ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಣ್ಯಕೋಟಿ ಯೋಜನೆಗೆ ದೇಣಿಗೆ, ಸರ್ಕಾರಿ ನೌಕರರಿಗೆ ತೆರಿಗೆ ವಿನಾಯಿತಿ

|
Google Oneindia Kannada News

ಬೆಂಗಳೂರು, ನವೆಂಬರ್ 27; ಕರ್ನಾಟಕ ಸರ್ಕಾರ 'ಪುಣ್ಯಕೋಟಿ ದತ್ತು ಯೋಜನೆ' ಘೋಷಣೆ ಮಾಡಿದೆ. ಈ ಯೋಜನೆ ಅನುಷ್ಠಾನಕ್ಕೆ ಸರ್ಕಾರಿ ನೌಕರರ ನವೆಂಬರ್‌ ತಿಂಗಳ ವೇತನ ಕಡಿತಗೊಳಿಸಿ ದೇಣಿಗೆ ಪಡೆಯಲಾಗುತ್ತದೆ. ಹಣಕಾಸು ಸಚಿವಾಲಯ ವೇತನ ಕಡಿತಕ್ಕೆ ಮಂಜೂರಾತಿ ನೀಡಿದೆ.

ಸರ್ಕಾರಿ ಅಧಿಕಾರಿ/ ನೌಕರರು ನೀಡುವ ವಂತಿಗೆ ಮೊತ್ತಕ್ಕೆ ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 80ಜಿ ರನ್ವಯ ವಿನಾಯ್ತಿ ಇರುವ ಕುರಿತು ವಿಷಯ ಪ್ರಸ್ತಾಪಿಸಲಾಗಿತ್ತು. ಆರ್ಥಿಕ ಇಲಾಖೆಯ ಟಿಪ್ಪಣಿ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇವರ ಇವರ ಪತ್ರದ ಆನ್ವಯ ಈಗ ಆದೇಶವೊಂದನ್ನು ಹೊರಡಿಸಲಾಗಿದೆ.

Karnataka govt employees; ಪುಣ್ಯಕೋಟಿ ಯೋಜನೆಗೆ ಎಷ್ಟು ವೇತನ ಕಡಿತ?Karnataka govt employees; ಪುಣ್ಯಕೋಟಿ ಯೋಜನೆಗೆ ಎಷ್ಟು ವೇತನ ಕಡಿತ?

ಜಿ. ಎನ್. ಪ್ರವೀಣ್ ಸರ್ಕಾರದ ಅಧೀನ ಕಾರ್ಯದರ್ಶಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಈ ಆದೇಶ ಹೊರಡಿಸಿದ್ದಾರೆ. ಆದೇಶದಲ್ಲಿ ಪುಣ್ಯಕೋಟಿ ದತ್ತು ಯೋಜನೆಗೆ ನೀಡುವ ವಂತಿಗೆ ಮೊತ್ತಕ್ಕೆ ಆದಾಯ ತೆರಿಗೆ ವಿನಾಯಿತಿ ನೀಡುವ ಕುರಿತು ಪ್ರಸ್ತಾಪಿಸಲಾಗಿದೆ.

ಪ್ರೌಢಶಾಲೆಗಳ ಅತಿಥಿ ಶಿಕ್ಷಕರಿಗೆ ವೇತನ ಬಿಡುಗಡೆ ಮಾಡಿದ ಸರ್ಕಾರ ಪ್ರೌಢಶಾಲೆಗಳ ಅತಿಥಿ ಶಿಕ್ಷಕರಿಗೆ ವೇತನ ಬಿಡುಗಡೆ ಮಾಡಿದ ಸರ್ಕಾರ

tax

ಆದೇಶ ಹೀಗಿದೆ; ಆರ್ಥಿಕ ಇಲಾಖೆಯಿಂದ ಹೊರಡಿಸಲಾದ ಆದೇಶದಲ್ಲಿ ಪುಣ್ಯಕೋಟಿ ದತ್ತು ಯೋಜನೆಯ ಸುಗಮ ಅನುಷ್ಠಾನಕ್ಕಾಗಿ ವಿವಿಧ ವೃಂದದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ನಿಗಮ/ ಮಂಡಳಿ/ ಪ್ರಾಧಿಕಾರ/ ವಿಶ್ವವಿದ್ಯಾಲಯ/ ಸ್ವಾಯತ್ತ ಸಂಸ್ಥೆಗಳ ನೌಕರರ ನವೆಂಬರ್ ತಿಂಗಳ ವೇತನದಿಂದ ಒಂದು ಬಾರಿಗೆ ಸೀಮಿತವಾಗಿ ಕಡಿತಗೊಳಿಸಲು ಮಂಜೂರಾತಿ ನೀಡಲಾಗಿದೆ.

