ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು ಒಳಮೀಸಲಾತಿ ವಿವಾದ? ಇಲ್ಲಿದೆ ಸಂಪೂರ್ಣ ಮಾಹಿತಿ!

|
Google Oneindia Kannada News

ಬೆಂಗಳೂರು, ಆ. 31: ಒಳಮೀಸಲಾತಿ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಒಳಮೀಸಲಾತಿ ಕುರಿತು ನ್ಯಾ. ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರಬೇಕು ಎಂಬ ಒತ್ತಾಯಗಳು ಮತ್ತೆ ಹೆಚ್ಚುತ್ತಿವೆ. ಆಯೋಗ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ 8 ವರ್ಷಗಳಾಗುತ್ತ ಬಂದಿವೆ. ಆದರೆ ವರದಿಯನ್ನು ಅನುಷ್ಠಾನಗೊಳಿಸುವ ಪ್ರಯತ್ನವನ್ನು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸರ್ಕಾರಗಳು ಮಾಡಿಲ್ಲ ಎನ್ನುವುದು ನಿಜ.

Recommended Video

ಕಾಂಗ್ರೆಸ್ ನ ನಿಷ್ಠಾವಂತ ಕಟ್ಟಾಳು, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ | Oneindia Kannada

ವಿರೋಧ ಪಕ್ಷಗಳ ಸ್ಥಾನದಲ್ಲಿರುವಾಗ ಒತ್ತಾಯ ಮಾಡುವವರು ಅಧಿಕಾರಕ್ಕೆ ಬಂದಾಗ ಒಳ ಮೀಸಲಾತಿ ಜಾರಿ ವಿಚಾರದ ಬಗ್ಗೆ ಜಾಣ ಮೌನ ವಹಿಸುತ್ತಾರೆ. ಸಂವಿಧಾನದ ಆಶಯದಂತೆಯೆ ನ್ಯಾ. ಸದಾಶಿವ ಆಯೋಗ ವರದಿ ಕೊಟ್ಟಿದೆ. ಆದರೂ ಒಳಮೀಸಲಾತಿ ಜಾರಿಗೆ ಪರಿಶಿಷ್ಟ ಜಾತಿಗಳಲ್ಲಿಯೇ ವಿರೋಧ ವ್ಯಕ್ತವಾಗುತ್ತಿದೆ. ಮೀಸಲಾತಿಯನ್ನು ಪಡೆದವರೇ ಮತ್ತೆ ಪಡೆಯುತ್ತಿದ್ದಾರೆ ಎಂಬುದು ಕೂಡ ಒಳಮೀಸಲಾತಿ ಜಾರಿಗೆ ಆಗ್ರಹಿಸುತ್ತಿರುವವರ ಆರೋಪ. ಇದೀಗ ಮತ್ತೆ ಒಳಮೀಸಲಾತಿ ಜಾರಿಗೆ ರಾಜಕೀಯ ನಾಯಕರು, ಮಠಾಧೀಶರು ಹಾಗೂ ಸಂಘಟನೆಗಳ ಒತ್ತಡ ಹೆಚ್ಚಾಗುತ್ತಿದೆ. ಇದೇ ವಿಚಾರವಾಗಿ ಪರಿಶಿಷ್ಟ ಸಮುದಾಯದ ನಾಯಕರು ಆಗ್ರಹಿಸಿದ್ದಾರೆ.

