• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಬಹುದೊಡ್ಡ ರಿಸ್ಕ್‌ ತೆಗೆದುಕೊಂಡ ಸುರೇಶ್ ಕುಮಾರ್!

|

ಬೆಂಗಳೂರು, ಫೆ. 22: ರಾಜ್ಯ ಶಿಕ್ಷಣ ಇಲಾಖೆ ವಾರದ ಹಿಂದೆ ತೆಗೆದುಕೊಂಡ ನಿರ್ಧಾರದಂತೆ ಇಂದು ಫೆ.22ರಿಂದ 6, 7 ಹಾಗೂ 8ನೇ ತರಗತಿಗಳು ಸಂಪೂರ್ಣವಾಗಿ ಆರಂಭವಾಗಿವೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮುಚ್ಚಿರುವ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇದೇ ಸಂದರ್ಭದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟವನ್ನು ರಾಜ್ಯ ಆರೋಗ್ಯ ಇಲಾಖೆ ಜನರಿಗೆ ಎಚ್ಚರಿಕೆ ಕೊಟ್ಟಿದೆ.

ಕಳೆದೊಂದು ವರ್ಷದಿಂದ ಕೊರೊನಾ ನೆಪದಲ್ಲಿ ಕುಂಠಿತಗೊಂಡಿರುವ ಶೈಕ್ಷಣಿಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ಆರಂಭಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಶಾಲೆಗಳು ಆರಂಭವಾಗದೇ ಇದ್ದುದರಿಂದ ಮಕ್ಕಳ ಮನಸ್ಸಿನ ಮೇಲೆ ದೀರ್ಘ ಕಾಲದ ಪರಿಣಾಮಗಳಾಗುವ ಎಚ್ಚರಿಕೆಯನ್ನು ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯ ನಡೆಸಿರುವ ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ. ಆ ಪರಿಣಾಮ ಕೊರೊನಾಕ್ಕಿಂತ ಭೀಕರವಾಗಿರುತ್ತದೆ ಎಂದು ಅಧ್ಯಯನ ತಿಳಿಸಿದೆ. ಹೀಗಾಗಿ ಶಾಲೆ ಆರಂಭಿಸಲು ಪೋಷಕರ ಒತ್ತಡವೂ ಹೆಚ್ಚಾಗಿದ್ದು, ಅದರಂತೆ ಇಂದಿನಿಂದ ಮತ್ತಷ್ಟು ತರಗತಿಗಳು ಆರಂಭವಾಗಿವೆ.

ಇಂದಿನಿಂದ ಮತ್ತಷ್ಟು ತರಗತಿಗಳು ಆರಂಭ

ಇಂದಿನಿಂದ ಮತ್ತಷ್ಟು ತರಗತಿಗಳು ಆರಂಭ

ಕೋವಿಡ್ ತಾಂತ್ರಿಕ ಸಲಹಾ ಸಮಿತಿ‌ 5ನೇ ಬಾರಿ ಸಭೆ ನಡೆಸಿ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ಮಹತ್ವದ ಸಲಹೆ ನೀಡಿತ್ತು. ಅದರಂತೆ ಇಂದಿನಿಂದ ರಾಜ್ಯದಲ್ಲಿ 6, 7, 8 ಪೂರ್ಣ ಪ್ರಮಾಣದಲ್ಲಿ ಆರಂಭವಾಗಿವೆ. ವಿದ್ಯಾರ್ಥಿಗಳು ಆತಂಕ ಬಿಟ್ಟು ಶಾಲೆಯತ್ತ ಹೆಜ್ಜೆ ಹಾಕಿದ್ದು, ಹಾಜರಾತಿ ಕುರಿತು ಇನ್ನಷ್ಟೇ ಶಿಕ್ಷಣ ಇಲಾಖೆಯಿಂದ ಮಾಹಿತಿ ಬರಬೇಕಿದೆ. ಇವತ್ತು ಆಫ್‌ಲೈನ್‌ ತರಗತಿಗಳು ಆರಂಭವಾಗಿದ್ದರೂ ಆನ್‌ಲೈನ್‌ನಲ್ಲೂ ವಿದ್ಯಾಭ್ಯಾಸ ಮುಂದುವರೆಸಲಿ ಶಿಕ್ಷಣ ಇಲಾಖೆ ಅವಕಾಶ ಮಾಡಿಕೊಟ್ಟಿದೆ.

