ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 26ಕ್ಕೆ ಬಿಎಸ್ವೈ ಸರಕಾರಕ್ಕೆ 2ವರ್ಷ: ವಿದಾಯವೋ, ವಿಜೃಂಭಣೆಯೋ

|
Google Oneindia Kannada News

ಮುಖ್ಯಮಂತ್ರಿಯಾಗಲೇ ಬೇಕು, ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರಲೇ ಬೇಕೆಂದು ಹಠಕ್ಕೆ ಬಿದ್ದು, ಆಪರೇಶನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಎರಡು ವರ್ಷ ತುಂಬಲಿದೆ.

ಆದರೆ, ಎರಡು ವರ್ಷ ಪೂರೈಸುತ್ತಿರುವ ಖುಷಿಯನ್ನು ಆಚರಿಸಲು ಬಿಜೆಪಿಯಲ್ಲೇನು ಸದ್ಯದ ಮಟ್ಟಿಗೆ ಹಬ್ಬದ ವಾತಾವರಣವೇನೂ ಇಲ್ಲ. ಅಂದು, ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪದತ್ಯಾಗ ಮಾಡಲಿದ್ದಾರೆ ಎನ್ನುವ ಅನಧಿಕೃತ ಸುದ್ದಿಗಳೇ ಸದ್ಯ ಮೇಲಾಟ ನಡೆಸುತ್ತಿದೆ.

ಸಿಎಂ ಬಿಎಸ್ವೈ ಬದಲಾವಣೆ ಸುದ್ದಿ: ಹಿರಿಯ ಕಾಂಗ್ರೆಸ್ ನಾಯಕರೊಬ್ಬರ ಅಚ್ಚರಿಯ ಟ್ವೀಟ್ಸಿಎಂ ಬಿಎಸ್ವೈ ಬದಲಾವಣೆ ಸುದ್ದಿ: ಹಿರಿಯ ಕಾಂಗ್ರೆಸ್ ನಾಯಕರೊಬ್ಬರ ಅಚ್ಚರಿಯ ಟ್ವೀಟ್

ವೀರಶೈವ, ಲಿಂಗಾಯತ ಸಮುದಾಯದ ಭರಪೂರ ಬೆಂಬಲ ಮತ್ತು ಎಚ್ಚರ, ಫಲ ಕೊಡಲಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಹೆಚ್ಚು ದಿನ ಕಾಯಬೇಕಾಗಿಲ್ಲ. ಪಕ್ಷಾತೀತವಾಗಿ ಸಮುದಾಯದ ನಾಯಕರು ಯಡಿಯೂರಪ್ಪನವರ ಬೆಂಬಲಕ್ಕೆ ನಿಂತಿದ್ದಾರೆ.

ಬಿಜೆಪಿ ಹೈಕಮಾಂಡ್‌ಗೆ ಬಿಸಿ ಮುಟ್ಟಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಿಕ್ಕ 'ಅಭಯ ಹಸ್ತ'!ಬಿಜೆಪಿ ಹೈಕಮಾಂಡ್‌ಗೆ ಬಿಸಿ ಮುಟ್ಟಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಿಕ್ಕ 'ಅಭಯ ಹಸ್ತ'!

ತಮ್ಮ ಪರಮಾಪ್ತ ಸಚಿವರುಗಳ ಜೊತೆ ಯಡಿಯೂರಪ್ಪನವರು ಸೋಮವಾರ (ಜುಲೈ 19) ನಡೆಸಿದ ತಾಜ್‌ ವೆಸ್ಟೆಂಡ್ ಲಂಚ್ ವೇಳೆ, ಹಲವು ವಿಷಯಗಳು ಚರ್ಚೆಗೆ ಬಂದಿವೆ ಮತ್ತು ವಲಸೆ ನಾಯಕರಿಗೆ ಅಭಯ ದೊರಕಿದೆ ಎಂದು ಹೇಳಲಾಗುತ್ತಿದೆ.

 ಯಡಿಯೂರಪ್ಪ ವಿರೋಧಿ ಬಣ ಮೌನಕ್ಕೆ ಶರಣಾಗಿದೆ

ಯಡಿಯೂರಪ್ಪ ವಿರೋಧಿ ಬಣ ಮೌನಕ್ಕೆ ಶರಣಾಗಿದೆ

ಸದ್ಯದ ರಾಜಕೀಯವನ್ನು ಅವಲೋಕಿಸಿದಾಗ, ಯಡಿಯೂರಪ್ಪ ವಿರೋಧಿ ಬಣ ಮೌನಕ್ಕೆ ಶರಣಾಗಿದೆ. ಮುಂದಿನ ಬೆಳವಣಿಗೆ ಏನಾಗಲಿದೆ ಎನ್ನುವ ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರಾ ಅಥವಾ, ತಮ್ಮ ಡಿಮಾಂಡ್ ಈಡೇರುತ್ತಿದೆ ಎನ್ನುವ ಕಾರಣಕ್ಕಾಗಿ ಮೌನವಾಗಿದ್ದಾರಾ ಎನ್ನುವುದಿಲ್ಲಿ ಪ್ರಶ್ನೆ.

