ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಕಮಾಂಡ್ ಗೆ ತೊಡೆ ತಟ್ಟಿದ ಈಶು, ಮೇ 8ಕ್ಕೆ ರಾಯಣ್ಣ ಬ್ರಿಗೇಡ್ ಸಭೆ

ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ಅವರ ಮಾತಿಗೆ ಡೊಂಟ್ ಕೇರ್ ಎಂದಿರುವ ಈಶ್ವರಪ್ಪ ಮೇ 8ರಂದು ರಾಯಚೂರಿನಲ್ಲಿ ಸಂಗೊಳ್ಳಿ ರಾಯಣ್ಣ ಬ್ರುಗೇಡ್ ಪದಾಧಿಕಾರಿಗಳ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

|
Google Oneindia Kannada News

ರಾಯಚೂರು, ಮೇ 02 : ಯಡ್ಡಿ ಮತ್ತು ಈಶ್ವರಪ್ಪ ಬಿಕ್ಕಟ್ಟಿಗೆ ಕಾರಣವಾಗಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಲ್ಲಿ ಪಾಲ್ಗೊಳ್ಳುವಂತಿಲ್ಲ ಎಂಬ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಅವರ ಸೂಚನೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ಡೊಂಟ್ ಕೇರ್ ಎಂದಿದ್ದಾರೆ.

ಮೊನ್ನೇ ಅಷ್ಟೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಜಿಜೆಪಿಗೆ ಸಂಬಂಧವಿಲ್ಲ ಹಾಗಾಗಿ ಅದರಲ್ಲಿ ಯಾರು ಭಾಗವಹಿಸುವಂತಿಲ್ಲ ಎಂಬ ಮುರುಳೀಧರ್ ರಾವ್ ಅವರ ಖಡಕ್ ಎಚ್ಚರಿಗೆ ಸೊಪ್ಪು ಹಾಕದ ಈಶ್ವರಪ್ಪ ಇದೇ ಮೇ 08ರಂದು ರಾಯಚೂರಿನಲ್ಲಿ ರಾಯಣ್ಣ ಬ್ರಿಗೇಡ್ ಪದಾಧಿಕಾರಿಗಳ ಸಭೆ ಕರೆದಿದ್ದಾರೆ.[ಮೈಸೂರಿನಲ್ಲಿ ಜೂನ್ 18ಕ್ಕೆ ರಾಯಣ್ಣ ಬ್ರಿಗೇಡ್ ಸಮಾವೇಶ]

Sangoli rayanna brigade office bearers conference on May 8th in Raichur KS Eshwarappa

ಈ ಬಗ್ಗೆ ಮೇ 08ರ ಬ್ರಿಗೇಡ್ ಪದಾಧಿಕಾರಿಗಳ ಸಭೆಯ ಪೂರ್ವ ಸಿದ್ಧತೆ ಸಭೆಯಲ್ಲಿ ಪಾಲ್ಗೊಳ್ಳಲು ರಾಯಚೂರಿಗೆ ತೆರಳಿರುವ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದರು.[ಗುರುರಾಯರ ಸನ್ನಿಧಿಗೆ ಆಗಮಿಸಿದ ಈಶ್ವರಪ್ಪ]

ರಾಜ್ಯದ 224 ಕ್ಷೇತ್ರದ ಪೈಕಿ ಒಂದೊಂದು ಕ್ಷೇತ್ರದಿಂದ 6 ಜನ ರಾಯಣ್ಣ ಬ್ರಿಗೇಡ್ ಹಾಗೂ ಯುವ ರಾಯಣ್ಣ ಬ್ರಿಗೇಡ್ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ಅಮಿತ್ ಶಾ ಅವರನ್ನು ಭೇಟಿಯಾದ ವೇಳೆ ಬ್ರಿಗೇಡ್ ಮುಂದುವರೆಸಿ ಎಂದು ಹೇಳಿದ್ದಾರೆ. ಆದರೆ, ಮುರುಳೀಧರ್ ರಾವ್ ಅವರು ಇದೀಗ ಯಾವ ಕಾರಣಕ್ಕೆ ರಾಯಣ್ಣ ಬ್ರಿಗೇಡ್ ನಲ್ಲಿ ಪಾಲ್ಗೊಳ್ಳುವಂತೆ ಹೇಳಿದ್ದಾರೆ ಎನ್ನುವುದು ಗೊತ್ತಿಲ್ಲವೆಂದರು.

ರಾಯಣ್ಣ ಸಭೆಯಲ್ಲಿ ಪಾಲ್ಗೊಂಡರೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿರುವ ಮುರುಳೀಧರ್ ರಾವ್ ಅವರು ಮೇ 8 ನಂತರ ಈಶ್ವರಪ್ಪ ವಿರುದ್ಧ ಏನು ಕ್ರಮ ಜರುಗಿಸಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.

English summary
The Sangoli rayanna brigade office bearers conference on May 8th in Raichur, said BJP leader KS Eshwarappa in press conference at Mantralaya, on May 02.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X