ಪುಣ್ಯಕೋಟಿ ದತ್ತು ಯೋಜನೆ: ಸರ್ಕಾರಿ ನೌಕರರಿಂದ 100 ಕೋಟಿ ರೂ. ದೇಣಿಗೆಪುಣ್ಯಕೋಟಿ ದತ್ತು ಯೋಜನೆ: ಸರ್ಕಾರಿ ನೌಕರರಿಂದ 100 ಕೋಟಿ ರೂ. ದೇಣಿಗೆ

'ಎ' ವೃಂದದ ಅಧಿಕಾರಿಗಳು ರೂ.11,000. 'ಬಿ' ವೃಂದದ ಅಧಿಕಾರಿಗಳು ರೂ. 4,000. 'ಸಿ' ವೃಂದದ ನೌಕರರ ರೂ. 400 ವೇತನ ಕಡಿತವಾಗಲಿದೆ. 'ಡಿ' ವೃಂದದ ನೌಕರರಿಗೆ ವಿನಾಯಿತಿ ನೀಡಿ ನಿರ್ಧಿಷ್ಟಪಡಿಸಿದ ಮೊತ್ತದ ವಂತಿಗೆಯನ್ನು ಕಟಾಯಿಸಲು ಹಾಗೂ ನಿಗದಿತ ಯೋಜನೆಗೆ ಬಳಕೆ ಮಾಡಲು ಸರ್ಕಾರವು ಮಂಜೂರಾತಿ ನೀಡಿದೆ ಎಂದು ತಿಳಿಸಲಾಗಿದೆ.

ರಾಜ್ಯ ಸರ್ಕಾರಿ ನೌಕರರ ವೇತನದಿಂದ ಕಟಾವು ಮಾಡಲಾದ ವಂತಿಗೆ ಮೊತ್ತಕ್ಕೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಹೊಂದಿರುವ ಆದಾಯ ತೆರಿಗೆ ವಿನಾಯಿತಿ ಅನ್ವಯ ಕ್ರಮಕೈಗೊಂಡು ಆದಾಯ ತೆರಿಗೆ ಅಧಿನಿಯಮ, 1961ರ ಕಲಂ 80(ಜಿ) ರನ್ವಯ ವಿನಾಯಿತಿ ನೀಡಿ ಆದೇಶ ಹೊರಡಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಕೋರಿತ್ತು.

ಈ ಹಿನ್ನಲೆಯಲ್ಲಿ ಈ ಬಗ್ಗೆ ಸೂಕ್ತ ಆದೇಶ ಹೊರಡಿಸುವ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಮುಂದಿನ ಕ್ರಮವಹಿಸುವಂತೆ ಮನವಿಯನ್ನು ಮಾಡಿದ್ದರು. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80G ರನ್ವಯ ತೆರಿಗೆ ವಿನಾಯಿತಿ ಇದ್ದು, ಅದರಂತೆ ಪುಣ್ಯಕೋಟಿ ದತ್ತು ಯೋಜನೆಗೆ ವಂತಿಗೆಯನ್ನು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಗೆ ನೀಡಿದ ಅಧಿಕಾರಿ/ ನೌಕರರು ಸೆಕ್ಷನ್ 80G ರನ್ವಯ ವಿನಾಯಿತಿ ಪಡೆಯಬಹುದಾಗಿರುತ್ತದೆ.

ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ SOG ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಯ ಸ್ವೀಕಾರಾರ್ಹತ ಮತ್ತು ಅದರ ಅಡಿಯಲ್ಲಿ ಹೊರಡಿಸಲಾದ ಆದೇಶಗಳು ಯಾವುದಾದರೂ ಇದ್ದಲ್ಲಿ ಅಗತ್ಯ ಸ್ಪಷ್ಟಿಕರಣಗಳನ್ನು ನೀಡಲು ಕ್ರಮಗಳನ್ನು ತೆಗೆದುಕೊಳ್ಳಲು ಸಲಹೆ ನೀಡಿರುತ್ತದೆ. ಸದರಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

vidanasoudha

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯು ಆದಾಯ ತೆರಿಗೆ ಇಲಾಖೆಯಿಂದ ಪಡೆದಿರುವ Form Number:10AC ರ ಪ್ರಕಾರ 'ಪುಣ್ಯಕೋಟಿ ಮತ್ತು ಯೋಜನೆಗೆ ದೇಣಿಗೆ ನೀಡುವವರು ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80ಜಿ ರನ್ವಯ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿರುತ್ತದೆ ಎಂದು ಸೂಚಿಸಲಾಗಿದೆ.

English summary
Karnataka government employees will volunteered to donate a portion of their salary for Punyakoti scheme of adopting cows. They will get income tax exemption for this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X