ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಕಲೇಶಪುರ-ಮಾರನಹಳ್ಳಿ ಚತುಷ್ಪಥ ಕಾಮಗಾರಿ ಶೀಘ್ರ ಪೂರ್ಣ: ಗಡ್ಕರಿ

ಲೋಕಸಭೆಯಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಉತ್ತರಿಸಿದ ಸಚಿವ ನಿತಿನ್‌ ಗಡ್ಕರಿ ಮಳೆಗಾಲದ ಬಳಿಕ ಕಾಮಗಾರಿ ಮುಗಿಸಲಾಗುವದು ಎಂದಿದ್ದಾರೆ.

|
Google Oneindia Kannada News

ನವದೆಹಲಿ, ಫೆಬ್ರವರಿ 3: ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್) 75 ರ ಹಾಸನ-ಸಕಲೇಶಪುರ-ಮಾರನಹಳ್ಳಿ ವಿಭಾಗದ ಚತುಷ್ಪಥ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಮಳೆಗಾಲದ ನಂತರ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಉತ್ತರಿಸಿದ ಸಚಿವ ನಿತಿನ್‌ ಗಡ್ಕರಿ, ಸುಮಾರು 45 ಕಿ.ಮೀ ಉದ್ದದ ಯೋಜನೆಯಲ್ಲಿ 30 ಕಿ.ಮೀ.ನಲ್ಲಿ ಚತುಷ್ಪಥ ಕಾಮಗಾರಿ ಪೂರ್ಣಗೊಂಡಿದೆ. ಇನ್ನೊಂದು 5 ಕಿಮೀ ವಿಸ್ತರಣೆಯನ್ನು ಜೂನ್, 2023ರೊಳಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. ರೈಟ್ ಆಫ್ ವೇಯ ನಿರ್ಬಂಧಿತ ಅಗಲದಿಂದಾಗಿ 10 ಕಿಮೀ ವಿಸ್ತರಣೆಗೆ ರಸ್ತೆಯನ್ನು ಮುಚ್ಚುವ ಅಗತ್ಯವಿದೆ. ಇದನ್ನು ಮಳೆಗಾಲದ ನಂತರ ಮಾಡಲಾಗುವುದು ಎಂದು ತಿಳಿಸಿದರು.

ನಿತಿನ್ ಗಡ್ಕರಿ ಜೀವ ಬೆದರಿಕೆ: ತನಿಖೆಯ ಭರವಸೆ ನೀಡಿದ ಬೊಮ್ಮಾಯಿನಿತಿನ್ ಗಡ್ಕರಿ ಜೀವ ಬೆದರಿಕೆ: ತನಿಖೆಯ ಭರವಸೆ ನೀಡಿದ ಬೊಮ್ಮಾಯಿ

ರಸ್ತೆಯನ್ನು ಸುಸ್ಥಿತಿಯಲ್ಲಿಡಲು 2023ರ ಜ.9ರಂದು ಸಕಲೇಶಪುರ- ಮಾರನಹಳ್ಳಿ ನಡುವೆ 10 ಕಿ.ಮೀ ಉದ್ದದ ನಿರ್ವಹಣಾ ಕಾಮಗಾರಿಗೆ ಮಂಜೂರಾತಿ ನೀಡಲಾಗಿದ್ದು, ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ಹಾಸನ- ಮಾರನಹಳ್ಳಿ ರಸ್ತೆ ನಿರ್ಮಾಣಕ್ಕೆ ಅರಣ್ಯ ಭೂಮಿ ಸೇರಿದಂತೆ ಭೂಮಿಯನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ಮುಖ್ಯ ಗುತ್ತಿಗೆದಾರರ ದಿವಾಳಿತನ ಪ್ರಕ್ರಿಯೆ, ಬ್ಲಾಸ್ಟಿಂಗ್ ಅನುಮತಿಯಲ್ಲಿ ವಿಳಂಬ, ಭಾರೀ ಮಳೆ, ಕೋವಿಡ್ -19 ಸಾಂಕ್ರಾಮಿಕ ಮತ್ತು ಗುತ್ತಿಗೆದಾರರಿಂದ ನಿಧಾನಗತಿಯ ಪ್ರಗತಿ ಸೇರಿದಂತೆ ಹಲವಾರು ಕಾರಣಗಳಿಂದ ಯೋಜನೆಯ ಕೆಲಸ ವಿಳಂಬವಾಗಿದೆ ಎಂದು ಗಡ್ಕರಿ ಹೇಳಿದರು.

