ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಶಾಲೆಗಳಲ್ಲಿ ಇನ್ಮುಂದೆ ಸ್ಕೂಲ್ ಫೀ ಜೊತೆ ಕೊವಿಡ್ ಫೀನೂ ಕಟ್ಬೇಕು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10: ಖಾಸಗಿ ಶಾಲೆಗಳು ಕೊವಿಡ್ ಶುಲ್ಕ ಪರಿಚಯಿಸಲು ಮುಂದಾಗಿವೆ. ಹೈಸ್ಕೂಲ್ ವಿದ್ಯಾರ್ಥಿಗಳು ತಮಗೆ ಏನಾದರೂ ಪಠ್ಯದ ಬಗ್ಗೆ ಅನುಮಾನವಿದ್ದರೆ ಅದನ್ನು ಬಗೆಹರಿಸಿಕೊಳ್ಳಲು ಶಾಲೆಗಳಿಗೆ ತೆರಳಬಹುದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೊರೊನಾದಿಂದಾಗಿ ನಿತ್ಯ ಶಾಲೆಯ ಸುತ್ತಮುತ್ತಲೂ ಸ್ಯಾನಿಟೈಜ್ ಮಾಡುವುದರಿಂದ ನಿರ್ವಹಣೆ ಶುಲ್ಕವನ್ನು ಹೆಚ್ಚಳ ಮಾಡಲು ಶಾಲೆಗಳು ನಿರ್ಧರಿಸಿವೆ. ಕೆಲವು ಶಾಲೆಗಳು ಕೊವಿಡ್ ಶುಲ್ಕ ಎನ್ನುವ ಹೆಸರಿನಲ್ಲಿ ಶುಲ್ಕವನ್ನು ಪಡೆಯಲು ಮುಂದಾಗಿವೆ. ಶಾಲೆಗಳು ಪುನರಾರಂಭಗೊಳ್ಳಲಿದ್ದು, ಬೆಳಗ್ಗೆ 9 ರಿಂದ ಮಧ್ಯಾಹ್ನ 12ರವರೆಗೆ ತರಗತಿಗಳು ನಡೆಯಲಿವೆ. ಸೆಪ್ಟೆಂಬರ್ 21ರ ಬಳಿಕ ಶಿಕ್ಷಕರಿಂದ ಗೈಡೆನ್ಸ್ ಪಡೆದುಕೊಳ್ಳಬಹುದಾಗಿದೆ.

ವಿದ್ಯಾರ್ಥಿಗಳು ಶಾಲೆಗೆ ಹೋಗಬಹುದು: ಸರ್ಕಾರ ಅನುಮತಿವಿದ್ಯಾರ್ಥಿಗಳು ಶಾಲೆಗೆ ಹೋಗಬಹುದು: ಸರ್ಕಾರ ಅನುಮತಿ

ಪಠ್ಯ ಸಲಕರಣೆಗಳು, ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗಳು ಪ್ರಿಂಟರ್‌ಗಳನ್ನು ಶೇ.70ರಷ್ಟು ಆಲ್ಕೋಹಾಲ್ ಹೊಂದಿರುವ ವೈಪ್‌ಗಳಿಂದ ಶುಚಿಗೊಳಿಸಬೇಕು. ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಆಫ್ ಪ್ರೈಮರಿ ಆಂಡ್ ಸೆಕೆಂಡರಿ ಸ್ಕೂಲ್ ಜೆನರಲ್ ಸೆಕ್ರೆಟರಿ ಡಾ, ಶಶಿಕುಮಾರ್ ಮಾತನಾಡಿ ನಮ್ಮ ಶಾಲೆಯ ವೆಚ್ಚಗಳೂ ಹೆಚ್ಚಾಗುತ್ತಿವೆ.

Schools Reopening : Private Schools In Karnataka Plan To Introduce COVID Fees

ಹೀಗಾಗಿ ಶೇ.5ರಷ್ಟು ಹೌಸ್‌ಕೀಪಿಂಗ್ ಶುಲ್ಕವನ್ನು ಹೆಚ್ಚಿಸಲು ಮುಂದಾಗಿದ್ದೇವೆ. ಪೋಷಕರು ನಮ್ಮ ಕಷ್ಟವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ ಎಂದರು.
ಖಾಸಗಿ ಶಾಲೆಗಳು ಸಂಕಷ್ಟದಲ್ಲಿವೆ ಸಾಕಷ್ಟು ಪೋಷಕರು 2020-21ನೇ ಸಾಲಿಗೆ ಶಾಲಾ ಶುಲ್ಕವನ್ನು ಪಾವತಿ ಮಾಡಿಲ್ಲ.

Recommended Video

Online Class ನೆಪದಲ್ಲಿ ಜೂಜಾಟ , ಪೋಷಕರೇ ಎಚ್ಚರ! | Oneindia Kannada

ಶಾಲೆಯಲ್ಲಿ ಥರ್ಮಲ್ ಸ್ಕ್ಯಾನರ್ ಅಳವಡಿಕೆ, ಹೌಸ್‌ಕೀಪಿಂಗ್ ಅವರ ಬಳಿ ಹೆಚ್ಚು ಸಮಯ ಕೆಲಸ ಮಾಡಿಸುವುದು, ಇದೆಲ್ಲಾ ಸೇರಿ ಪ್ರತಿ ತಿಂಗಳು ಪೋಷಕರು 150-250 ರೂ. ನೀಡಬೇಕಾಗುತ್ತದೆ. ಯಾವ ಮಕ್ಕಳು ಶಾಲೆಗಳಿಗೆ ಬರುತ್ತಾರೋ ಆ ಮಕ್ಕಳ ಪೋಷಕರ ಬಳಿ ಮಾತ್ರ ಹಣ ತೆಗೆದುಕೊಳ್ಳಲಾಗುತ್ತದೆ.ಸಾಕಷ್ಟು ಮಂದಿ ಪೋಷಕರು ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಸಿದ್ಧರಿದ್ದಾರೆ.

English summary
With the Union government announcing that high school students can visit their schools to get doubts clarified, private school managements plan to increase maintenance fees to ensure regular sanitisation of premises and other precautionary measures. Some are increasing it under the special head “COVID fees”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X