ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲೆ ಪ್ರಾರಂಭಕ್ಕೆ ಪೋಷಕರ ಬೆಂಬಲ- ಹೊರಟ್ಟಿ ಪತ್ರಕ್ಕೆ ಬೇಸರ

|
Google Oneindia Kannada News

ಬೆಂಗಳೂರು , ಮೇ 7: ಶಾಲೆಗಳು ಆರಂಭಕ್ಕೆ ದಿನಗಣನೇ ಶುರುವಾಗಿದೆ. ಈಗಗಾಲೇ ಮೇ 16 ರಂದು ಶಾಲೆಗಳನ್ನು ತೆರೆಯಲು ಶಿಕ್ಷಣ ಇಲಾಖೆ ಸಿದ್ತೆಯನ್ನು ಮಾಡಿಕೊಂಡಿದೆ. ಶಾಲೆಗಳು ಆರಂಭವಾಗುವ ಹೊತ್ತಿನಲ್ಲೇ ಎಂಎಲ್ಸಿ ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಮುಖ್ಯಮಂತ್ರಿಗೆ ಪತ್ರ ಬರೆದು ಶಾಲೆಯನ್ನು ಬೇಗ ಆರಂಭಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಖಾಸಗಿ ಶಾಲಾ ಕಾಲೇಜು ಪೋಷಕರ ಸಂಘಟನೆಗಳ ಸಮನ್ವಯ ವೇದಿಕೆ ತೀವ್ರ ವಿರೋಧ ವ್ಯಕ್ತ ಪಡಿಸಿ ಶಾಲೆ ಕಾಲೇಜು ಮೇ 16 ರಂದೇ ಪ್ರಾರಂಭಿಸಬೇಕು ಎಂದು ತಿಳಿಸಿದೆ.

ಪೋಷಕರ ಸಂಘ ಹೇಳುವುದೇನು?

ಪೋಷಕರ ಸಂಘ ಹೇಳುವುದೇನು?

ಶಾಲೆಗಳನ್ನು ಮೇ 16 ರಂದು ಪ್ರಾರಂಭಿಸಿರುವುದಕ್ಕೆ ವಿರೋಧಿಸಿ ಮುಖ್ಯಮಂತ್ರಿಗಳಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಬೊಮ್ಮಾಯಿ ಪತ್ರ ಬರೆದಿದ್ದಾರೆ. ಅವರ ಈ ನಡೆಯನ್ನು ನಾವು ಖಂಡಿಸುತ್ತೇವೆ. ಹೊರಟ್ಟಿಯವರು ಸಂವಿಧಾನಿಕ ಹುದ್ದೆಯನ್ನು ಬಳಸಿಕೊಂಡು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಮೇಲೆ ಪ್ರಭಾವ ಬೀರಿ ಕೋಟ್ಯಂತರ ಮಕ್ಕಳ ಹಿತಾಸಕ್ತಿಯನ್ನು ಬಲಿಕೊಡುತ್ತಿರುವುದು ದುರಾದೃಷ್ಟಕರ ಎಂದಿದೆ.

ರಿಮೋಟ್ ಸ್ಕೂಲ್ ಕಲಿಕೆ ಉತ್ತಮವಾಗಿಲ್ಲ

ರಿಮೋಟ್ ಸ್ಕೂಲ್ ಕಲಿಕೆ ಉತ್ತಮವಾಗಿಲ್ಲ

ಕೋವಿಡ್ ನಿಂದಾಗಿ ಶಾಲೆಗಳಲ್ಲಿ ನಿರಂತರ ಕಲಿಕೆಯಾಗಿಲ್ಲ. ನಮ್ಮ ರಾಜ್ಯದ ಶಾಲೆಯು ಸೇರಿದಂತೆ ಜಗತ್ತಿನಾದ್ಯಂತದ ನಡೆದಿರು ಸಂಶೋಧನೆಗಳ ಬಗ್ಗೆ ತಿಳಿದುಕೊಳ್ಳಲು ರಿಮೋಟ್ ಸ್ಕೂಲ್ ಉತ್ತಮವಾಗಿಲ್ಲ. ಮಕ್ಕಳು ಕಲಿಕೆಯಲ್ಲೂ ತೀರ ಹಿಂದುಳಿದಿದೆ. ಇದು ತಲೆಮಾರುಗಳ ಮೇಲೆೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಪೋಷಕರ ಸಂಘ ಅಂದಾಜಿಸಿದೆ. ಕೋವಿಡ್ ನ ಕಲಿಕಾ ಅಂತರ ಮತ್ತು ಕಲಿಕಾ ನಷ್ಟವನ್ನು ಸರಿದೂಗಿಸಿ ಕೊಳ್ಳಲು ಮೇ 16 ರಿಂದ ಶಾಲೆಗಳನ್ನು ಪ್ರಾರಂಭಿಸುವುದು ಉತ್ತಮವಾದ ಕಾರ್ಯವಾಗಿದೆ.