ಎನ್‌ಎಚ್‌ಎಐಯಿಂದ ಕೊನೆಗೂ ಸ್ಪಂದನೆ

ಎನ್‌ಎಚ್‌ಎಐಯಿಂದ ಕೊನೆಗೂ ಸ್ಪಂದನೆ

ಸಕಲೇಶಪುರ ಮತ್ತು ಹಾಸನ ಜಿಲ್ಲೆಯ ಮಾರನಹಳ್ಳಿ ನಡುವಿನ ಬೆಂಗಳೂರು-ಮಂಗಳೂರು ಎನ್‌ಎಚ್ 75 ರ 10 ಕಿಲೋಮೀಟರ್ ಸಂಪೂರ್ಣ ಹದಗೆಟ್ಟಿರುವ ಸಾರ್ವಜನಿಕರ ಆಕ್ರೋಶಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಕೊನೆಗೂ ಸ್ಪಂದಿಸಿದ್ದು, ಈಗಿರುವ ಹೆದ್ದಾರಿ ದುರಸ್ತಿ ಮತ್ತು ನಿರ್ವಹಣೆಗೆ ನಿರ್ಧರಿಸಿತ್ತು.

ನಿತಿನ್ ಗಡ್ಕರಿಗೆ ಜೀವ ಬೆದರಿಕೆ: ಹಣ ನೀಡದಿದ್ದರೆ ಬಾಂಬ್ ಬ್ಲಾಸ್ಟ್, ಜೀವ ಹಾನಿ ಬೆದರಿಕೆ ಹಾಕಿದ್ದ ದಾವುದ್ ಗ್ಯಾಂಗ್ ಸದಸ್ಯನಿತಿನ್ ಗಡ್ಕರಿಗೆ ಜೀವ ಬೆದರಿಕೆ: ಹಣ ನೀಡದಿದ್ದರೆ ಬಾಂಬ್ ಬ್ಲಾಸ್ಟ್, ಜೀವ ಹಾನಿ ಬೆದರಿಕೆ ಹಾಕಿದ್ದ ದಾವುದ್ ಗ್ಯಾಂಗ್ ಸದಸ್ಯ

12 ಕೋಟಿ ವೆಚ್ಚದಲ್ಲಿ ಬಿಡ್‌

12 ಕೋಟಿ ವೆಚ್ಚದಲ್ಲಿ ಬಿಡ್‌

ಬೆಂಗಳೂರಿನ ಹೆದ್ದಾರಿ ಪ್ರಾದೇಶಿಕ ಕಚೇರಿಯಲ್ಲಿರುವ ಮುಖ್ಯ ಪ್ರಧಾನ ವ್ಯವಸ್ಥಾಪಕರು (ತಾಂತ್ರಿಕ) ಡಿಸೆಂಬರ್ 16ರಂದು ಹಾಸನ-ಮಾರನಹಳ್ಳಿ ವಿಭಾಗದ ಪ್ರಸ್ತುತ ಎನ್‌ಎಚ್‌ ನಿರ್ವಹಣೆಗೆ ಸಕಲೇಶಪುರ ವಿನ್ಯಾಸ ಕಿಮೀ 220 ರಿಂದ ಮಾರನಹಳ್ಳಿ ವಿನ್ಯಾಸ ಕಿಮೀ 230.06 ಕಿಮೀ NH 75 ವರೆಗೆ ಅಂದಾಜು ₹12 ಕೋಟಿ ವೆಚ್ಚದಲ್ಲಿ ಬಿಡ್‌ಗಳನ್ನು ಆಹ್ವಾನಿಸಿದ್ದರು.

