತನ ಪೂರ್ಣ ಕುಟುಂಬಕ್ಕೆ ಸೋಂಕು ತಗುಲುತ್ತಿದೆ. "ಈಗ ಸೋಂಕು ತಗುಲಿದರೂ ಕುಟುಂಬದವರು ಸರಿಯಾಗಿ ಐಸೋಲೇಷನ್ ಆಗುತ್ತಿಲ್ಲ" ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.

Recommended Video

ರ್ಟ್‌ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದ ಸಿಡಿ ಯುವತಿ...! ಇಲ್ಲಿದೆ ಪತ್ರದ ಡಿಟೇಲ್ಸ್ | Oneindia Kannada

ಕರ್ನಾಟಕದಲ್ಲಿ ಶನಿವಾರ 2,886 ಹೊಸ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 21,252. ಬೆಂಗಳೂರು ನಗರದಲ್ಲಿ 1820 ಹೊಸ ಪ್ರಕರಣ ದಾಖಲಾಗಿದೆ.

English summary
Children hit by second Covid 19 wave in Karnataka. From March 14 to 21 there were 160 cases of children being infected in Bengaluru city. At the state level 267 child infections were found over a two-week period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X