ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಕರೆದ ಸಭೆಯಲ್ಲಿ ಸತೀಶ್ ಜಾರಕಿಹೊಳಿ ಕೇಳಲಿದ್ದಾರೆ 16 ಪ್ರಶ್ನೆ

|
Google Oneindia Kannada News

Recommended Video

ಸತೀಶ್ ಜಾರಕಿಹೊಳಿ ಕೇಳುವ 16 ಪ್ರಶ್ನೆಗಳ ಎಚ್ ಡಿ ಕುಮಾರಸ್ವಾಮಿ ಉತ್ತರ ಕೊಡುತ್ತಾರಾ? | Oneindia Kannada

ಬೆಂಗಳೂರು, ನವೆಂಬರ್ 21: ಸಿಎಂ ಕುಮಾರಸ್ವಾಮಿ ಅವರು ನಾಳೆ (ನವೆಂಬರ್ 22)ಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆದಿದ್ದು ಸಭೆಯಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಭಾಗವಹಿಸಲಿದ್ದಾರೆ.

ನಿನ್ನೆ ಸಹ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಿಎಂ ಸಭೆ ನಡೆಸಿದ್ದಾರಾದರೂ ಪ್ರಮುಖ ಸಕ್ಕರೆ ಕಾರ್ಖಾನೆಗಳ ಮಾಲೀಕರು ಅದರಲ್ಲಿ ಭಾಗವಹಿಸಿರಲಿಲ್ಲ ಹಾಗಾಗಿ ನಾಳೆ ಮತ್ತೊಮ್ಮೆ ಸಭೆ ಕರೆಯಲಾಗಿದೆ.

ರೈತರ ಸಮಸ್ಯೆ ಬಗೆಹರಿಸಲು ದೇವೇಗೌಡರು ಕುಮಾರಸ್ವಾಮಿಗೆ ನೀಡಿದರು ಸಲಹೆ ರೈತರ ಸಮಸ್ಯೆ ಬಗೆಹರಿಸಲು ದೇವೇಗೌಡರು ಕುಮಾರಸ್ವಾಮಿಗೆ ನೀಡಿದರು ಸಲಹೆ

ನಾಳೆ ಸಿಎಂ ಕರೆದಿರುವ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಸತೀಶ್ ಜಾರಕಿಹೊಳಿ ಅವರು ಭಾಗವಹಿಸುತ್ತಿರುವುದಾಗಿ ತಿಳಿಸಿದ್ದು, ಸಕ್ಕರೆ ಕಾರ್ಖಾನೆ ಮಾಲೀಕರ ಪರವಾಗಿ 16 ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡುವುದಾಗಿ ಹೇಳಿದ್ದಾರೆ.

Satish Jarkiholi attending meeting which called by CM Kumaraswamy

ರೈತರೂ ಉಳಿಯಬೇಕು, ಸಕ್ಕರೆ ಕಾರ್ಖಾನೆಗಳೂ ಉಳಿಯಬೇಕು, ಸರ್ಕಾರವೂ ಉಳಿಯಬೇಕು ಎಂದು ಹೇಳಿದ ಅವರು, ಸಮ್ಮಿಶ್ರ ಸರ್ಕಾರವು ರೈತರ ಸಮಸ್ಯೆಗಳಿಗೆ ಸರಿಯಾಗಿಯೇ ಸ್ಪಂದಿಸುತ್ತದೆ ಎಂದು ಹೇಳಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ತನಕ ಹೋರಾಟ : ಯಡಿಯೂರಪ್ಪಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ತನಕ ಹೋರಾಟ : ಯಡಿಯೂರಪ್ಪ

ಬೆಳಗಾವಿಯಲ್ಲಿ ಬಹುತೇಕ ಸಕ್ಕರೆ ಕಾರ್ಖಾನೆಗಳು ಜಾರಕಿಹೊಳಿ ಸಹೋದರರ ಒಡೆತನದಲ್ಲಿಯೇ ಇವೆ. ಅವುಗಳಿಂದಲೂ ಸಾಕಷ್ಟು ಬಾಕಿ ರೈತರಿಗೆ ಸೇರಿಬೇಕಿದೆ ಹಾಗಾಗಿ ನಾಳೆ ಸಿಎಂ ಅವರು ತಮ್ಮದೇ ಮಿತ್ರ ಪಕ್ಷದ ಶಾಸಕರಿಗೆ ರೈತರ ಬಾಕಿ ಹಣ ಕೂಡಲೇ ವಾಪಸ್ ಮಾಡುವಂತೆ ಹೇಗೆ ಎಚ್ಚರಿಕೆ ನೀಡುತ್ತಾರೆ ಮತ್ತು ಆ ನಂತರದ ಬೆಳವಣಿಗೆಗಳು ಏನಾಗುತ್ತವೆ ಎಂಬುದು ಕುತೂಹಲ ಕೆರಳಿಸಿದೆ.

ಯಾವ ಪಕ್ಷದ ಮುಖಂಡರು ರೈತರಿಗೆ ಎಷ್ಟು ಬಾಕಿ ಉಳಿಸಿಕೊಂಡಿದ್ದಾರೆ? ಇಲ್ಲಿದೆ ಮಾಹಿತಿಯಾವ ಪಕ್ಷದ ಮುಖಂಡರು ರೈತರಿಗೆ ಎಷ್ಟು ಬಾಕಿ ಉಳಿಸಿಕೊಂಡಿದ್ದಾರೆ? ಇಲ್ಲಿದೆ ಮಾಹಿತಿ

ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಶಾಮನೂರು ಶಿವಶಂಕರಪ್ಪ, ಉಮೇಶ ಕತ್ತಿ, ಮುರಗೇಶ ನಿರಾಣಿ, ಇನ್ನೂ ಹಲವು ಕಾಂಗ್ರೆಸ್-ಬಿಜೆಪಿ ಮುಖಂಡರು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದಾರೆ. ಅವುಗಳಿಂದ ರೈತರಿಗೆ ಸಾಕಷ್ಟು ಬಾಕಿ ಹಣ ಪಾವತಿ ಆಗಬೇಕಿದೆ.

English summary
CM Kumaraswamy called for sugar factory owners meeting tomorrow. Congress MLA Satish Jarkiholi also attending the meeting. He says he will put 16 demands front of CM behalf of sugar factory owners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X