ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಮರಳು ಕೊರತೆ: ಎಂ-ಸ್ಯಾಂಡ್ ಉತ್ಪಾದನೆ ಹೆಚ್ಚಿಸಲು ಚಿಂತನೆ

|
Google Oneindia Kannada News

ಬೆಂಗಳೂರು ಆಗಸ್ಟ 17: ರಾಜ್ಯದಲ್ಲಿ ಅಗತ್ಯಕ್ಕೆ ತಕ್ಕಷ್ಟು ಮರಳು ಒದಗಿಸುವ ಉದ್ದೇಶದಿಂದ 'ಎಂ ಸ್ಯಾಂಡ್' ಉತ್ಪಾದನೆ ಹೆಚ್ಚಿಸಲಾಗುವುದು. ಈ ಸಂಬಂಧ ಮರಳು ನೀತಿಗೆ ತಿದ್ದುಪಡಿ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.

ದಿನೇ ದಿನೆ ರಾಜ್ಯದಲ್ಲಿ ಮರಳಿನ ಬೇಡಿಕೆ ಹೆಚ್ಚಾಗುತ್ತಿದೆ. ಅಗತ್ಯದಷ್ಟು ಮರಳು ಪೂರೈಕೆ ಮಾಡುವ ಉದ್ದೇಶದಿಂದ ಎಂ ಸ್ಯಾಂಡ್ ಉತ್ಪಾದನೆಗಾಗಿ ಕಲ್ಲು ಪುಡಿ ಮಾಡುವ ಘಟಕಗಳಿಗೆ ಸರ್ಕಾರದಿಂದ ಹೆಚ್ಚಿನ ಪರವಾನಗಿ ನೀಡಲಿದೆ. ಮರಳು ಮಾಫಿಯಾದ ತಾಂಡವವಾಡುತ್ತಿರುವ ಇಂದಿನ ಸಂದರ್ಭದಲ್ಲಿ ಅದಕ್ಕೆ ಶಾಸ್ವತವಾಗಿ ಕೊನೆಗಾಣಿಸಲು ಮರಳು ನೀತಿಯಲ್ಲಿನ ತಿದ್ದುಪಡಿ ಅಗತ್ಯವಾಗಿದೆ ಎಂದರು.

ಬೆಂಗಳೂರು ಸಹಿತ ಬೆಸ್ಕಾಂ ವ್ಯಾಪ್ತಿಯಲ್ಲಿ ಎರಡು ದಿನ ವಿದ್ಯುತ್‌ ಕಡಿತ: ಎಲ್ಲೆಲ್ಲಿ ವ್ಯತ್ಯಯ? ಬೆಂಗಳೂರು ಸಹಿತ ಬೆಸ್ಕಾಂ ವ್ಯಾಪ್ತಿಯಲ್ಲಿ ಎರಡು ದಿನ ವಿದ್ಯುತ್‌ ಕಡಿತ: ಎಲ್ಲೆಲ್ಲಿ ವ್ಯತ್ಯಯ?

ಈಗಾಗಲೇ ರಾಜ್ಯದಲ್ಲಿ ವಾರ್ಷಿಕವಾಗಿ 45ಲಕ್ಷ ಮೆಟ್ರಿಕ್ ಟನ್‌ನಷ್ಟು ಲಭ್ಯವಿದ್ದು, ಹಾಲಿ ಸುಮಾರು ಐದು ಲಕ್ಷ ಮೆಟ್ರಿಕ್ ಟನ್ ಕೊರತೆ ಎದುರಿಸುತ್ತಿದ್ದೇವೆ. ಈ ಕಾರಣಕ್ಕೆ ಎಂ ಸ್ಯಾಂಡ್‌ ಗೆ ಉತ್ಪಾದನೆ ಹೆಚ್ಚಿಸಲು ಸೂಚಿಸುವ ಅಗತ್ಯವಾಗಿದೆ ಎಂದು ಸಚಿವರು ವಿವರಿಸಿದರು.

Sand Shortage in Karnataka state govt thinking Increase to M sand Production

ಮರಳು ಕೊರತೆ ನೀಗಿಸಲು ವಿವಿಧ ಎಂ ಸ್ಯಾಂಡ್ ಉತ್ಪಾದನಾ ಘಟಕಗಳಿಂದ 35ಲಕ್ಷ ಮೆಟ್ರಿಕ್ ಟನ್‌ನಷ್ಟು ಮರಳು ಪೂರೈಕೆ ಮಾಡಲಾಗುತ್ತಿದೆ. ವಿವಿಧ ನೈಸರ್ಗಿಕ ಮೂಲಗಳಿಂದ ರಾಜ್ಯದಲ್ಲಿ ಒಟ್ಟು ಸುಮಾರು ಐದು ಲಕ್ಷ ಮೆಟ್ರಿಕ್ ಟನ್‌ ಮರಳನ್ನು ಹೊರತೆಯಲಾಗುತ್ತಿದೆ. ಹೀಗಿದ್ದರೂ ಐದು ಲಕ್ಷ ಮೆಟ್ರಿಕ್ ಟನ್ ಮರಳಿನ ಕೊರತೆ ಸಮಸ್ಯೆ ಎದುರಾಗಿದ್ದರಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಮರಳು ಪೂರೈಕೆಗೆ ಅವಲಂಬನೆ ಅನಿವಾರ್ಯ

