ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯು ಪೂರಕ ಪರೀಕ್ಷೆ ವೇಳಾಪಟ್ಟಿ ಬದಲಾವಣೆ ಇಲ್ಲ

By Madhusoodhan
|
Google Oneindia Kannada News

ಬೆಂಗಳೂರು, ಜೂನ್. 16: ಪಿಯು ಪೂರಕ ಪರೀಕ್ಷೆ ಮುಂದಕ್ಕೆ ಹಾಕಲು ಕ್ರಿಶ್ಚಿಯನ್ ಸಮುದಾಯದವರು ಸಲ್ಲಿಕೆ ಮಾಡಿದ್ದ ಮನವಿಯನ್ನು ಹೈಕೋರ್ಟ್ ವಜಾ ಮಾಡಿದೆ.

ಪ್ರೊಟೆಸ್ಟೆಂಟ್‌ ಕ್ರೈಸ್ತರು ಜುಲೈ 2 ಮತ್ತು 9ರಂದು ಸಬ್ಬತ್‌ ದಿನ ಆಚರಿಸುತ್ತಿರುವ ಕಾರಣ ಅಂದು ನಿಗದಿಯಾಗಿರುವ ದ್ವಿತೀಯ ಪಿಯುಸಿ ಅರ್ಥಶಾಸ್ತ್ರ ಮತ್ತು ಇತಿಹಾಸ ಪೂರಕ ಪರೀಕ್ಷೆ ಮುಂದಕ್ಕೆ ಹಾಕಬೇಕು ಎಂದು ಮನವಿ ಮಾಡಿಕೊಳ್ಳಲಾಗಿತ್ತು.[2ನೇ ಪಿಯುಸಿ ಫಲಿತಾಂಶ: ಯಾವ ಜಿಲ್ಲೆ ಯಾವ ಸ್ಥಾನ?]

high court

ಸಬ್ಬತ್ ಆಚರಣೆ ಶ್ರಮಿಕರಿಗೆ ಮೀಸಲಾಗಿದೆ. ಅದು ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ. ವಾರದ ಆರು ದಿನ ಕೆಲಸ ಮಾಡುವವರು ಎಳನೇ ದಿನ ರಜೆ ಪಡೆದುಕೊಳ್ಳುವ ಸಂಪ್ರದಾಯವನ್ನು ವಿದ್ಯಾರ್ಥಿಗಳಿಗೆ ಹೇರಬೇಕಾದ ಅಥವಾ ವಿದ್ಯಾರ್ಥಿಗಳು ಅನುಸರಣೆ ಮಾಡಬೇಕಾದ ಅಗತ್ಯ ಇಲ್ಲ ಎಂದು ನ್ಯಾಯಾಲಯ ಹೇಳಿದೆ.[ಬಾಳೆಹಣ್ಣು ವ್ಯಾಪಾರಿ ಮಗಳು ರಾಜ್ಯಕ್ಕೆ ಪ್ರಥಮ]

ಸೆವೆಂತ್‌ ಡೇ ಆಫ್ ಅಡ್ವೆಂಟಿಸ್ಟ್‌ ಕ್ರೈಸ್ತರನ್ನು ಪ್ರತಿನಿಧಿಸುವ ಸೌತ್‌ ಸೆಂಟ್ರಲ್‌ ಇಂಡಿಯಾ ಯೂನಿಯನ್‌ ಆಫ್ ಕ್ರಿಶ್ಚಿಯನ್ಸ್‌ ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಅರವಿಂದ ಕುಮಾರ್‌ ಅವರ ಏಕಸದಸಯ ಪೀಠ ಬುಧವಾರ ವಜಾ ಮಾಡಿತು.[ಪಿಯು ಪ್ರಶ್ನೆ ಪ್ರತ್ರಿಕೆ ಸೋರಿಕೆಯಾಗಿದ್ದು ಹಾವೇರಿಯಲ್ಲಿ]

ದ್ವೀತಿಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ
* ಜುಲೈ 1 : ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಭೌತಶಾಸ್ತ್ರ
* ಜುಲೈ 2: ಅರ್ಥಶಾಶ್ತ್ರ, ಗಣಿತ
* ಜುಲೈ 4: ಇಂಗ್ಲಿಷ್
* ಜುಲೈ 5: ಬಿಸಿನೆಸ್ ಸ್ಟಡೀಸ್, ರಸಾಯನಶಾಸ್ತ್ರ, ಶಿಕ್ಷಣ
* ಜುಲೈ 7: ಕನ್ನಡ, ತಮಿಳು, ತೆಲುಗು, ಮಲಯಾಳಂ, ಫ್ರೆಂಚ್
* ಜುಲೈ 8: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಜೀವಶಾಶ್ತ್ರ
* ಜುಲೈ 9: ಇತಿಹಾಸ, ಇಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
*ಜುಲೈ 11: ಭೂಗೋಳಶಾಶ್ತ್ರ, ಭೂಗರ್ಭಶಾಸ್ತ್ರ, ಬೇಸಿಕ್ ಮ್ಯಾಥ್ಸ್
* ಜುಲೈ 12: ಹಿಂದಿ, ಸಂಸ್ಕೃತ
* ಜುಲೈ 13: ಐಚ್ಛಿಕ ಕನ್ನಡ

English summary
The Karnataka High Court on Wednesday dismissed a petition that sought the re-scheduling of II PU supplementary exams as two exams fell on Sabbath day, considered to be a day of rest by some communities. Justice Arvind Kumar ruled that a week can begin on any day, and the seventh day can be any day, not necessarily a Saturday. Here is the 2nd PUC supplementary Examination time table.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X