ಯಥಾವತ್ ಜಾರಿಮಾಡಿ

ಯಥಾವತ್ ಜಾರಿಮಾಡಿ

ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ. ಸದಾಶಿವ ಆಯೋಗದ ವರದಿಯ ಜಾರಿಗೆ ಪರಿಶಿಷ್ಟ ಸಮುದಾಯದ ನಾಯಕರು ಆಗ್ರಹಿಸಿದ್ದಾರೆ. ಈ ಕುರಿತು ಸಂಸದ ಕೆ.ಹೆಚ್. ಮುನಿಯಪ್ಪ, ಚಂದ್ರಪ್ಪ, ಪರಿಷತ್ ಸದಸ್ಯ ಧರ್ಮಸೇನ ಅವರು ಜಂಟಿ ಸುದ್ದಿಗೋಷ್ಠಿ ಮಾಡಿದ್ದಾರೆ. ನ್ಯಾ. ಸದಾಶಿವ ಅವರ ಆಯೋಗದ ವರದಿಯನ್ನು ಯಥಾವತ್ ಜಾರಿ ಮಾಡಬೇಕು ಎಂದು ಅವರೆಲ್ಲರೂ ಆಗ್ರಹಿಸಿದ್ದಾರೆ.

ಸುಪ್ರೀಂ ಕೋರ್ಟ್ ಕೂಡ ಒಳಮೀಸಲಾತಿ ಕೊಡುವ ಕುರಿತು ತಿಳಿಸಿದೆ. ಈಗ ಎಡಗೈ, ಬಲಗೈ, ಬೋವಿ, ಲಂಬಾಣಿ ಸಮುದಾಯಗಳು ಪರಿಶಿಷ್ಟ ಜಾತಿಯಲ್ಲಿವೆ. ಪ್ರಸ್ತುತ ಮೀಸಲಾತಿಯಲ್ಲಿ ಕೆಲವೊಂದು ಸಮಸ್ಯೆಗಳಿವೆ. ಎಲ್ಲರಿಗೂ ಸಮಾನವಾಗಿ ಮೀಸಲಾತಿ ಸಿಗುತ್ತಿಲ್ಲ. ಈ ವರದಿ ಜಾರಿಯಾದರೆ ಎಲ್ಲರಿಗೂ ಸಮಾನವಾದ ಮೀಸಲಾತಿಯ ಮೂಲಕ ಎಲ್ಲರಿಗೂ ನ್ಯಾಯ ಸಿಗಲಿದೆ. ಹಿಂದೆ ಸಿದ್ದರಾಮಯ್ಯ ಅವರು ವರದಿ ಜಾರಿಗೆ ಮುಂದಾಗಿದ್ದರು. ಚುನಾವಣೆ ಎದುರಾದ ಹಿನ್ನೆಲೆ ಅಲ್ಲಿಗೇ ಕೈಬಿಟ್ಟಿದ್ದರು ಎಂದು ಮಾಜಿ ಕೇಂದ್ರ ಸಚಿವ ಮಾಜಿ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.

ನಾವೆಲ್ಲ ಒಟ್ಟಾಗಿಯೇ ಇರ್ತೇವೆ

ನಾವೆಲ್ಲ ಒಟ್ಟಾಗಿಯೇ ಇರ್ತೇವೆ

ಎಡಗೈ, ಬಲಗೈ ನಡುವೆ ಕಚ್ಚಾಟವೇನಿಲ್ಲ. ಒಳಮೀಸಲಾತಿ ವರದಿ ಜಾರಿಯಾದರೂ ನಾವೆಲ್ಲ ಒಟ್ಟಾಗಿಯೇ ಇರುತ್ತೇವೆ. ಡಿಸಿಎಂ ಆಗಿ ಗೋವಿಂದ ಕಾರಜೋಳ ಅವರಿದ್ದಾರೆ. ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಧೃಡ ನಿರ್ಧಾರ ತೆಗೆದುಕೊಳ್ಳಬೇಕು. ಸಿಎಂ ಯಡಿಯೂರಪ್ಪ ಅವರು ಮನಸ್ಸು ಮಾಡಿ ಜಾರಿಮಾಡಬೇಕು ಎಂದು ಕೆ.ಹೆಚ್. ಮುನಿಯಪ್ಪ ಒತ್ತಾಯಿಸಿದ್ದಾರೆ.