ಕೆಲವೆಡೆ ಶಾಲೆ ಆರಂಭ ಇಲ್ಲ!

ಕೆಲವೆಡೆ ಶಾಲೆ ಆರಂಭ ಇಲ್ಲ!

ಕೊರೊನಾ ವೈರಸ್ 2ನೇ ಅಲೆಯ ಹಿನ್ನೆಲೆಯಲ್ಲಿ ಕೇರಳ ಗಡಿಭಾಗದಲ್ಲಿ ಹಾಗೂ ಬೆಂಗಳೂರಿನಲ್ಲಿ 6 ಹಾಗೂ 7ನೇ ತರಗತಿಗಳನ್ನು ಇಂದಿನಿಂದ (ಫೆ.22) ಆರಂಭಿಸಿಲ್ಲ. ಬದಲಿಗೆ 8ನೇ ತರಗತಿಯನ್ನು ಮಾತ್ರ ಆರಂಭಿಸಲಾಗಿದೆ. ಕೆರಳದಿಂದ ಬರುವ ಎಲ್ಲಾ ವಿಧ್ಯಾರ್ಥಿ ಮತ್ತು ಶಿಕ್ಷಕರು ಕೊವಿಡ್ ನೆಗೆಟಿವ್ ವರದಿ ಇದ್ದಲ್ಲಿ ಮಾತ್ರ ಶಾಲೆಗೆ ಬರಲು ಅವಕಾಶವಿದೆ. ಹಾಜರಾತಿ ಯಾವುದೇ ಕಾರಣಕ್ಕೂ ಕಡ್ಡಾಯವಲ್ಲ ಎಂದು ಸಚಿವ ಸುರೇಶ್ ಕುಮಾರ್ ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಶಾಲೆ ಬಂದ್ ಕುರಿತು ಅಧ್ಯಯನ

ಶಾಲೆ ಬಂದ್ ಕುರಿತು ಅಧ್ಯಯನ

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯ ಆರು ರಾಜ್ಯಗಳಲ್ಲಿ‌ ಶಾಲೆ ಬಂದ್ ಇರುವ ಕುರಿತು ಮಾಡಸಿರುವ ಸಮೀಕ್ಷೆಯಲ್ಲಿ ಆತಂಕಕಾರಿ ವಿಷಯ ಬಹಿರಂಗವಾಗಿದೆ. ಶಾಲೆಗಳು ಆರಂಭವಾಗದೇ ಇರುವುದರಿಂದ ಶೇ. 92ರಷ್ಟು ಮಕ್ಕಳು ಗಣಿತದಲ್ಲಿ ಹಿಂದೆ ಬಿದ್ದಿದ್ದಾರೆ. ಶೆ. 80ರಷ್ಟು ಮಕ್ಕಳು ಅಕ್ಷರಗಳನ್ನೇ ಮರೆತಿದ್ದಾರೆ. ಇದು ಅತ್ಯಂತ ಆತಂಕ ತರುವ ವಿಷಯವಾಗಿದ್ದು, ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಶಾಲಾರಂಭ ಮಾಡಲು ರಾಜ್ಯ ಶಿಕ್ಷಣ ಇಲಾಖೆ ಮುಂದಾಗಿದೆ.

