ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡಿಕೆ, ಕಾಫಿ, ತೆಂಗು ಬೆಳೆಗಾರರಿಗೆ ಸದಾನಂದ ಗೌಡ ಅಭಯ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 19: ಕಾಫಿ ಮತ್ತು ಅಡಿಕೆ ಬೆಳೆಗಳಿಗೆ ತಗುಲಿರುವ ರೋಗ ಹಾಗೂ ಬೆಲೆ ಕುಸಿತದ ಪರಿಣಾಮ ಚಿಕ್ಕಮಗಳೂರು ಸೇರಿದಂತೆ ಈ ಬೆಳೆ ಆಧರಿತ ಪ್ರದೇಶದ ಜನ ಸಂಕಷ್ಟಕ್ಕೆ ಸಿಲುಕಿದ್ದು ಪರಿಹಾರ ಕ್ರಮಗಳ ಕುರಿತು ಕೇಂದ್ರ ವಾಣಿಜ್ಯ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೌಡ, ಕಾಫಿ ಬೆಳೆಗೆ ಒಂದೆಡೆ ರೋಗ, ಮತ್ತೂಂದೆಡೆ ಬೆಲೆ ಏರಿಳಿತ. ಅಡಿಕೆಗೆ ಕೊಳೆರೋಗ, ಇನ್ನೊಂದೆಡೆ ಬೆಲೆ ಕುಸಿತ ಸಮಸ್ಯೆ ಕಾಡುತ್ತಿದೆ. ತೆಂಗು ಮತ್ತು ಭತ್ತದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ತಿಳಿಸಿದ್ದಾರೆ.[ಅಡಿಕೆ ಧಾರಣೆ ಕುಸಿತಕ್ಕೆ ಸಾರ್ಕ್‌ ಒಕ್ಕೂಟ ಕಾರಣ ಅಂದ್ರೆ ನಂಬ್ತೀರಾ?]

Sadananda Gowda promises to address arecanut price crash

ಗುಟ್ಕಾ ನಿಷೇಧ ಗುಮ್ಮ
ಮತ್ತೊಮ್ಮೆ ಗುಟ್ಕಾ ನಿಷೇಧದ ಆತಂಕ ಅಡಿಕೆ ಬೆಳೆಗಾರರಿಗೆ ಎದುರಾಗಿದೆ. ಇದನ್ನು ನಿರ್ವಹಿಸಲು ಮತ್ತು ಪರ್ಯಾಯ ಕ್ರಮಗಳ ಕುರಿತು ಚರ್ಚೆ ಮಾಡಲು ಎಲ್ಲಮ ರಾಜ್ಯದ ಎಲ್ಲ ಸಂಸದರೊಂದಿಗೆ ಚರ್ಚೆ ಮಾಡುತ್ತೇನೆ. ಯಾವ ಸಮಸ್ಯೆ ಎದುರಾದರೂ ಬೆಳೆಗಾರರ ಮೇಲೆ ಕೆಟ್ಟ ಪರಿಣಾಮ ಬೀರದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.[ಅರೇಕಾ ಟೀ ಮಾರುಕಟ್ಟೆಗೆ, ನೀವು ಸ್ವಾದ ನೀಡಿದ್ರಾ!]

ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಚಿತ್ರದುರ್ಗ, ತುಮಕೂರು ಸೇರಿದಂತೆ ಅಡಿಕೆ ಮತ್ತು ತೆಂಗು ಬೆಳೆಯುವ ಪ್ರದೇಶದ ಜನರು ಬೆಲೆ ಕುಸಿತದ ಆತಂಕಕ್ಕೆ ಸಿಲುಕಿದ್ದಾರೆ. ರಾಜ್ಯದ ಸಂಸದರು ಬೆಂಬಲ ಬೆಲೆಗೆ ಮನವಿ ಮಾಡಿದ್ದರೂ ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ ಯಾವ ಪ್ರಕಾರದ ಸ್ಪಂದನೆಯೂ ದೊರೆತಿಲ್ಲ. ಇದೀಗ ಖುದ್ದು ಕಾನೂನು ಸಚಿವರೇ ಅಭಯ ನೀಡಿರುವುದು ಬೆಳೆಗಾರರಲ್ಲಿ ಆತ್ಮ ಸ್ಥೈರ್ಯ ಹೆಚ್ಚಳ ಮಾಡಿದೆ.

English summary
Union Law Minister D VSadananda Gowda promised that he will speak with Union Commerce Minister Nirmala Sitharaman regarding arecanut, coffee and coconut price fall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X