ಹಿಂದೆ ಬಿಜೆಪಿಯವರು ಸರಿಯಾಗಿ ಬೆಂಬಲಿಸಲಿಲ್ಲ. ಈಗ ಸರ್ಕಾರವೂ ಬಿಜೆಪಿಯದ್ದೇ ಇದೆ. ಒಳಮೀಸಲಾತಿ ಜಾರಿಗೆ ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ವಿರೋಧಿಸುವುದಿಲ್ಲ. ಇದೇ ಅಧಿವೇಶನದಲ್ಲಿ ವರದಿಯನ್ನು ಅಂಗೀಕರಿಸಬೇಕು.

24 ಗಂಟೆಯೊಳಗೆ ಜಾರಿಗೆ

24 ಗಂಟೆಯೊಳಗೆ ಜಾರಿಗೆ

ಸುಪ್ರೀಂಕೋರ್ಟ್ ಸೂಚನೆಯಂತೆಯೆ ಒಳ ನ್ಯಾ. ಸದಾಶಿವ ಆಯೋಗದ ರಚಿಸಲಾತ್ತು. ಆಯೋಗ ವರದಿಯನ್ನೂ ಕೊಟ್ಟಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ವರದಿ ಜಾರಿ ಮಾಡುವ ಮಾತನ್ನು ಬಿಜೆಪಿ ನಾಯಕರು ಹೇಳಿದ್ದರು. ಆದರೆ ಮತ್ತೆ ಬಿಜೆಪಿ ಸರ್ಕಾರ ಬಂದು ವರ್ಷವಾಗಿದೆ. ಆದರೆ ಅವರು ಕೊಟ್ಟಿದ್ದ ಭರವಸೆಯಂತೆ ಇನ್ನೂ 24 ಗಂಟೆ ಮುಗಿದಿಲ್ಲ ಅನ್ನಿಸುತ್ತಿದೆ. ಈಗಲಾದರೂ ವರದಿಯನ್ನು ಜಾರಿಗೊಳಿಸಲಿ. ನಾವು ಎಲ್ಲ ಅಸ್ಪೃಶ್ಯರೂ ಒಟ್ಟಾಗಿಯೇ ಒಪ್ಪಿಕೊಳ್ಳುತ್ತೇವೆ ಎಂದು ಮಾಜಿ ಸಂಸದ ಚಂದ್ರಪ್ಪ ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಸ್ಪೃಶ್ಯರನ್ನೂ ಸೇರಿಸಲಾಗಿದೆ

ಸ್ಪೃಶ್ಯರನ್ನೂ ಸೇರಿಸಲಾಗಿದೆ

ಸ್ಪೃಶ್ಯರನ್ನೂ ನಮ್ಮೊಂದಿಗೆ ಮೀಸಲಾತಿಗೆ ಸೇರಿದಲಾಗಿದೆ ಎಂಬ ಗಂಭೀರ ಆರೋಪವನ್ನು ವಿಧಾನ ಪರಿಷತ್ ಸದಸ್ಯ ಧರ್ಮಸೇನಾ ಅವರು ಮಾಡಿದ್ದಾರೆ. ಹಿಂದೆ ನಮ್ಮ ತಂದೆ ರಾಚಯ್ಯ ಅವರು ಒಳಮೀಸಲಾತಿ ಬಗ್ಗೆ ಓಡಾಡಿದ್ದರು. ನೀವು ಯಾವ ವರ್ಗಕ್ಕೆ ಎಷ್ಟು ಮೀಸಲಾತಿ ಕೊಡುತ್ತಿರೋ ಗೊತ್ತಿಲ್ಲ. ನಮ್ಮೊಂದಿಗೆ ಇನ್ನಷ್ಟು ಜಾತಿಗಳನ್ನು ಸೇರಿಸಲಾಗಿದೆ. ಅವರಿಗೂ ಸಮಾನ ಮೀಸಲಾತಿ ಕಲ್ಪಿಸಲಾಗಿದೆ. ನಾವು ತುಳಿತಕ್ಕೊಳಗಾದ ಸಮುದಾಯದವರು.