ಹೀಗಾಗಿ ದೂರಗಾಮಿ ಪರಿಣಾಮ ತಡೆಯಲು ಪೂರ್ಣ ಪ್ರಮಾಣದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಬೇಕಿದೆ. ಸಿಬಿಎಸ್‌ಸಿ ಬರುವ ಎಪ್ರಿಲ್ 1 ರಿಂದ ಶೈಕ್ಷಣಿಕ ವರ್ಷ ಆರಂಭದ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ನಾವೂ ಕೂಡ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ವರದಿಯಂತೆ ನಡೆದುಕೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಬೇರೆ ರಾಜ್ಯಗಳ ಶೈಕ್ಷಣಿಕ ಸ್ಥಿತಿ

ಬೇರೆ ರಾಜ್ಯಗಳ ಶೈಕ್ಷಣಿಕ ಸ್ಥಿತಿ

ಈಗಾಗಲೇ ಪಂಜಾಬ್ ಮತ್ತು ಆಂಧ್ರಪ್ರದೇಶದಲ್ಲಿ ಒಂದನೇ ತರಗತಿಯಿಂದ ಎಲ್ಲ ತರಗತಿಗಳು ಆರಂಭವಾಗಿವೆ. ದೆಹಲಿ ಮತ್ತು ಒರಿಸ್ಸಾದಲ್ಲಿ 9ರಿಂದ ಮೇಲಿನ ತರಗತಿಗಳು, ಕೇರಳದಲ್ಲಿ 10ರಿಂದ ಮೇಲಿನ ತರಗತಿಗಳು, ಮಹಾರಾಷ್ಟ್ರದಲ್ಲಿ 5ರಿಂದ ಮೇಲಿನ ತರಗತಿಗಳು ಹರಿಯಾಣದಲ್ಲಿ 9ರಿಂದ ಮೇಲಿನ ತರಗತಿಗಳು ಆರಂಭವಾಗಿವೆ.

ರಾಜ್ಯದಲ್ಲಿ ಈಗಾಗಲೇ ಆರಂಭವಾಗಿರುವ 10ನೇ ತರಗತಿ ಸರಾಸರಿ ಹಾಜರಾತಿ ಶೇಕಡಾ 70.7, 9ನೇ ತರಗತಿ ಸರಾಸರಿ ಹಾಜರಾತಿ ಶೇಕಡಾ 60.3, 6 ರಿಂದ 8ನೇ ತರಗತಿ ವಿದ್ಯಾಗಮ ಕಾರ್ಯಕ್ರಮದ ಸರಾಸರಿ ಹಾಜರಾತಿ ಶೇಕಡಾ 50.5 ಇದೆ. ಪಿಯು ತರಗತಿಗಳಲ್ಲೂ ಶೇ. 75ಕ್ಕೂ ಹೆಚ್ಚು ಹಾಜರಾತಿ ಇದೆ. ಟಿ.ಎ.ಸಿ. ಶಿಫಾರಸ್ಸಿನಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಎಸ್.ಓ.ಪಿ ಅನುಸಾರ ತೆಗೆದುಕೊಂಡಿದ್ದರಿಂದ ಹಾಗೂ ಶಿಕ್ಷಕರಿಗೆ ಮುಂಚಿತವಾಗಿ ಕೋವಿಡ್-19 ಪರೀಕ್ಷೆಗಳನ್ನು ಮಾಡಿಸಿದ್ದ ಹಿನ್ನಲೆಯಲ್ಲಿ ಯಾವುದೇ ಶಾಲೆಯಿಂದ ಸೋಂಕು ಹರಡುವಿಕೆ ಕುರಿತು ಈ ವರೆಗೆ ವರದಿಯಾಗಿಲ್ಲ. ಈ ಎಲ್ಲ ಅಂಶಗಳನ್ನು ಅಂಶವನ್ನು ತಾಂತ್ರಿಕ ಸಲಹಾ ಸಮಿತಿ ಅವಲೋಕಿಸಿ ಎಲ್ಲ ತರಗತಿಗಳ ಆರಂಭಕ್ಕೆ ಅನುಮತಿ ನೀಡಿದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

   ಶಾಸಕ ಯತ್ನಾಳ್ ವಿರುದ್ಧ ಸಚಿವ ಬಿ.ಸಿ ಪಾಟೀಲ್ ಕಿಡಿ | Oneindia Kannada

   English summary
   After 11 months School reopened for classes 6th, 7th and 8th tioday (Feb 22st) in Karnataka, Know more about school reopen here.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X