ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಮಾಧ್ಯಮ: ಫೇಸ್ ಬುಕ್ಕಿನಲ್ಲಿ ಜೋರು ಚರ್ಚೆ

By Mahesh
|
Google Oneindia Kannada News

ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷಾ ಮಾಧ್ಯಮ ಕಡ್ಡಾಯ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಜನತೆ ಕಳವಳ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಈ ಬಗ್ಗೆ ಚರ್ಚೆ ಜೋರಾಗಿ ನಡೆದಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಖಾಸಗಿ ಸಂಸ್ಥೆಗಳ ಮುಂದೆ ಕರ್ನಾಟಕ ಸರ್ಕಾರ ಕೈ ಕಟ್ಟಿ ನಿಲ್ಲಬೇಕಾಗುತ್ತದೆ. ಭವಿಷ್ಯದಲ್ಲಿ ಕನ್ನಡ ಭಾಷೆ ಪ್ರಾಥಮಿಕ ತರಗತಿಗಳಲ್ಲಿ ಉಳಿಯುವುದೇ ಕಷ್ಟವಾಗುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಫೇಸ್ ಬುಕ್ ನಲ್ಲಿ ಬಂದಿರುವ ಒಂದಷ್ಟು ಅಭಿಪ್ರಾಯಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ..

ನಾನು ಓದಿದ್ದು ಸರ್ಕಾರಿ ಪ್ರಾಥಮಿಕ ಶಾಲೆಯ ಕನ್ನಡ ಮಾಧ್ಯಮದಲ್ಲಿ .. ಮುಂದೆ ಮೈಸೂರು ವಿ.ವಿ.ಯಲ್ಲಿ ಎಂ.ಕಾಂ. ಪರೀಕ್ಷೆ ಬರೆದಿದ್ದು ಕೂಡ ಸಂಪೂರ್ಣ ಕನ್ನಡದಲ್ಲಿ. ನನ್ನ ಕಲಿಕೆಯ ಮಾಧ್ಯಮವಾಗಿ ಆಯ್ಕೆಮಾಡಿಕೊಂಡಿದ್ದು ಕನ್ನಡವೇ. ನನ್ನ ಮುಂದಿನ ಪೀಳಿಗೆಗೂ ಕನ್ನಡವೇ ಮಾಧ್ಯಮವಾಗಿರತ್ತೆ... ಯಾರು ಏನಾದ್ರೂ ಹೇಳಿಕೊಳ್ಳಲಿ ... -ರಾಜೇಂದ್ರ ಪ್ರಸಾದ್, ಮಂಡ್ಯ

ಭಾಷೆ ಎಂಬುದು ಕೇವಲ ಒಂದು ಸಂವಹನ ಮಾಧ್ಯಮವಲ್ಲ. ಅದು ಒಂದು ಸಂಸ್ಕೃತಿಯ ಮೊತ್ತ. ಒಂದು ಭಾಷೆ ವಿನಾಶದತ್ತ ಸರಿಯುತ್ತಿದೆ..ಮೂಲೆಗುಂಪಾಗುತ್ತಿದೆ ಎಂದರೆ ಜೀವಂತ ಸಂಸ್ಕೃತಿಯೊಂದು ಮೂಲೆಗುಂಪಾಗುತ್ತಿದೆ, ವಿನಾಶದೆಡೆಗೆ ಚಲಿಸುತ್ತಿದೆಯೆಂದೇ ಅರ್ಥ ನಿಮ್ಮಲ್ಲಿ ಎಷ್ಟು ಜನ ನಿಮ್ಮ ಮಕ್ಕಳನ್ನು ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿಸಿದ್ದೀರಿ..ಓದಿಸುತ್ತಿದ್ದೀರಿ ಎಂಬುದು ನನಗೆ ಗೊತ್ತಿಲ್ಲ. ಆದರೆ ನಾನು ಬೆಂಗಳೂರಿನಲ್ಲಿದ್ದರೂ ಹುಡುಕಿ ಹುಡುಕಿ ಕನ್ನಡ ಮಾಧ್ಯಮ ಶಾಲೆಯಲ್ಲಿ ನನ್ನ ಮಕ್ಕಳನ್ನು ಓದಿಸಿದ್ದೇನೆ. -ಉಷಾ ಕಟ್ಟೆಮನೆ

ಮೊದಲೇ ಹಿಂದಿಯನ್ನು ಕಿತ್ತೆಸೆದು ಇಂಗ್ಲೀಷನ್ನು ಒಂದನೇ ತರಗತಿಯಿಂದಲೇ ಒಂದು ಭಾಷೆಯಾಗಿ ಕಲಿಸುತ್ತಾ ಬಂದಿದ್ದರೆ ಬಹುಶಃ ಇಂದು ಮಾತೃಭಾಷೆಯನ್ನು ಕಳೆದುಕೊಳ್ಳಬೇಕಾದ ಸ್ಥಿತಿ ಬರುತ್ತಿರಲಿಲ್ಲ. -ಶ್ರೀಪತಿ ಗೊಗಾಡಿಗೆ