ನಮ್ಮ ಮೀಸಲಾತಿಯಲ್ಲೇ ಸ್ಪೃಶ್ಯರಿಗೂ ಅವಕಾಶ ನೀಡಲಾಗಿದೆ. ಈಗ ಜನಸಂಖ್ಯೆಗನುಗುಣವಾಗಿ ನಮಗೆ ಒಳಮೀಸಲಾತಿ ಕೊಡಿ. ಕೆನೆಪದರದಡಿ ಮೀಸಲಾತಿಯನ್ನು ಪರಿಷ್ಕರಿಸಿ. ಹೆಚ್ಚು ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತಿ. ಈ ಅಧಿವೇಶನದವರೆಗೂ ಕಾಯುವುದು ಬೇಡ. ಸಂಪುಟದಲ್ಲಿ ಒಪ್ಪಿಗೆ ಕೊಟ್ಟು ಕೇಂದ್ರ ಸರ್ಕಾರಕ್ಕೆ ಕಳಿಸಿ ಕೊಡಿ ಎಂದು ಧರ್ಮಸೇನ ಒತ್ತಾಯಿಸಿದ್ದಾರೆ.

ಜಾತಿ ಗಣತಿ ವರದಿ ಜಾರಿ

ಜಾತಿ ಗಣತಿ ವರದಿ ಜಾರಿ

ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರ ಮಾಡಿಸಿದ್ದ ಜಾತಿ ಜನಗಣತಿ ವರದಿಯನ್ನು ಬಿಡುಗಡೆ ಮಾಡಬೇಕು. ಅದರಿಂದ ಮೀಸಲಾತಿಯ ಬಗ್ಗೆಯೂ ಸ್ಪಷ್ಟತೆ ಸಿಗಲಿದೆ. ಜೊತೆಗೆ ತುಳಿತಕ್ಕೊಳಗಾದವರಿಗೆ ವಿಶೇಷ ಸವಲತ್ತು ನೀಡಬಹುದು. ಎಸ್ಸಿ, ಎಸ್ಟಿ, ಓಬಿಸಿ ಯಾರೇ ಆಗಿರಲಿ ಅವರಿಗೂ ಕೊಡಿ. ಸಮಾಜ ಕಲ್ಯಾಣ ಇಲಾಖೆ ಜಾತಿಗಣತಿ ಮಾಡಿಸಿದೆ. ಆದರೆ ಜಾತಿ ಜನಗಣಿತಿಯನ್ನು ಬಹಿರಂಗ ಮಾಡದೇ ಪೆಂಡಿಂಗ್ ಇಡಲಾಗಿದೆ. ಆಗಲೇ ಬಲಗೈ, ಎಡಗೈ ಸಮುದಾಯದ ಪ್ರತಿನಿಧಿ ಸಭೆ ನಡೆಸಿದ್ದೆವು. ಈಗಿನ ಡಿಸಿಎಂ ಗೋವಿಂದ್ ಕಾರಜೋಳ ಅವರ ನೇತೃತ್ವದಲ್ಲಿಯೇ ಸಭೆ ನಡೆಸಿದ್ದೆವು ಎಂದು ಪರಿಶಿಷ್ಟ ಸಮುದಾಯದ ನಾಯಕರು ಮಾಹಿತಿ ನೀಡಿದ್ದಾರೆ.

ಏನಿದು ನ್ಯಾ. ಸದಾಶಿವ ಆಯೋಗ?

ಏನಿದು ನ್ಯಾ. ಸದಾಶಿವ ಆಯೋಗ?