ಇದರಿಂದಾಗಿ ಮಕ್ಕಳ ಕಲಿಕೆಯ ಗುಣಮಟ್ಟವನ್ನು ವೃದ್ದಿಸಹುದಾಗಿದೆ. ಮೇ 16 ರಂದ ಶಾಲೆಯನ್ನು ಪ್ರಾರಂಭಿಸಬೇಕು. ಸರ್ಕಾರ ಶಾಲೆಯನ್ನು ಪ್ರಾರಂಭಿಸುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಬಸವರಾಜ ಹೊರಟ್ಟಿಯವರು ತಮ್ಮ ರಾಜಕೀಯ ಕಾರಣಕ್ಕಾಗಿ ಶಾಲೆಗಳನ್ನು ತೆರೆಯಲು ವಿರೋಧಿಸಿರುವುದನ್ನು ಖಂಡಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಖಾಸಗಿ ಶಾಲಾ ಕಾಲೇಜು ಪೋಷಕರ ಸಂಘಟನೆಗಳ ಸಮನ್ವಯ ವೇದಿಕೆ ಹೇಳಿದೆ.

ಬಸವರಾಜ ಹೊರಟ್ಟಿ ಏನು ಹೇಳಿದ್ದೇನು?

ಬಸವರಾಜ ಹೊರಟ್ಟಿ ಏನು ಹೇಳಿದ್ದೇನು?

ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚಿದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಉರಿಬಿಸಿಲು ಹೆಚ್ಚಿರುವುದರಿಂದ ಶಾಲೆಗಳನ್ನು ಮೇ 15ರ ಬದಲಾಗಿ, ಜೂನ್ 1 ರಿಂದ ಪ್ರಾರಂಭಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಪತ್ರ ಬರೆದಿದ್ದರು.

''ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಜೂನ್ 1 ರಿಂದ ಶಾಲೆಗಳನ್ನು ಆರಂಭಿಸಬೇಕು. ಕಡಿಮೆ ಬೀಳುವ ಶೈಕ್ಷಣಿಕ ದಿನಗಳಲ್ಲಿ ಪ್ರತಿ ಶನಿವಾರ ಹೆಚ್ಚುವರಿ ತರಗತಿ ನಡೆಸುವ ಮೂಲಕ ಸರಿಪಡಿಸಿಕೊಳ್ಳಬಹುದಾಗಿದೆ. ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಮೇ 16 ರಿಂದ ಪ್ರಾರಂಭಿಸಲು ಶಿಕ್ಷಣ ಇಲಾಖೆ ಮುಂದಾಗಿರುವುದು ಎಳೆಯ ಮಕ್ಕಳ ಪಾಲಕರಿಗೆ ನುಂಗಲಾರದ ತುತ್ತಾಗಿದೆ. ಶಾಲೆ ಆರಂಭಿಸಿದರೂ, ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಸಿದ್ಧರಿಲ್ಲ. ಶಾಲೆ ಆರಂಭಿಸಿದರೆ, ಮಕ್ಕಳು ಬಿಸಿಲಿನ ತಾಪಕ್ಕೆ ಒಳಗಾಗಬಹುದು'' ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.

ಪೋಷಕರ ವಿರೋಧ

ಪೋಷಕರ ವಿರೋಧ

ಬಸವರಾಜ ಹೊರಟ್ಟಿಯವರ ಬರೆದ ಪತ್ರಕ್ಕೆ ಪೋಷಕರು ವಿರೋಧವನ್ನು ವ್ಯಕ್ತ ಪಡಿಸಿದ್ದರು. ಶಿಕ್ಷಣ ಇಲಾಖೆಯು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಹಾಕಿಕೊಂಡು ಮಕ್ಕಳಿಗೆ ಈ ಶೈಕ್ಷಣಿಕ ವರ್ಷ ಕಲಿಕೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಎಲ್ಲ ರೀತಿಯ ಸಿದ್ದತೆಯನ್ನು ಮಾಡಿಕೊಂಡಿದೆ. ಶಿಕ್ಷಮ ಸಚಿವರು ಮೇ 16 ರಿಂದಲೇ ಶಾಲೆ ಆರಂಭ ಅನ್ನೋದನ್ನು ಖಚಿತಪಡಿಸಿದ್ದಾರೆ.

English summary
School reopen issue on summer vacation Parents union objected to Basavaraja horatti letter. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X