ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಜ್ಞರ ಸಮಿತಿ ಆಧರಿಸಿ ರಾಜ್ಯದಲ್ಲಿ1 ರಿಂದ 5 ನೇ ತರಗತಿ ಶಾಲೆ ಆರಂಭ: ಬಿ.ಸಿ. ನಾಗೇಶ್

|
Google Oneindia Kannada News

ಬೆಂಗಳೂರು: ಸೆ. 06: ರಾಜ್ಯದಲ್ಲಿ ಒಂದೂವರೆ ವರ್ಷದ ಬಳಿಕ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಾಲೆಗೆ ಹೋಗುವ ತವಕ. ಆರನೇ ತರಗತಿಯಿಂದ ಎಂಟನೇ ತರಗತಿ ವರೆಗೆ ಭೌತಿಕ ತರಗತಿಗಳ ಆರಂಭಕ್ಕೆ ಸರ್ಕಾರ ಅವಕಾಶ ನೀಡಿದ ಬೆನ್ನಲ್ಲೇ ಶಾಲಾ ಮಕ್ಕಳು ಖುಷಿಯಿಂದ ಶಾಲೆಗಳಿಗೆ ತೆರಳಿದ್ದಾರೆ. ಶಾಲೆ ಆರಂಭವಾದ ಮೊದಲ ದಿನವೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಜೀವನ ಭೀಮಾ ನಗರದ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ನೀಡಿದರು. ವಿದ್ಯಾರ್ಥಿಗಳಿಗೆ ಚಾಕೋಲೆಟ್ ಹಾಗೂ ಗುಲಾಬಿ ಹೂ ನೀಡಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಒಂದೂವರೆ ವರ್ಷದ ಬಳಿಕ 6, 7 ಮತ್ತು 8ನೇ ತರಗತಿಗಳ ಭೌತಿಕ ತರಗತಿಗಳು ರಾಜ್ಯದಲ್ಲಿ ಪುನಾರಂಭವಾಗಿದ್ದು, ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಸಚಿವರಿಂದ ಗುಲಾಬಿ ಹಾಗೂ ಚಾಕೋಲೆಟ್ ಪಡೆದು ತಮ್ಮ ತರಗತಿಗಳಿಗೆ ಖುಷಿಯಿಂದಲೇ ತೆರಳಿದರು.

ವಿಜ್ಞಾನಿಗಳ ಸಲಹೆ ಪಡೆದು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಬಿ.ಸಿ ನಾಗೇಶ್ವಿಜ್ಞಾನಿಗಳ ಸಲಹೆ ಪಡೆದು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಬಿ.ಸಿ ನಾಗೇಶ್

ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ. ಅದರಂತೆ ತರಗತಿಗಳಲ್ಲಿ ಒಂದು ಬೆಂಚಿಗೆ ಇಬ್ಬರು ಮಕ್ಕಳನ್ನು ಮಾತ್ರ ಕೂರಿಸಲಾಗಿದೆ. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಶಾಲೆಗೆ ಹಾಜರಾಗುವ ಮಕ್ಕಳು ತಮ್ಮ ಪಾಲಕರು, ಪೋಷಕರಿಂದ ಒಪ್ಪಿಗೆ ಪತ್ರ ತರಬೇಕು ಎಂದು ಸೂಚಿಸಲಾಗಿದೆ. ಪ್ರೌಢಶಾಲೆಯ 9 ಮತ್ತು 10ನೇ ತರಗತಿ ಮತ್ತು ಪಿಯು ತರಗತಿಗಳು ಸುರಕ್ಷತಾ ಕ್ರಮಗಳೊಂದಿಗೆ ಯಶಸ್ವಿಯಾಗಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಉನ್ನತಾಧಿಕಾರಿಗಳು, ಕೋವಿಡ್ -19 ತಜ್ಞರು, ಮಕ್ಕಳ ತಜ್ಞರು ಸೇರಿದಂತೆ ಸಂಬಂಧಪಟ್ಟ ಎಲ್ಲರಿಂದ ಅಭಿಪ್ರಾಯ ಸಂಗ್ರಹಿಸಿ, ಒಪ್ಪಿಗೆ ಪಡೆದು ಸೂಕ್ತ ಸಿದ್ದತೆಗಳನ್ನು ಮಾಡಿಕೊಂಡು 6ರಿಂದ 8ನೇ ತರಗತಿಗಳ ಭೌತಿಕ ತರಗತಿಗಳನ್ನು ಆರಂಭಿಸಲಾಗಿದೆ' ಎಂದು ಸಚಿವ ಬಿ.ಸಿ ನಾಗೇಶ್ ನುಡಿದರು.