2004ರಲ್ಲಿ ಒಳಮೀಸಲಾತಿ ಕುರಿತು ಮಹತ್ವದ ತೀರ್ಪು ಕೊಟ್ಟಿತ್ತು. ಅದರ ಆಧಾರದ ಮೇಲೆ 2005 ರಲ್ಲಿ ಆಗಿನ ಸರ್ಕಾರ ನ್ಯಾಯಮೂರ್ತಿ ಎ.ಜೆ‌. ಸದಾಶಿವ ಅವರ ನೇತೃತ್ವದ ಸಮಿತಿ ರಚಿಸಿತ್ತು. ನಂತರ 2012ರಲ್ಲಿ ನ್ಯಾ. ಸದಾಶಿವ ಆಯೋಗ ವರದಿ ಸಲ್ಲಿಸಿದಾಗಿನಿಂದಲೂ ಸಹ ಮೀಸಲಾತಿಯೊಳಗಿನ ಮೀಸಲಾತಿಯ ಬೇಡಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಲೇ ಬಂದಿದೆ.

ಆದರೆ ಆಗಿದ್ದ ಬಿ.ಜೆ.ಪಿ ಸರ್ಕಾರವಾಗಲಿ, ನಂತರ ಅಧಿಕಾರ ಹಿಡಿದ ಕಾಂಗ್ರೆಸ್ ಸರ್ಕಾರವಾಗಲಿ ಸದಾಶಿವ ವರದಿಯನ್ನು ಅನುಷ್ಠಾನಗೊಳಿಸುವುದಿರಲಿ, ಕೊನೆಪಕ್ಷ ವರದಿಯ ಚರ್ಚೆಗೂ ಸಹ ಮುಂದಾಗಿಲ್ಲ. ಕಳೆದ ಕಾಂಗ್ರೆಸ್ ಸರ್ಕಾರದಲ್ಲಿಯೂ ನ್ಯಾ. ಸದಾಶಿವ ಆಯೋಗದ ವರದಿ‌ಯ‌ ಮಂಡನೆ, ಚರ್ಚೆ, ಕೇಂದ್ರಕ್ಕೆ ಶಿಫಾರಸ್ಸು ಆಗಿಲ್ಲ. ನ್ಯಾ. ಸದಾಶಿವ ವರದಿಯು ಸಾರ್ವಜನಿಕರಿಗೆ ಇಂದಿಗೂ ಲಭ್ಯವಿಲ್ಲ. ಆದರೆ ವರದಿಯ ಕೆಲವು ಮುಖ್ಯ ವಿಚಾರಗಳು, ಅಂಕಿಅಂಶಗಳು ಸೋರಿಕೆಯಾಗಿವೆ ಎಂಬ ಅಂಶದ ಆಧಾರದ ಮೇಲೆ ಇಂದಿಗೂ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಹೋರಾಟ ಪ್ರತಿರೋಧಗಳು ಸಹ ನಡೆಯುತ್ತಲೇ ಇವೆ. ಮಾದಿಗ ಸಮುದಾಯವು ತನಗೆ ಸಿಗಬೇಕಿದ್ದ ನ್ಯಾಯಬದ್ಧ ಮೀಸಲಾತಿಯ ಪಾಲನ್ನು ಸದಾಶಿವ ವರದಿಯ ಆಧಾರದ ಮೇಲೆ ಆಗ್ರಹಿಸುವುದನ್ನು ಹೊಲೆಯ ಇನ್ನಿತರ ಸಮುದಾಯಗಳ ಕೆಲವರು ತಮ್ಮ ಅಸ್ತಿತ್ವವನ್ನೇ ಕಳೆದು ಕೊಳ್ಳುತ್ತಿದ್ದೇವೆಂಬಂತೆ ಭಾವಿಸಿ ವಿರೋಧಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

English summary
Scheduled cast leaders have demanded the implementation of the A J Sadashiva Commission report. Former MP K.H. Muniyappa, Chandrappa and MLC Dharmasena have held a joint press conference. Know more about their appeal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X