ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ಕಟ್ಟುವವರಿಗೆ ರಾಜ್ಯ ಬಿಜೆಪಿ ಸರ್ಕಾರದಿಂದ ಶುಭಸುದ್ದಿ!

|
Google Oneindia Kannada News

ಬೆಂಗಳೂರು, ಫೆ. 12: ಮರಳಿನ ಕೊರತೆಯಿಂದ ಮನೆ ನಿರ್ಮಾಣ ಮುಂದೂಡಿದ್ದವರಿಗೆ ಇದೀಗ ಶುಭ ಸುದ್ದಿ ಬಂದಿದೆ. ಇದೀಗ ರಾಜ್ಯ ಸರ್ಕಾರ ಆನ್‌ಲೈನ್ ಬುಕಿಂಗ್ ಮೂಲಕ ಮನೆ ಬಾಗಿಲಿಗೆ ಮರಳು ಮಾರಾಟ ಮಾಡಲು ಮುಂದಾಗಿದೆ. ಜೊತೆಗೆ ನೂತನ ಮರಳು ನೀತಿ ಜಾರಿಗೆ ತರಲು ಅಂತಿಮ ಸಿದ್ಧತೆ ನಡೆಸಿದ್ದು, ಸುಲಭವಾಗಿ ದರದಲ್ಲಿ, ಸುಲಭವಾಗಿ ಮರಳು ಸಿಗುವಂತೆ ಸರ್ಕಾರ ನೀತಿ ರೂಪಿಸಲಾಗಿದೆ. ಆಂಧ್ರಪ್ರದೇಶ ಸರ್ಕಾರದ ಮಾದರಿಯಲ್ಲಿ ಆನ್‌ಲೈನ್ ಬುಕಿಂಗ್ ಮೂಲಕ ಮರಳು ಮಾರಾಟ ಮಾಡುವುದು ಸರ್ಕಾರದ ಯೋಜನೆಯಾಗಿದೆ.

ಸರ್ಕಾರವೇ ಮರಳು ಮಾರಾಟ ಮಾಡುವುದರಿಂದ ಇನ್ಮುಂದೆ ಮನೆ ಕಟ್ಟುವವರಿಗೆ ಮಧ್ಯವರ್ತಿಗಳ ಕಾಟ ಇರುವುದಿಲ್ಲ. ನೂತನ ಮರಳು ನೀತಿ ಕುರಿತು ಅಧಿಕಾರಿಗಳೊಂದಿಗೆ ಅಂತಿಮ ಹಂತದ ಚರ್ಚೆ ನಡೆಸಿದ ಬಳಿಕ ಸಿಎಂ ಯಡಿಯೂರಪ್ಪ, ಇದೇ ವಾರ ನಡೆಯುವ ಸಭೆಯಲ್ಲಿ ಸಂಪುಟದ ಅನುಮೋದನೆಗೆ ನೂತನ ಕರಡು ನೀತಿ ಮಂಡಿಸಲು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.

ಕೃಷಿ ಬಜೆಟ್ ಬಳಿಕ ಇದೀಗ, 'ಮಕ್ಕಳ ಬಜೆಟ್' ಮಂಡನೆಗೆ ಬಿಎಸ್‌ವೈ ಸಿದ್ಧತೆಕೃಷಿ ಬಜೆಟ್ ಬಳಿಕ ಇದೀಗ, 'ಮಕ್ಕಳ ಬಜೆಟ್' ಮಂಡನೆಗೆ ಬಿಎಸ್‌ವೈ ಸಿದ್ಧತೆ

ಸಂಪುಟದ ಒಪ್ಪಿಗೆ ಬಳಿಕ ಇದೇ ಫೆಬ್ರವರಿ 17 ರಿಂದ ಆರಂಭವಾಗುವ ಜಂಟಿ ಅಧಿವೇಶನದಲ್ಲಿ ಕರ್ನಾಟಕ ಉಪಖನಿಜ ರಿಯಾಯಿತಿ ತಿದ್ದುಪಡಿ ನಿಯಮಾವಳಿ ಮಂಡಿಸಿ, ಅಂಗೀಕಾರ ಪಡೆಯಲಿದೆ. ಹೀಗಾಗಿ ಮಾರ್ಚ್ ಮೊದಲ ವಾರದಲ್ಲಿಯೇ ಮನೆ ಬಾಗಿಲಿಗೆ ಮರಳು ಸರಬರಾಜು ಆಗಲಿದೆ.