10 ಕಿ.ಮೀ. ರಸ್ತೆ ಕಾಮಗಾರಿ

10 ಕಿ.ಮೀ. ರಸ್ತೆ ಕಾಮಗಾರಿ

ಕಾಮಗಾರಿಯ ವ್ಯಾಪ್ತಿಯು ನಾಲ್ಕು ತಿಂಗಳ ಅವಧಿಯಲ್ಲಿ ಅಂದರೆ ನೈಋತ್ಯ ಮಾನ್ಸೂನ್ ಪ್ರಾರಂಭವಾಗುವ ಮೊದಲು ಯೋಜನೆಯ ಹೆದ್ದಾರಿಯಲ್ಲಿ ದಟ್ಟವಾದ ಬಿಟುಮೆನ್ ಮೆಕಾಡಮ್ (ಡಿಬಿಎಂ) ಮತ್ತು ಬಿಟುಮೆನ್ ಕಾಂಕ್ರೀಟ್ ಅನ್ನು ಹಾಕುವಿಕೆಯನ್ನು ಒಳಗೊಂಡಿದೆ. ಆನ್‌ಲೈನ್ ಬಿಡ್‌ಗಳನ್ನು ಸಲ್ಲಿಸಲು ಡಿಸೆಂಬರ್ 29 ಕೊನೆಯ ದಿನಾಂಕವಾಗಿತ್ತು. ಇಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ ಕ್ರಮದಲ್ಲಿ 2017ರಿಂದ ಪ್ರಾಧಿಕಾರವು ಕಾರ್ಯಗತಗೊಳಿಸುತ್ತಿರುವ ಹಾಸನ-ಮಾರನಹಳ್ಳಿ ಚತುಷ್ಪಥ ರಸ್ತೆ ವಿಸ್ತರಣೆ ಯೋಜನೆಯ ಭಾಗವಾಗಿ 10 ಕಿ.ಮೀ. ರಸ್ತೆ ಕಾಮಗಾರಿ ಕುಟುಂತ ಸಾಗಿದೆ.

ಭೂಕುಸಿತಗಳು ಮತ್ತು ಪ್ರವಾಹ ಕಾರಣ

ಭೂಕುಸಿತಗಳು ಮತ್ತು ಪ್ರವಾಹ ಕಾರಣ

ಈ ವಲಯದಲ್ಲಿ ಎನ್‌ಎಚ್‌ಎಐ ಇನ್ನೂ ಚತುಷ್ಪಥ ಯೋಜನೆಯ ಯಾವುದೇ ಪ್ರಗತಿಯನ್ನು ಸಾಧಿಸದಿದ್ದರೂ, ಪಶ್ಚಿಮ ಘಟ್ಟ ಮತ್ತು ಕರಾವಳಿ ಪ್ರದೇಶಗಳಲ್ಲಿ ಭೂಕುಸಿತಗಳು ಮತ್ತು ಪ್ರವಾಹಕ್ಕೆ ಕಾರಣವಾದ 2018ರ ಧಾರಾಕಾರ ಮಳೆಯಿಂದ ಈ ವಿಸ್ತರಣೆಯು ಬೇಗ ಸಾದ್ಯವಾಗುತಿರಲಿಲ್ಲ. ಚೇಂಬರ್ ಆಫ್ ಕಾಮರ್ಸ್ ಸೇರಿದಂತೆ ರಸ್ತೆ ಬಳಕೆದಾರರು ತಕ್ಷಣ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರೂ ಪ್ರಾಧಿಕಾರವು ರಸ್ತೆಯನ್ನು ಪುನಃಸ್ಥಾಪಿಸಲು ತಲೆಕೆಡಿಸಿಕೊಂಡಿರಲಿಲ್ಲ.

ವಾಣಿಜ್ಯ ಚಟುವಟಿಕೆಗಳಿಗೆ ತೊಂದರೆ

ವಾಣಿಜ್ಯ ಚಟುವಟಿಕೆಗಳಿಗೆ ತೊಂದರೆ

ಇತ್ತೀಚೆಗೆ ರಾಜ್ಯಸಭಾ ಸದಸ್ಯರಾದ ಡಿ.ವೀರೇಂದ್ರ ಹೆಗ್ಗಡೆ ಮತ್ತು ಜಗ್ಗೇಶ್ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕರಾವಳಿ ಪ್ರದೇಶದಲ್ಲಿ ಸಾಮಾನ್ಯ ಜೀವನಕ್ಕೆ ಅನುಕೂಲವಾಗುವಂತೆ ವಿಸ್ತರಣೆಯನ್ನು ಮರುಸ್ಥಾಪಿಸಬೇಕೆಂದು ಮನವಿ ಮಾಡಿದ್ದರು. ಎರಡು ವರ್ಷಗಳಿಂದ ಅನಾಹುತದ ಬಗ್ಗೆ ಎಚ್ಚರಿಕೆ ನೀಡುತ್ತಿದ್ದ ಕೆನರಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ, ಎಕ್ಸಿಮ್ ವ್ಯಾಪಾರ ಸೇರಿದಂತೆ ರಾಜ್ಯ ರಾಜಧಾನಿ ಮತ್ತು ಕರಾವಳಿಯ ನಡುವಿನ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳು ಕ್ಷೀಣಿಸಿದ್ದರಿಂದ ಅಸಮಾಧಾನಗೊಂಡಿತ್ತು. ಈಗ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಉತ್ತರ ನೀಡಿದ್ದಾರೆ.

English summary
Union Road Transport Minister Nitin Gadkari has said that the four-lane work on the Hassan-Sakaleshpur-Maranahalli section of National Highway (NH) 75 has been taken up and will be completed after monsoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X