ರಾಜ್ಯದಲ್ಲಿ ನೈಸರ್ಗಿಕ ಮೂಲಗಳಿಂದ ತೆಗೆದ ಐದು ಲಕ್ಷ ಮೆಟ್ರಿಕ್ ಟನ್ ಮರಳಿನ ನಿರ್ವಹಣೆ ಮತ್ತು 15 ಜಿಲ್ಲೆಗಳಿಗೆ ಪೂರೈಕೆ ಮಾಡಲು ರಾಯಚೂರಿನ ಹಟ್ಟಿ ಮೈನಿಂಗ್ ಕಂಪನಿಗೆ ವಹಿಸಲಾಗಿದೆ. ಉಳಿದ ಎಲ್ಲ ಜಿಲ್ಲೆಗಳಿಗೆ ಮರಳು ಪೂರೈಕೆಯನ್ನು ಕರ್ನಾಟಕ ಮಿನರಲ್ಸ್ ಕಾರ್ಪೊರೇಷನ್ ಕಂಪನಿ ಮಾಡಲಿದೆ. ಭವಿಷ್ಯದಲ್ಲಿ ಅಗತ್ಯ ಮರಳಿಗಾಗಿ ನಾವು ಎಂ ಸ್ಯಾಂಡ್ ಘಟಕಗಳ ಮೇಲೆ ಅವಲಂಬನೆ ಆಗುವುದು ಅನಿವಾರ್ಯ ಎಂದು ಸಚಿವರು ವಿವರಿಸಿದರು.

ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನದಿ ಪಾತ್ರಗಳಲ್ಲಿ, ಇನ್ನಿತರ ಕಡೆಗಳಲ್ಲಿ ಲಭ್ಯ ಮರಳನ್ನು ಹೊರತೆಗೆಯುವ ಅಧಿಕಾರವನ್ನು ಸರ್ಕಾರ ಹೊಂದಿದೆ. ಇದರಿಂದಲೂ ಮರಳು ಕೊರತೆ ನೀಗಿಸಬಹುದಾಗಿದೆ. ಇಷ್ಟಿದ್ದರೂ ಅಕ್ರಮ ಎಸಗುತ್ತಿರುವುದು ಕಂಡು ಬಂದರೆ ಆಯಾ ಜಿಲ್ಲಾಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಸಚಿವ ಹಾಲಪ್ಪ ಆಚಾರ್ ಎಚ್ಚರಿಸಿದ್ದಾರೆ.

Sand Shortage in Karnataka state govt thinking Increase to M sand Production

ಮರಳಿಗಿಂತ 'ಎಂ ಸ್ಯಾಂಡ್' ಹೆಚ್ಚು

ಸರ್ಕಾರ ಪ್ರತಿ ಟನ್ ಮರಳಿಗೆ ರೂ.800.ನಿಗದಿಪಡಿಸಿದ್ದರೆ, ಎಂ ಸ್ಯಾಂಡ್ ಪ್ರತಿ ಟನ್‌ಗೆ ರೂ. 700ರಿಂದ 1,200 ರೂ.ಬೆಲೆಗೆ ಮಾರಾಟ ಆಗುತ್ತಿದೆ. ಕರ್ನಾಟಕದಿಂದ ಕಬ್ಬಿಣದ ಅದಿರು ರಫ್ತು ಕುರಿತು ಮಾತನಾಡಿದ ಸಚಿವರು, ಕರ್ನಾಟಕದಿಂದ 28 ಖನಿಜ ಬ್ಲಾಕ್‌ಗಳ ಪೈಕಿ 12 ಅನ್ನು ಹರಾಜು ಮಾಡಲಾಗಿದೆ. ಬಾಕಿ ಬ್ಲಾಕ್‌ಗಳ ಹರಾಜು ಹಾಕಲು ಅಗತ್ಯ ಸಿದ್ಧತೆ ನಡೆದಿದೆ ಎಂದರು.

English summary
Sand Shortage in Karnataka state govt thinking Increase to Msand Production.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X