ಇನ್ಮುಂದೆ ಸುಲಭ ದರದಲ್ಲಿ ಸುಲಭವಾಗಿ ಮರಳು ಲಭ್ಯ

ಇನ್ಮುಂದೆ ಸುಲಭ ದರದಲ್ಲಿ ಸುಲಭವಾಗಿ ಮರಳು ಲಭ್ಯ

ರಾಜ್ಯದ ಎಲ್ಲ ವರ್ಗದ ಜನರಿಗೆ ಹಾಗೂ ಸರ್ಕಾರದ ಪ್ರಮುಖ ಯೋಜನೆಗಳಿಗೆ ಸುಲಭ ದರದಲ್ಲಿ ಸುಲಭವಾಗಿ ಮರಳು ದೊರೆಯುವಂತೆ ಮಾಡಲು ಸಚಿವ ಸಂಪುಟ ಉಪ ಸಮಿತಿಯ ನೀತಿ ರೂಪಿಸಿದೆ.

ನೂತನ ಮರಳು ನೀತಿಯಿಂದ ರಾಜ್ಯದಲ್ಲಿರುವ ಮರಳಿನ ಕೊರತೆಯನ್ನು ನೀಗಿಸಲು ಸಾಧ್ಯವಾಗಲಿದೆ. ಜೊತೆಗೆ ಮಧ್ಯವರ್ತಿಗಳ ಕಾಟವಿಲ್ಲದೆ, ಸೂಕ್ತ ದರಕ್ಕೆ ಸೂಕ್ತ ಪ್ರಮಾಣದ ಮರಳು ಸಿಗಲಿದೆ.

ರಾಜ್ಯದಲ್ಲಿ ಮರಳಿನ ಬೇಡಿಕೆ ಹಾಗೂ ಉತ್ಪಾದನೆ

ರಾಜ್ಯದಲ್ಲಿ ಮರಳಿನ ಬೇಡಿಕೆ ಹಾಗೂ ಉತ್ಪಾದನೆ

ರಾಜ್ಯದಲ್ಲಿ ಅಂದಾಜು 45 ದಶಲಕ್ಷ ಮೆಟ್ರಿಕ್ ಟನ್ ಪ್ರಮಾಣದ ಮರಳಿನ ಬೇಡಿಕೆ ಇದೆ. ಈ ಪೈಕಿ 30 ದಶಲಕ್ಷ ಮೆಟ್ರಿಕ್ ಟನ್ ಮರಳನ್ನು ಎಂ ಸ್ಯಾಂಡ್ ಘಟಕಗಳಿಂದ ಉತ್ಪಾದನೆ ಆಗುತ್ತಿದೆ. ಜೊತೆಗೆ ನದಿ ಪಾತ್ರಗಳಲ್ಲಿ ಹಾಗೂ ಪಟ್ಟಾ ಜಮೀನುಗಳಲ್ಲಿ ಮರಳು ಗಣಿಗಾರಿಕೆ ಲೈಸೆನ್ಸ್ ಪ್ರದೇಶಗಳಿಂದ ಒಟ್ಟು 4.5 ದಶಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದೆ. ಹೊರ ರಾಜ್ಯಗಳಿಂದ ಅಂದಾಜು 2 ಲಕ್ಷ ಮೆಟ್ರಿಕ್ ಟನ್ ಪ್ರಮಾಣದ ಎಂಸ್ಯಾಂಡ್ ಮತ್ತು ನದಿ ಮರಳು ರಾಜ್ಯದಲ್ಲಿ ಪೂರೈಕೆಯಾಗುತ್ತಿದೆ. ಬೇಡಿಕೆ ಮತ್ತು ಸರಬರಾಜಿಗೆ 8.5 ದಶಲಕ್ಷ ಮೆಟ್ರಿಕ್ ಟನ್ ಕೊರತೆಯನ್ನು ನೀಗಿಸಲು ಸರ್ಕಾರ ಕರ್ನಾಟಕ ಉಪಖನಿಜ ರಿಯಾಯಿತಿ ತಿದ್ದುಪಡಿ ನಿಯಮಾವಳಿ ತರಲಿದೆ.

'ಇದು ಸಿಎಂ ಯಡಿಯೂರಪ್ಪ ಸರ್ಕಾರವೊ? ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಂಪುಟವೊ?''ಇದು ಸಿಎಂ ಯಡಿಯೂರಪ್ಪ ಸರ್ಕಾರವೊ? ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಂಪುಟವೊ?'

