• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಡುಪಿಯ ಅಕ್ಕು-ಲೀಲಾಗೆ ನ್ಯಾಯ ಸಿಕ್ಕಿತು

|

ಉಡುಪಿ, ಜು. 18 : ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ದುಡಿಯುತ್ತಿದ್ದ ಅಕ್ಕು ಹಾಗೂ ಲೀಲಾ ಅವರಿಗೆ 14 ವರ್ಷಗಳಿಂದ ಬರಬೇಕಿದ್ದ ಸಂಬಳದ ಹಣ ಹಾಗೂ ನಿವೃತ್ತಿ ಸೌಲಭ್ಯವನ್ನು ಸಂಪೂರ್ಣವಾಗಿ ಪಾವತಿಸುವಂತೇ ಆದೇಶ ನೀಡಿರುವುದಾಗಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ. ಇದರಿಂದಾಗಿ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ದೂರಿನಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಬಚಾವಾಗಿದ್ದಾರೆ.

ಅಕ್ಕು ಮತ್ತು ಲೀಲಾ ಪ್ರಕರಣದ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ವಿವಿಧ ನ್ಯಾಯಾಲಯಗಳು ನೀಡಿದ ಯಾವ ಆದೇಶಕ್ಕೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಲೆ ಬಾಗಿರಲಿಲ್ಲ. ಉಡುಪಿಯ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನವು ಇದನ್ನು ಪ್ರಶ್ನಿಸಿ ಜೂನ್ ತಿಂಗಳಿನಲ್ಲಿ ಸುಪ್ರೀಂಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ದೂರು ದಾಖಲಿಸಿತ್ತು. ತೀರ್ಪನ್ನು ಕಾರ್ಯಗತಗೊಳಿಸಲು ಕೋರ್ಟ್ ಅಕ್ಟೋಬರ್ ತಿಂಗಳವರೆಗೆ ಅವಕಾಶ ನೀಡಿತ್ತು.

ಕೊನೆಗೂ ಎಚ್ಚೆತ್ತ ಸರ್ಕಾರ ಕಳೆದ ಡಿಸೆಂಬರ್ 5 ರಂದು ಅಕ್ಕು ಹಾಗೂ ಲೀಲಾ ಅವರಿಗೆ 2.11 ಲಕ್ಷ ರೂ. ಪಾವತಿ ಮಾಡಿತ್ತು. ಇದನ್ನು ಪ್ರಶ್ನಿಸಿ ಪ್ರತಿಷ್ಠಾನ ಪುನಃ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ನಂತರ ಸರ್ಕಾರ ಪುನಃ 3.68 ಲಕ್ಷ ಪಾವತಿ ಮಾಡಿತು. [ಏನಿದು ಅಕ್ಕು-ಲೀಲಾ ಪ್ರಕರಣ]

ಸೇವೆ ಸಕ್ರಮಗೊಳಿಸಲಿಲ್ಲ : ಹಣ ನೀಡಿದ 6 ತಿಂಗಳು ಕಳೆದರೂ ಸರ್ಕಾರ ಇಬ್ಬರ ಸೇವೆಯನ್ನು ಸಕ್ರಮಗೊಳಿಸಲು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಆದ್ದರಿಂದ ಪುನಃ ಈ ವಿಚಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು.

ಜುಲೈ 4 ರಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಅಂತಿಮ ಎಚ್ಚರಿಕೆ ನೀಡಿದ ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಒಂದು ವಾರದ ಅವಕಾಶ ನೀಡಿತು. ಸದ್ಯ ಕರ್ನಾಟಕ ಸರ್ಕಾರ ಅಕ್ಕು ಹಾಗೂ ಲೀಲಾರ ಸೇವೆಯ ಸಕ್ರಮದ ಕುರಿತು ಸ್ಪಷ್ಟವಾದ ಸರ್ಕಾರಿ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶದ ಅನ್ವಯ ಅಕ್ಕು ಮತ್ತು ಲೀಲಾ ಅವರು 1971ರಿಂದ ನಿವೃತ್ತಿಯ ದಿನಾಂಕವಾದ 2011ರ ವರೆಗಿನ ಅವಧಿಯ ಸಂಪೂರ್ಣ ಸಂಬಳ ಹಾಗೂ ನಿವೃತ್ತಿ ಸೌಲಭ್ಯಗಳಾದ ಪ್ರಾವಿಡೆಂಟ್ ಫಂಡ್, ಗ್ರಾಚ್ಯುವಿಟಿ ಮತ್ತು ಪಿಂಚಣಿ ಪಡೆಯಲಿದ್ದಾರೆ. ಸರ್ಕಾರದ ಆದೇಶದಿಂದ ಇಲಾಖೆ ಅಧಿಕಾರಿಗಳು ನ್ಯಾಯಾಂಗ ನಿಂದನೆ ದೂರಿನಿಂದ ಬಚಾವಾಗಿದ್ದಾರೆ.

ಮುಂದಿನ ಹೆಜ್ಜೆ : ಅಕ್ಕು ಮತ್ತು ಲೀಲಾರ ಸಂಬಳ ಹಾಗೂ ನಿವೃತ್ತಿ ಸೌಲಭ್ಯಗಳನ್ನು ಲೆಕ್ಕಾಚಾರ ಮಾಡಲು ಸರ್ಕಾರಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಇಬ್ಬರಿಗೂ ಕೊನೆಯ ರೂಪಾಯಿ ಸಿಗುವ ತನಕ ಹೋರಾಟ ನಡೆಸಲು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವೂ ಬದ್ಧವಾಗಿದೆ.

ಜನಾಂದೋಲನ : ಕಳೆದ 4 ವರ್ಷಗಳಿಂದಲೂ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸದ ಸರ್ಕಾರದ ಉದ್ಧಟತನವನ್ನು ಪ್ರಶ್ನಿಸಿ ಉಡುಪಿಯ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನವು ಇದುವರೆಗೆ 25ಕ್ಕೂ ಹೆಚ್ಚಿನ ಲೇಖನಗಳನ್ನು ಪ್ರಕಟಿಸಿ, ವಿಚಾರ ಸಂಕಿರಣಗಳನ್ನು ಸಂಘಟಿಸಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಿತ್ತು.

English summary
Supreme Court of India has disposed of the contempt petition in Akku-Leela’s case after observing the action taken by the Karnataka State Government on regularization of service rendered by Akku and Leela, who had served for 42 years in Udupi Government Women Teachers’ Training Institute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more