Supreme court verdict on Kannada medium of teaching facebook discussion

ಕನ್ನಡ ಭಾಷೆಗೆ ಅಗ್ನಿ ಪರೀಕ್ಷೆಯ ಕಾಲ ಮೊದಲು ಕನ್ನಡ ಭಾಷೆಯಲ್ಲಿ ನಾಮಫಲಕಗಳನ್ನು ಹಾಕುವುದು ಕಡ್ಡಾಯವಲ್ಲ ಅಂದ್ರು ಈಓಗ ಕನ್ನಡ ಮಕ್ಕಳು ಕನ್ನಡದಲ್ಲಿ ವಿದ್ಯೆ ಕಲಿಯುವ ಹಕ್ಕನ್ನು ಕಿತ್ತುಕೊಂಡಿದ್ದಾರೆ. ಇದಕ್ಕಿಂತ ದಬ್ಬಾಳಿಕೆ ಬೇಕಾ? ಈಗ್ಲೂ ಕನ್ನಡಿಗರ ರಕ್ತ ಕುದಿಯದೇ ಇದ್ರೆ ಅವರು ಮನುಷ್ಯರೇ ಅಲ್ಲ. ಕನ್ನಡದ ಸಮಸ್ಯೆಗಳಿಗೆ ಸರ್ವತಂತ್ರ ಸ್ವತಂತಂತ್ರವಾದ ಕನ್ನಡ ದೇಶವೊಂದೇ ಪರಿಹಾರ. ಭಾರತ ಒಕ್ಕೂಟಕ್ಕೆ ಧಿಕ್ಕಾರ. -ರೋಹಿತ್ ರಾಮಚಂದ್ರಯ್ಯ

ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕೆಂದು ಕರ್ನಾಟಕ ಸರ್ಕಾರವಾಗಲೀ, ಬೇರಾವುದೇ ಸರ್ಕಾರವಾಗಲೀ ಆದೇಶ ಹೊರಡಿಸಿದ್ದರೆ, ಅದರ ಹಿಂದಿರುವ ಸಾಂಸ್ಕೃತಿಕ ಅಗತ್ಯವನ್ನು ಗಮನಿಸಬೇಕು. ಮಾತೃಭಾಷೆಯಿಂದಲೇ ಮಗುವಿಗೆ ಅದರ ಪರಿಸರದ ಅರಿವು ಮೂಡುತ್ತದೆ; ಆದ್ದರಿಂದ ಕಾನೂನಿನ ಹೊರತಾಗಿಯೂ ಮಾತೃಭಾಷೆಯ ಅಗತ್ಯವನ್ನು ನ್ಯಾಯಾಲಯವು ಪರಿಗಣಿಸಬೇಕಿತ್ತು (ಪೂರ್ತಿ ತೀರ್ಪಿನ ಪಠ್ಯ ಇನ್ನೂ ಸಿಕ್ಕಿಲ್ಲ). ಆದರೆ ಈ ತೀರ್ಪಿನಿಂದಾಗಿ ಯಾವುದೇ ರಾಜ್ಯದಲ್ಲಿ ಯಾವುದೇ ಭಾಷೆಯನ್ನು ಕಲಿಸಬೇಕೆಂದು ಒತ್ತಾಯಿಸಬಹುದು! ಉದಾಹರಣೆಗೆ ಉತ್ತರಪ್ರದೇಶಕ್ಕೆ ಹೋಗಿ ತುಳು ಭಾಷೆಯಲ್ಲಿ ಪಾಠ ಕಲಿಸುತ್ತಿಲ್ಲ ಎಂದು ಪ್ರಶ್ನಿಸಬಹುದು... ಎಲ್ಲಾ ರಾಜ್ಯಗಳಲ್ಲಿ ಎಲ್ಲಾ ಪಠ್ಯ ವಿಷಯಗಳಲ್ಲಿ ಎಲ್ಲಾ ಭಾಷೆಗಳ ಪಠ್ಯಪುಸ್ತಕ, ಶಿಕ್ಷಕರು, ಶಾಲೆ, ಎಲ್ಲ ವ್ಯವಸ್ಥೆಯನ್ನೂ ಕಲ್ಪಿಸಬೇಕಾಗುತ್ತದೆ. ಇದೇನು ಊಹೆಯಲ್ಲ. ಕಾನೂನಿನ ಅಗತ್ಯವೇ ಆಗುತ್ತದೆ ಎಂದು ನನಗೆ ಅನ್ನಿಸುತ್ತಿದೆ. ರಾಷ್ಟ್ರೀಯ ಭಾಷೆಗಳಿಗೆ ಇರುವ ಮಾನ್ಯತೆಯನ್ನು ಕಿರು/ಮರಣಶಯ್ಯೆಯ ಭಾಷೆಗಳಿಗೆ ನೀಡುವುದಕ್ಕೆ ನ್ಯಾಯಾಲಯವು ಸೂಚಿಸುತ್ತದೆಯೆ? ಗೊತ್ತಿಲ್ಲ. -ಬೇಳೂರು ಸುದರ್ಶನ.

[ಸುಪ್ರೀಂಕೋರ್ಟ್ ತೀರ್ಪು : ಯಾರು ಏನೆಂದರು?] | [ಕನ್ನಡದ ಭವಿಷ್ಯಕ್ಕೆ ಮಾರಕವಾದ ಸುಪ್ರೀಂ ತೀರ್ಪು]

English summary
Lot of people on social networking site Facebook are commenting on Supreme Court judgement on Kannada medium of teaching in schools. Public worried and shows concern that day may come when Government of Karnataka has no right to ask companies to putup boards in Kannada in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X