ಆನ್‍ಲೈನ್ ಬುಕಿಂಗ್ ಮೂಲಕ ಮರಳು ಮಾರಾಟ

ಆನ್‍ಲೈನ್ ಬುಕಿಂಗ್ ಮೂಲಕ ಮರಳು ಮಾರಾಟ

ಮರಳನ್ನು ಬಳಕೆದಾರರಿಗೆ ಆನ್‍ಲೈನ್ ಬುಕಿಂಗ್ ಮೂಲಕ ತಲುಪಿಸುವ ವ್ಯವಸ್ಥೆ ಕಲ್ಪಿಸಲು ವಾಕಾಶವನ್ನು ನೂತನ ಮರಳು ನೀತಿಯಲ್ಲಿ ರೂಪಿಸಲಾಗಿದೆ.

ಮರಳು ಸಾಗಾಣಿಕೆ ವಾಹನಗಳ ಚಲನ ವಲನಗಳ ಮೇಲೆ ನಿಗಾ ವಹಿಸಲಾಗುವುದು. ಸರ್ಕಾರಿ ಕಾಮಗಾರಿ, ಬೃಹತ್ ಯೋಜನೆಗಳನ್ನು ನಿರ್ವಹಿಸುವ ಖಾಸಗಿ ಸಂಸ್ಥೆ, ಗುತ್ತಿಗೆದಾರರು ಜಿಲ್ಲಾ ಮರಳು ಸಮಿತಿ ನಿರ್ಧರಿಸಿದ ದರವನ್ನು ಸರ್ಕಾರಕ್ಕೆ ಪಾವತಿಸಿ ಮರಳು ಬ್ಲಾಕ್‍ಗಳನ್ನು ಮೀಸಲಿರಿಸಿ ಕಾಮಗಾರಿ, ಬೃಹತ್ ಯೋಜನೆಗ ಗಳಿಗೆ ಬಳಸಿಕೊಳ್ಳಬಹುದು.

ಹೊರರಾಜ್ಯಗಳಿಂದ ಸಾಗಣೆಯಾಗುವ ಮರಳನ್ನು ರಾಜ್ಯದಲ್ಲಿ ಮಾರಾಟ ಮಾಡಬೇಕಿದ್ದಲ್ಲಿ ಸರ್ಕಾರ ನಿಗದಿಪಡಿಸಿರುವ ನಿಯಂತ್ರಣ ಶುಲ್ಕವನ್ನು ಪಾವತಿಸಬೇಕು. ಪಟ್ಟಾ ಜಮೀನಿನಲ್ಲಿ ಮರಳು ಗಣಿಗಾರಿಕೆಯನ್ನು ಪಟ್ಟಾದಾರರಿಗೆ ಅಥವಾ ಪಟ್ಟಾದಾರರಿಂದ ಪಡೆದ ಒಪ್ಪಿಗೆ ಪ್ರಮಾಣ ಪತ್ರವನ್ನು ಸಲ್ಲಿಸಿದವರಿಗೆ ಪರವಾನಗಿ ನೀಡಲಾಗುವುದು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧೀನದಲ್ಲಿ ಮಿನರಲ್ ಪ್ರೊಟೆಕ್ಷನ್ ಫೋರ್ಸ್ ಸ್ಥಾಪಿಸಿ ಅನಧಿಕೃತ ಮರಳು ಗಣಿಗಾರಿಕೆ ದಾಸ್ತಾನು ಮತ್ತು ಸಾಗಾಣಿಕೆ ವಿರುದ್ಧ ಕ್ರಮ ಜರುಗಿಸಲಾಗುವುದು. ಕರ್ನಾಟಕ ಉಪಖನಿಜ ರಿಯಾಯಿತಿ(ತಿದ್ದುಪಡಿ) ನಿಯಮಾವಳಿ 2016 ರಂತೆ ಟೆಂಡರ್ ಕಂ ಹರಾಜು ಮೂಲಕ ಮಂಜೂರಾದ ಮರಳು ಗುತ್ತಿಗೆ ಪ್ರದೇಶಗಳಲ್ಲಿ ಗುತ್ತಿಗೆ ಅವಧಿ ಮುಗಿಯುವವರೆಗೆ ಗಣಿಗಾರಿಕೆ ಮಾಡಲು ಅವಕಾಶ ಕಲ್ಪಿಸಲು ನೂತನ ನೀತಿಯಲ್ಲಿ ತಿದ್ದುಪಡಿ ಮಾಡಲಾಗಿದೆ.

