ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಗೀರಥ ಉತ್ಸವಕ್ಕೆ ಸಿಎಂ ಜೊತೆ ಮಾಜಿ ಸಿಎಂಗಳು

By Mahesh
|
Google Oneindia Kannada News

ದಾವಣಗೆರೆ, ಜ.19: ಹೊಸದುರ್ಗ ತಾಲೂಕು ಬ್ರಹ್ಮ ವಿದ್ಯಾನಗರದ ಶ್ರೀಭಗೀರಥ ಪೀಠದಲ್ಲಿ ಜ.23ರಿಂದ ಎರಡು ದಿನಗಳ ಕಾಲ ಅಖಿಲ ಭಾರತ ಭಗಿರಥ ಜಯಂತ್ಯೋತ್ಸವ ಹಾಗೂ ಶ್ರೀ ಲೇಪಾಕ್ಷ ಮಹಾಸ್ವಾಮೀಜಿ ಐಕ್ಯ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಎಚ್ ಡಿ ಕುಮಾರಸ್ವಾಮಿ ಅವರು ಪಾಲ್ಗೊಳ್ಳುತ್ತಿದ್ದಾರೆ.

ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಎಲ್ಲಾ ಕಾರ್ಯಕ್ರಮಗಳು ನೆರವೇರಲಿದೆ. ಕರ್ನಾಟಕ ಪಾತ್ರವಲ್ಲದೆ ಪಂಜಾಬ್, ಉತ್ತರಪ್ರದೇಶ, ಬಿಹಾರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸುಮಾರು 1 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದೆ ಎಂದು ಆಯೋಜಕರು ಹೇಳಿದ್ದಾರೆ.

ಕಾರ್ಯಕ್ರಮ ವಿವರ:

* ಜ.23ರಂದು ಸಂಜೆ 5ಕ್ಕೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸಾ ಕಾರ್ಯಕ್ರಮ
* ಉಪಸ್ಥಿತಿ: ಮುರುಘಾ ಶರಣ ಡಾ. ಶ್ರೀಶಿವಮೂರ್ತಿ, ಡಾ, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ,ಐರಣಿ ಹೊಳೆಮಠದ ಬಸವರಾಜ ಸ್ವಾಮೀಜಿ, ಪಂಚಮಸಾಲಿ ಗುರುಪೀಠ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ಕಾಗಿನೆಲೆ ಕನಕ ಗುರುಪೀಠದ ಶ್ರೀನಿರಂಜನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನನಂದಪುರಿ ಸ್ವಾಮೀಜಿ ಮುಂತಾದ ಮಠಾಧೀಶರು.
* ಅಧ್ಯಕ್ಷತೆ: ಅಖಿಲ ಭಾರತ ಉಪ್ಪಾರ ಸಗರ ಒಕ್ಕೂಟದ ಮುನೀಬ್ ಸಿಂಹ್ ಚೌವ್ಹಾಣ್
* ಕೇಂದ್ರ ಸಚಿವ ಜಿಎಂ ಸಿದ್ದೇಶ್ವರ ಜ್ಯೋತಿ ಬೆಳಗಿಸಲಿದ್ದಾರೆ.
* ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಂದ 2015ರ ಕ್ಯಾಲೆಂಡರ್ ಬಿಡುಗಡೆ.
* ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಂದ ಭಗೀರಥ ಭಾವಚಿತ್ರ ಅನಾವರಣ.
* ಸಚಿವೆ ಉಮಾಶ್ರೀ ಅವರಿಂದ ಭಗೀರಥ ಜಾನಪದ ಕಲಾಕ್ಷೇತ್ರ ಲೋಕಾರ್ಪಣೆ.
* ಅತಿಥಿಗಳು: ಸಚಿವ ಬಾಲಚಂದ್ರ ಜಾರಕಿಹೊಳಿ ಹಾಗೂ ಗೂಳಿಹಟ್ಟಿ ಶೇಖರ್.

Saint Bhagiratha Utsav 2015

ಜ.24ರ ಕಾರ್ಯಕ್ರಮ
ಬೆಳಗ್ಗೆ 11ಕ್ಕೆ ಅಖಿಲ ಭಾರತ ಭಗೀರಥ ಜಯಂತಿ ಮಹೋತ್ಸವ ಹಾಗೂ ಲೇಪಾಕ್ಷ ಮಹಾಸ್ವಾಮೀಜಿ ಐಕ್ಯ ಮಂದಿರ ಲೋಕಾರ್ಪಣೆ, ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ.
* ಪಂಜಾಬ್ ಅಮೃತಸರ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ಅಧ್ಯಕ್ಷರಾದ ಮಾತಾಜಿ ಬೀಬಿ ಜಾಗೀರ್ ಕೌರ್ ಅವರಿಗೆ 'ಭಗೀರಥ ಶ್ರೀ' ಪ್ರಶಸ್ತಿ ಪ್ರದಾನ.
*ಅಧ್ಯಕ್ಷತೆ: ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷ ಸಿ ಪುಟ್ಟರಂಗ ಶೆಟ್ಟಿ
ಉಪಸ್ಥಿತಿ: ಮುಖಂಡರಾದ ಎಚ್ ಆಂಜನೇಯ, ಶ್ರೀನಿವಾಸ ಪ್ರಸಾದ್, ಶಾಮನೂರು ಶಿವಶಂಕರಪ್ಪ, ಟಿ.ಬಿ ಜಯಚಂದ್ರ, ಎಚ್ .ಸಿ ಮಹದೇವಪ್ಪ, ಯು.ಟಿ ಖಾದರ್, ರಮಾನಾಥ್ ರೈ, ಕಿಮ್ಮನೆ ರತ್ನಾಕರ್, ಟಿ.ಬಿ ಜಯಚಂದ್ರ, ಸತೀಶ್ ಜಾರಕಿಹೊಳಿ

ಬೇಡಿಕೆ: ಉಪ್ಪಾರ ಸಮಾಜವನ್ನು ಎಸ್ಟಿ ಕೆಟಗೆರಿಗೆ ಸೇರಿಸುವಂತೆ ಮನವಿ ಹಾಗೂ ಉಪ್ಪಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ ಮಾಡಲು ನಿರ್ಧರಿಸಲಾಗಿದೆ ಎಂದು ಆಯೋಜಕರಾದ ಹನುಮಂತಪ್ಪ ಹೇಳಿದ್ದಾರೆ.

ಭಾರತದಲ್ಲಿ ಸುಮಾರು 8 ಕೋಟಿ ಜನ ಹಾಗೂ ಕರ್ನಾಟಕದಲ್ಲಿ 40ಲಕ್ಷ ಜರನ್ನು ಹೊಂದಿರುವ ಉಪ್ಪಾರ ಸಮುದಾಯವನ್ನು ಸುಮಾರು 25 ವಿವಿಧ ಹೆಸರುಗಳಿಂದ ಗುರುತಿಸಲಾಗುತ್ತದೆ.

English summary
Chief Minister Siddaramaiah,Former CM HD Kumaraswamy and Jagadish Shetter to attend Saint Bhagiratha Utsav to be held on Jan.23 and 24 at Hosadurga Taluk, Davanagere. Over 1 lakh people belonging to Uppara Community from across India likely to attend the Utsav.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X