ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಾದ್ಯಂತ ಶಾಲೆಗಳ ಪುನರಾರಂಭ; ವಿದ್ಯಾರ್ಥಿಗಳ ಹಾಜರಾತಿ ಎಷ್ಟು?

|
Google Oneindia Kannada News

ಬೆಂಗಳೂರು, ಜನವರಿ 02: ಸುಮಾರು ಹತ್ತು ತಿಂಗಳ ನಂತರ ಕರ್ನಾಟಕದಲ್ಲಿ ಶಾಲೆ ಹಾಗೂ ಕಾಲೇಜುಗಳನ್ನು ಜನವರಿ 1ರ ಹೊಸ ವರ್ಷದಂದು ಆರಂಭಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಶಾಲೆ ಆರಂಭಿಸುವ ಕುರಿತು ಗೊಂದಲದ ನಡುವೆಯೇ ರಾಜ್ಯಾದ್ಯಂತ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಆರಂಭಗೊಂಡಿವೆ.

ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಹೊರಡಿಸಿರುವ ಮಾರ್ಗಸೂಚಿಯನ್ವಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಶಾಲೆಗಳಿಗೆ ಸೂಚಿಸಲಾಗಿದೆ. ಶುಕ್ರವಾರ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಹಲವು ಶಾಲೆಗಳಿಗೆ ಭೇಟಿ ನೀಡಿ ಶಾಲೆ ಆರಂಭದ ಕುರಿತು ಪರಿಶೀಲನೆ ನಡೆಸಿದ್ದಾರೆ.

ಹತ್ತು ತಿಂಗಳುಗಳ ಬಳಿಕ ರಾಜ್ಯಾದ್ಯಂತ ಶಾಲೆಗಳು ಆರಂಭ!ಹತ್ತು ತಿಂಗಳುಗಳ ಬಳಿಕ ರಾಜ್ಯಾದ್ಯಂತ ಶಾಲೆಗಳು ಆರಂಭ!

ಹತ್ತು ತಿಂಗಳ ನಂತರ ಶಾಲೆಗಳು ತೆರೆದಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಹಬ್ಬದ ವಾತಾವರಣ ಕಾಣಿಸಿಕೊಂಡಿತ್ತು. ಹೊಸ ವರ್ಷವೂ ಆಗಿದ್ದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಹೂಗುಚ್ಛ ಹಾಗೂ ಸಿಹಿ ತಿನಿಸುಗಳನ್ನು ಹಂಚಿ, ಬ್ಯಾಂಡ್ ಸೆಟ್ ನೊಂದಿಗೆ ಬರಮಾಡಿಕೊಳ್ಳಲಾಯಿತು. ಮುಂದೆ ಓದಿ...

 ಮೊದಲ ದಿನ 73% ಹಾಜರಾತಿ

ಮೊದಲ ದಿನ 73% ಹಾಜರಾತಿ

ಮೊದಲ ದಿನದಲ್ಲಿ ರಾಜ್ಯದಾದ್ಯಂತ (10 ಮತ್ತು 12ನೇ ತರಗತಿಗಳು) 73% ವಿದ್ಯಾರ್ಥಿಗಳ ಹಾಜರಾತಿ ದಾಖಲಾಗಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಪ್ರಕಾರ, ರಾಜ್ಯದ ಶಾಲೆಗಳ ಹತ್ತನೇ ತರಗತಿಯಲ್ಲಿ 41% ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಲ್ಲಿ 32.56% ಹಾಜರಾತಿ ದಾಖಲಾಗಿರುವುದಾಗಿ ತಿಳಿದುಬಂದಿದೆ.
ಸಿಬಿಎಸ್ ಇ ಹಾಗೂ ಐಸಿಎಸ್ ಇ ಮಂಡಳಿಗಳ ಶಾಲೆಗಳಲ್ಲೂ ಉತ್ತಮ ಹಾಜರಾತಿ ದಾಖಲಾಗಿದೆ.