ಮರಳು ಕೊರತೆಯಿಂದ ಅಭಿವೃದ್ಧಿ ಕುಂಠಿತ

ಮರಳು ಕೊರತೆಯಿಂದ ಅಭಿವೃದ್ಧಿ ಕುಂಠಿತ

ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ ನಿಗದಿತ ಸಮಯದಲ್ಲಿ ನಿಯಮಿತವಾಗಿ ಮರಳು ಪೂರೈಕೆಯಾಗದೇ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಉಪಸಮಿತಿಯ ಶಿಫಾರಸ್ಸುಗಳನ್ವಯ ಮರಳು ನೀತಿಯ ಕರಡನ್ನು ತಯಾರಿಸಲಾಗಿದೆ.

ರಾಜ್ಯದ ಭೌಗೋಳಿಕ, ಭೂವೈಜ್ಞಾನಿಕ ಮತ್ತು ಆಡಳಿತಾತ್ಮಕ ಹಿನ್ನೆಲೆಯನ್ನು ಪರಿಗಣಿಸಿ, ಸರ್ಕಾರಿ ಮತ್ತು ಸಾರ್ವಜನಿಕ ನಿರ್ಮಾಣ ಕಾಮಗಾರಿಗಳಿಗೆ ನಿಯಮಿತವಾಗಿ, ಸುಲಭವಾಗಿ ಮತ್ತು ಸ್ಪರ್ಧಾತ್ಮಕ ದರದಲ್ಲಿ ಮರಳು ದೊರೆಯುವಂತೆ ಮಾಡಲು ಹೊಸ ಮರಳು ನೀತಿ -2020ನ್ನು ಸರ್ಕಾರ ರೂಪಿಸಿದೆ.

ನೂತನ ಮರಳು ನೀತಿಯಲ್ಲಿ ಏನಿದೆ?

ನೂತನ ಮರಳು ನೀತಿಯಲ್ಲಿ ಏನಿದೆ?

ನೂತನ ಮರಳು ನೀತಿಯಲ್ಲಿ ಈ ಹಿಂದಿನ ನಿಯಮಾವಳಿಗಳಿಗೆ ತಿದ್ದುಪಡಿ ತರಲಾಗಿದೆ. ಸರ್ಕಾರದ ಬೊಕ್ಕಸಕ್ಕು ತೆರಿಗೆ ಬರದೆ, ಮಧ್ಯವರ್ತಿಗಳ ಪಾಲಾಗುತ್ತಿದ್ದ ಆದಾಯ ಸರ್ಕಾರಕ್ಕೆ ಬರುವಂತೆ ನೀಯಮ ರೂಪಿಸಲಾಗಿದೆ.

ಮೊದಲನೇ ಮತ್ತು ಎರಡನೇ ಶ್ರೇಣಿಯ ಹಳ್ಳ ತೊರೆಗಳಲ್ಲಿ ಲಭ್ಯವಿರುವ ಮರಳು ನಿಕ್ಷೇಪಗಳನ್ನು ಗುರುತಿಸಿ, ಸೂಕ್ತ ಅನುಮೋದನೆ ಪಡೆದು, ಸ್ಥಳೀಯ ಕಡಿಮೆ ವರಮಾನದ ವಸತಿ ಯೋಜನೆ, ಶೌಚಾಲಯ ನಿರ್ಮಾಣ ಹಾಗೂ ಇತರೆ ಸ್ಥಳೀಯ ನಿರ್ಮಾಣ ಕಾಮಗಾರಿಗಳಿಗೆ ಮಾತ್ರ ಖನಿಜ ರವಾನೆ ಪರವಾನಗಿಯೊಂದಿಗೆ ಮರಳನ್ನು ಗ್ರಾಮಪಂಚಾಯತ್ ಮೂಲಕ ಸರ್ಕಾರ ನಿಗದಿಪಡಿಸಿದ ದರದಲ್ಲಿ ವಿಲೇವಾರಿ ಮಾಡುವುದು.

ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಲಘು ವಾಹನಗಳಲ್ಲಿ ಮಾತ್ರ ಮರಳು ಸಾಗಾಣಿಕೆಗೆ ಅನುಮತಿ ನೀಡಲಾಗುವುದು. 3, 4 , 5 ನೇ ಕ್ರಮಾಂಕದಂತೆ ಲಭ್ಯವಿರುವ ಮರಳನ್ನು ಪರವಾನಗಿ ಪಡೆದ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮರಳು ಗಣಿಗಾರಿಕೆ, ಸಾಗಾಣಿಕೆ, ಸಂಗ್ರಹಣೆ ಮತ್ತು ಮರಳು ವಿಲೇವಾರಿ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿರ್ವಹಿಲಿವೆ.

English summary
The news sand policy of chief minister b s yediyurappa government come into force soon. Sand can be purchased by booking online with the new sand policy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X