ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ರಿಂದ 5ನೇ ತರಗತಿವರೆಗೆ ಶಾಲೆ ಪುನರಾರಂಭಿಸಲು ಮನವಿ ಶಿಕ್ಷಣ ಮಂಡಳಿಗಳ ಒಕ್ಕೂಟ ಸಿಎಂಗೆ ಪತ್ರ

|
Google Oneindia Kannada News

ಬೆಂಗಳೂರು,ಫೆಬ್ರವರಿ 10: ಒಂದರಿಂದ ಐದನೇ ತರಗತಿವರೆಗೆ ಶಾಲೆಗಳನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಶಿಕ್ಷಣ ಮಂಡಳಿಗಳ ಒಕ್ಕೂಟ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದೆ.

Recommended Video

ಶಿಕ್ಷಣ ಸಚಿವರಿಂದ ಮಹತ್ವದ ನಿರ್ಧಾರ! | Oneindia Kannada

ರಾಜ್ಯ ಸರ್ಕಾರ ಕೋವಿಡ್-19 ಲಾಕ್ ಡೌನ್ ಸಡಿಲಿಕೆ ನಂತರ 9ರಿಂದ 12ನೇ ತರಗತಿಯವರೆಗಿನ ಮಕ್ಕಳಿಗೆ ಶಾಲೆಗಳನ್ನು ಪುನರಾರಂಭಿಸಿದ್ದು, 6ರಿಂದ 8ನೇ ತರಗತಿಯವರೆಗೆ ವಿದ್ಯಾಗಮವನ್ನು ನಡೆಸುತ್ತಿದೆ. 5ನೇ ತರಗತಿಯವರೆಗಿನ ಮಕ್ಕಳು ಮನೆಯಲ್ಲಿಯೇ ಇದ್ದು ದೂರದರ್ಶನ ಅಥವಾ ರೇಡಿಯೊ ಮೂಲಕ ಪಾಠಗಳನ್ನು ಆಲಿಸುತ್ತಿದ್ದಾರೆ.

ಶಾಲಾ ಬೇಸಿಗೆ ರಜೆ ಕುರಿತು ಸರ್ಕಾರದಿಂದ ಮಹತ್ವದ ನಿರ್ಧಾರಶಾಲಾ ಬೇಸಿಗೆ ರಜೆ ಕುರಿತು ಸರ್ಕಾರದಿಂದ ಮಹತ್ವದ ನಿರ್ಧಾರ

ಶಿಕ್ಷಣ ಮಂಡಳಿಗಳ ಒಕ್ಕೂಟ ಈ ಬಾರಿ ಶೇಕಡಾ 30ರಷ್ಟು ಬೋಧನಾ ಶುಲ್ಕ ಕಡಿತವನ್ನು ಮರು ಪರಿಶೀಲಿಸುವಂತೆ ಕೂಡ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ. ಇದು ಶೇಕಡಾ 55 ರಿಂದ 65 ರಷ್ಟು ಶುಲ್ಕ ಕಡಿತವಾಗುತ್ತದೆ. ಇದು ಬೋಧನೆ ಮತ್ತು ಬೋಧಕೇತರ ಸಿಬ್ಬಂದಿಗಳ ವೇತನದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಒಕ್ಕೂಟ ಹೇಳಿದೆ.

Schools Write To CM, Seek Reopening Of Classes 1 To 5

ಅಂಗನವಾಡಿಗಳನ್ನು ಆರಂಭಿಸುವಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ, ಸಿಬಿಎಸ್ ಇ, ಐಸಿಎಸ್ ಇ ಶಿಕ್ಷಣ ಮಂಡಳಿಗಳ ಒಕ್ಕೂಟ ಸಾಮೂಹಿಕವಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿವೆ.

ಸದ್ಯದಲ್ಲಿಯೇ ತಾಂತ್ರಿಕ ಸಲಹಾ ಸಮಿತಿಯನ್ನು ಸಂಪರ್ಕಿಸಿ ಒಂದರಿಂದ 5ನೇ ತರಗತಿಗಳನ್ನು ಸಹ ಆರಂಭಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎನ್ನುವ ಮಾಹಿತಿಯನ್ನು ಅಧಿಕಾರಿಯೊಬ್ಬರು ನೀಡಿದ್ದಾರೆ.

English summary
The all Boards Association has written to Chief Minister BS Yediyurappa, demanding the reopening of classes one to five. This comes in the backdrop of the Supreme Court’s directions to states and Union territories to reopen Anganwadis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X