 ಶಿಕ್ಷಕರೂ ಕೆಲವೆಡೆ ಹಾಜರಾಗಿಲ್ಲ

ಶಿಕ್ಷಕರೂ ಕೆಲವೆಡೆ ಹಾಜರಾಗಿಲ್ಲ

ಉಡುಪಿ ಜಿಲ್ಲೆಯಲ್ಲಿ ಶಿಕ್ಷಕಿಗೆ ಹಾಗೂ ಸಹಾಯಕಿ ಇಬ್ಬರಿಗೂ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಎರಡು ಶಾಲೆಗಳನ್ನು ತೆರೆಯಲಾಗಿಲ್ಲ. ಜೊತೆಗೆ ಕೊರೊನಾ ನೆಗೆಟಿವ್ ವರದಿ ಸಲ್ಲಿಸುವುದು ಕಡ್ಡಾಯವಾಗಿರುವ ಕಾರಣ ಕೆಲವು ಶಾಲೆಗಳಲ್ಲಿ ಕೋವಿಡ್ ಪರೀಕ್ಷೆಗಳಿಗೆ ಒಳಗಾಗುವ ಕಷ್ಟವನ್ನು ಉಲ್ಲೇಖಿಸಿ ಶಿಕ್ಷಕರೇ ಶಾಲೆಗೆ ಹಾಜರಾಗಿಲ್ಲ.

 ಸೋಮವಾರದಿಂದ ಶಾಲೆಗೆ ಇನ್ನಷ್ಟು ವಿದ್ಯಾರ್ಥಿಗಳು?

ಸೋಮವಾರದಿಂದ ಶಾಲೆಗೆ ಇನ್ನಷ್ಟು ವಿದ್ಯಾರ್ಥಿಗಳು?

ಸೋಮವಾರದಿಂದ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಬಹುದು. ಶುಕ್ರವಾರ ಶಾಲೆಗೆ ಹಾಜರಾಗದೇ ಇರಲು ಹಲವು ಕಾರಣಗಳಿವೆ. ಹೊಸ ವರ್ಷ ಎಂಬುದು ಮೊದಲ ಕಾರಣವಾಗಿದ್ದು, ಸೋಮವಾರದಿಂದ ಶಾಲೆಗೆ ಬರಲು ವಿದ್ಯಾರ್ಥಿಗಳು ತೀರ್ಮಾನಿಸಿರಬಹುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

"ಶಾಲೆಗೆ ಹಾಜರಾಗುವುದು ಕಡ್ಡಾಯವಲ್ಲ"

ಶಾಲೆಗೆ ಹಾಜರಾಗುವುದು ಕಡ್ಡಾಯವಲ್ಲ, ಅದು ವಿದ್ಯಾರ್ಥಿ ಹಾಗೂ ಅವರ ಪೋಷಕರ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಶಿಕ್ಷಣ ಇಲಾಖೆ ಆದೇಶಿಸಿದೆ. "ಇನ್ನೂ ಹಲವು ವಿದ್ಯಾರ್ಥಿಗಳು ಆನ್ ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಆದ್ದರಿಂದ ದಾಖಲಾಗಿ ನಂತರ ಹೆಚ್ಚಬಹುದು. ಜಿಲ್ಲಾಮಟ್ಟಗಳಲ್ಲಿ ಅಧಿಕಾರಿಗಳ ತಂಡ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕಲ್ಪಿಸಿರುವ ಸೌಲಭ್ಯಗಳ ಕುರಿತು ಪರಿಶೀಲಿಸುತ್ತಿದ್ದಾರೆ" ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಇದೇ ಸಂದರ್ಭ, ಮುಂದಿನ ಬುಧವಾರದ ಒಳಗೆ 10 ಹಾಗೂ 12ನೇ ತರಗತಿಗಳಿಗೆ ಪರೀಕ್ಷಾ ದಿನಾಂಕ ನಿಗದಿಗೊಳಿಸಿ ವೇಳಾಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

Recommended Video

ಮಕ್ಕಳನ್ನು ಶಾಲೆಗೆ ಕಳುಹಿಸೋದು ಎಷ್ಟರ ಮಟ್ಟಿಗೆ ಸುರಕ್ಷಿತ | Oneindia Kannada

English summary
Schools and colleges reopened after 10 months in karnataka with 73% attendance,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X