 ಜುಲೈ 26ರಂದು ಶಾಸಕರೊಂದಿಗೆ ಯಡಿಯೂರಪ್ಪ ಸಭೆ

ಜುಲೈ 26ರಂದು ಶಾಸಕರೊಂದಿಗೆ ಯಡಿಯೂರಪ್ಪ ಸಭೆ

ಮುಂಬರುವ ಭಾನುವಾರ ಯಡಿಯೂರಪ್ಪ ತಮ್ಮ ಪಕ್ಷದ ಶಾಸಕರಿಗೆ ಭೋಜನ ಕೂಟ ಏರ್ಪಡಿಸಿದ್ದಾರೆ. ಮರುದಿನ ಅಂದರೆ ಜುಲೈ 26ರಂದು ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ. ಅಂದು, ತಾವು ಬೆಳೆದ ಬಂದ ರೀತಿ, ಸೈಕಲ್ ಏರಿ ಪಕ್ಷವನ್ನು ಕಟ್ಟಿದ ರೀತಿ, ಪಕ್ಷವನ್ನು ಅಧಿಕಾರಕ್ಕೆ ತರಲು ಪಟ್ಟ ಪ್ರಯತ್ನದ ಬಗ್ಗೆ ಸವಿಸ್ತಾರವಾಗಿ ಮಾತನಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

 ಜುಲೈ 26ಕ್ಕೆ ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ

ಜುಲೈ 26ಕ್ಕೆ ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ

ಜುಲೈ 26ಕ್ಕೆ ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾಗಲಿದೆ. ಹೊಸ ನೀರು ಹರಿದು ಬರಲಿದೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ದಟ್ಟವಾಗಿ ಹರಡುತ್ತಿದೆ. ಹೀಗಾಗಿ, ಬಿಎಸ್ವೈ ಬಣ ಮೌನಕ್ಕೆ ಶರಣಾಗಿದೆ. ನಾಯಕತ್ವ ಬದಲಾವಣೆಯ ವಿಚಾರದಲ್ಲಿ ಖಂಡಾತುಂಡವಾಗಿ ಯಾರೂ ಹೇಳಿಕೆ ನೀಡುವ ಪರಿಸ್ಥಿತಿಯಲ್ಲಿ ಇಲ್ಲ.

 ಯಡಿಯೂರಪ್ಪನವರ ಕೊಡುಗೆಯ ಬಗ್ಗೆ ವರಿಷ್ಠರಿಗೆ ದೂಸ್ರಾ ಮಾತಿಲ್ಲ

ಯಡಿಯೂರಪ್ಪನವರ ಕೊಡುಗೆಯ ಬಗ್ಗೆ ವರಿಷ್ಠರಿಗೆ ದೂಸ್ರಾ ಮಾತಿಲ್ಲ

ಪಕ್ಷಕ್ಕೆ ಯಡಿಯೂರಪ್ಪನವರ ಕೊಡುಗೆಯ ಬಗ್ಗೆ ವರಿಷ್ಠರಿಗೆ ದೂಸ್ರಾ ಮಾತಿಲ್ಲ. ಹಾಗಾಗಿ, ಗೌರವಯುತವಾಗಿ ಬಿಎಸ್ವೈ ಅವರೇ ಪದತ್ಯಾಗ ಮಾಡಲಿ ಎನ್ನುವ ನಿಲುವಿಗೆ ಹೈಕಮಾಂಡ್ ಅಂಟಿಕೊಂಡಿದೆ ಎಂದು ಹೇಳಲಾಗುತ್ತಿದೆ. ಬೆಂಕಿಯಿಲ್ಲದೇ ಹೊಗೆಯಾಡುವುದಿಲ್ಲ ಎನ್ನುವ ನಾಣ್ಣುಡಿಯಂತೆ, ನಾಯಕತ್ವ ಬದಲಾವಣೆ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ. ಹಾಗಾಗಿ, ಜುಲೈ 26 ರಾಜ್ಯ ಬಿಜೆಪಿಗೆ ಮಹತ್ವದ ದಿನವಾಗಲಿದೆ.

English summary
Second Anniversary of Karnataka BJP Govt on July 26; Is is the celebrations or Farewell to BS Yediyurappa, possible to see a reboot after BJPLP meeting on July 26. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X