• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಹಶೀಲ್ದಾರರಿಗೆ ಮಚ್ಚು ತೋರಿಸಿದ ಮರಳು ಮಾಫಿಯಾ

|
Google Oneindia Kannada News

ಕೋಲಾರ, ಡಿ.5 : ಅಕ್ರಮ ಮರಳು ಸಾಗಾಣೆ ಘಟಕದ ಮೇಲೆ ದಾಳಿ ಮಾಡಿದ್ದ ಡಿವೈಎಸ್ಪಿ ಅವರನ್ನು ಲಾರಿ ಹತ್ತಿಸಿ ಕೊಲೆ ಮಾಡಲು ಯತ್ನಿಸಿದ್ದ ಪ್ರಕರಣ ಮಂಡ್ಯದಲ್ಲಿ ಕೆಲವು ದಿನಗಳ ಹಿಂದೆ ನಡೆದಿತ್ತು. ಸದ್ಯ ಕೋಲಾರದಲ್ಲಿ ತಹಶೀಲ್ದಾರರಿಗೆ ಲಾಂಗು, ಮಚ್ಚು ತೋರಿಸಿ ಬೆದರಿಸಿದ ಪ್ರಕರಣ ನಡೆದಿದೆ.

ಕೋಲಾರದ ತಹಶೀಲ್ದಾರ್ ರಂಗೇಗೌಡ ಅವರು ಅಧಿಕಾರಿಗಳೊಂದಿಗೆ ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕೆಂಡತ್ತಿ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಣೆ ಅಡ್ಡೆಯ ಮೇಲೆ ಬುಧವಾರ ರಾತ್ರಿ ದಾಳಿ ಮಾಡಿದ್ದರು. [ಅಕ್ರಮ ಮರಳು ಗಣಿಗಾರಿಕೆ ಮಾಡಿದರೆ ಜೈಲು]

ಈ ಸಂದರ್ಭದಲ್ಲಿ ಅಕ್ರಮವಾಗಿ ಮರಳು ಸಾಗಣೆಯಲ್ಲಿ ತೊಡಗಿದ್ದ ಚಂದ್ರಶೇಖರ್ ಮತ್ತು ನಾರಾಯಣಸ್ವಾಮಿ ಮುಂತಾದವರು ಲಾಂಗು ಮಚ್ಚುಗಳನ್ನು ತೋರಿಸಿ ತಹಶೀಲ್ದಾರರಿಗೆ ಬೆದರಿಕೆ ಹಾಕಿದ್ದಾರೆ. ಸ್ಥಳದಿಂದ ವಾಪಸ್ ತೆರಳುವಂತೆ ಸೂಚಿಸಿದ್ದಾರೆ. [ಮರಳು ಮಾಫಿಯಾದಿಂದ ಡಿವೈಎಸ್ಪಿ ಹತ್ಯೆ ಯತ್ನ]

ತಕ್ಷಣ ತಹಶೀಲ್ದಾರ್‌ ಅವರು ವೇಮಗಲ್ ಪೊಲೀಸರಿಗೆ ಕರೆ ಮಾಡಿ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಚಂದ್ರಶೇಖರ್ ಅವರನ್ನು ಬಂಧಿಸಿದ್ದಾರೆ. ಆದರೆ, ನಾರಾಯಣಸ್ವಾಮಿ ಸೇರಿದಂತೆ ಇತರರು ಸ್ಥಳದಿಂದ ಪರಾರಿಯಾಗಿದ್ದಾರೆ.

ಸ್ಥಳದಲ್ಲಿದ್ದ ಎರಡು ಮರಳು ತುಂಬಿದ ಲಾರಿಗಳನ್ನು ತಹಶೀಲ್ದಾರ್ ಅವರು ವಶಕ್ಕೆ ಪಡೆದಿದ್ದಾರೆ. ಆರೋಪಿ ಚಂದ್ರಶೇಖರ್‌ ಅವರ ವಿಚಾರಣೆಯನ್ನು ಪೊಲೀಸರು ಮುಂದುವರೆಸಿದ್ದು, ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ.

ಮಂಡ್ಯದಲ್ಲಿ ಲಾರಿ ಹತ್ತಿಸಲು ಪ್ರಯತ್ನ : ಕಳೆದ ಸೆಪ್ಟೆಂಬರ್‌ನಲ್ಲಿ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಅರಕೆರೆ ಗ್ರಾಮದ ದೇವಾಲಯದ ಸಮೀಪವಿರುವ ಸರ್ಕಾರಿ ತೊರೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆ ಮೇಲೆ ನಾಗಮಂಗಲ ಡಿವೈಎಸ್ಪಿ ಸವಿತಾ ಹೂಗಾರ್‌ ದಾಳಿ ನಡೆಸಿದ್ದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಅವರ ಜೀಪಿಗೆ ಲಾರಿಯನ್ನು ಗುದ್ದಿ ಅವರನ್ನು ಕೊಲೆ ಮಾಡಲು ಪ್ರಯತ್ನ ನಡೆಸಲಾಗಿತ್ತು. ಆದರೆ, ಜೀಪ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಡಿವೈಎಸ್ಪಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.

English summary
A group belonging to a sand mafia, threatened Revenue officials, including Kolar tahsildar Ranegegowda when they were trying to seize vehicles that were illegally transporting sand near Kendatti under Vemagal, Kolar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X