School starts from one to fifth grade based on expert report says education minister B.C. Nagesh

'1ರಿಂದ 5ನೇ ತರಗತಿಗಳ ಭೌತಿಕ ತರಗತಿಗಳ ಆರಂಭಕ್ಕೆ ಎಂದಿನಂತೆ ತಜ್ಞರ ಅಭಿಪ್ರಾಯ, ಒಪ್ಪಿಗೆ ಪಡೆಯಲಾಗುತ್ತದೆ. 6ರಿಂದ 8ನೇ ತರಗತಿಗಳ ಭೌತಿಕ ತರಗತಿಗಳಲ್ಲಿ ಕಂಡು ಬರುವ ಅಂಶಗಳ ಆಧಾರದ ಮೇಲೆ 1ರಿಂದ 5ನೇ ತರಗತಿಗಳ ಆರಂಭದ ಕುರಿತು ನಿರ್ಧರಿಸಲಾಗುತ್ತದೆ.'ಶಾಲೆ ಅವಧಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚರಿಸಲು ಈಗಾಗಲೇ ಸಾರಿಗೆ ಸಚಿವರು, ಅಧಿಕಾರಿಗಳ ಜೊತೆ ಮಾತನಾಡಲಾಗಿದೆ. ಕೋವಿಡ್ ಪೂರ್ವದಲ್ಲಿ ಶಾಲೆ ಅವಧಿಗೆ ಬಸ್‌ಗಳು ಸಂಚರಿಸುತ್ತಿದ್ದವು. ಈಗ ಭೌತಿಕ ತರಗತಿಗಳು ಆರಂಭವಾಗಿರುವ ಕಾರಣ ಅದೇ ಸಮಯಕ್ಕೆ ಬಹುತೇಕ ಬಸ್ ಸಂಚರಿಸುತ್ತಿವೆ. ಹೊಸದಾಗಿ ಪಾಸ್ ಪಡೆಯುವವರೆಗೆ ಮಕ್ಕಳು ಬಸ್‌ಗಳಲ್ಲಿ ಸಂಚರಿಸಲು ಹಳೇ ಪಾಸ್ ಅಥವಾ ಶಾಲೆಯ ಐಡಿ ಕಾರ್ಡ್ ತೋರಿಸಿದರೆ ಸಾಕು. ಹಳೇ ಪಾಸ್‌ಗಳಿದ್ದರು ವಿದ್ಯಾರ್ಥಿಗಳ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು.'ಸಾಮಾಜಿಕ ಅಂತರ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕಿರುವ ಕಾರಣ ಮಕ್ಕಳನ್ನು ಶಾಲೆಗೆ ಬಿಟ್ಟು ಬರಲು ಸಾಧ್ಯವಾಗುವ, ವಾಹನ ವ್ಯವಸ್ಥೆ ಹೊಂದಿರುವ ಪಾಲಕರು ಸ್ವತಃ ತಾವೇ ಬಿಟ್ಟು ಬರಬಹುದು' ಎಂದು ಸಚಿವರು ಸಲಹೆ ನೀಡಿದರು.

School starts from one to fifth grade based on expert report says education minister B.C. Nagesh

ವಿದ್ಯಾರ್ಥಿಗಳ ಜೊತೆ ಮಾತು:

ತರಗತಿಗಳಿಗೆ ತೆರಳಿದ ಸಚಿವರು, ಭೌತಿಕ ತರಗತಿಗಳ ಆರಂಭದ ಕುರಿತು ಮಕ್ಕಳ ಜೊತೆ ಮಾತನಾಡಿದರು. ತರಗತಿ ಆರಂಭ ಕುರಿತು ಅಭಿಪ್ರಾಯ ಕೇಳಿದಾಗ, 'ಶಾಲೆಗೆ ಬರಲು ಖುಷಿಯಾಗುತ್ತಿದೆ. ಕೋವಿಡ್-19 ನಿಯಮಗಳನ್ನು ಪಾಲಿಸುತ್ತೇವೆ. ತರಗತಿಗಳು ಮುಂದುವರೆಯಬೇಕು. ಆನ್‌ಲೈನ್ ಕ್ಲಾಸ್‌ಗಿಂತ ಶಾಲೆಗೆ ಬರುವುದೇ ಬೆಸ್ಟ್. ಚೆನ್ನಾಗಿ ಅರ್ಥವಾಗುತ್ತದೆ' ಎಂದು ಹೇಳಿದರು.

Recommended Video

ಕತ್ತರಿ ಬದಲಿಗೆ ಹಲ್ಲಿನಿಂದ ಟೇಪ್ ಕಟ್ ಮಾಡಿದ ಪಾಕ್ ಮಂತ್ರಿಯ ಹಲ್ಲಿನ ಪವರ್ ನೋಡಿ | Oneindia Kannada

English summary
School starts from 1std to 5th std based on expert committee report says Education Minister B.C. Nagesh know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X