ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ನಾಯಕರು ಗರಂ; ಸರಣಿ ಟ್ವೀಟ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20: ಜೆಡಿಎಸ್ ನಾಯಕರು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಸಿದ್ದರಾಯ್ಯ ಮಾಡಿದ್ದ ಟ್ವೀಟ್‌ಗಳಿಗೆ ತಿರುಗೇಟುಗಳನ್ನು ನೀಡುತ್ತಿದ್ದಾರೆ.

ಭಾನುವಾರ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಮಾಜಿ ಸಚಿವ ಸಾ. ರಾ. ಮಹೇಶ್ ಸಿದ್ದರಾಮಯ್ಯ ವಿರುದ್ಧ ಟ್ವೀಟ್‌ಗಳನ್ನು ಮಾಡಿದ್ದಾರೆ. "ಸೈದ್ಧಾಂತಿಕ ಬದ್ಧತೆಯಿಲ್ಲದ ಅಧಿಕಾರದಾಹಿಗಳ ಅಗತ್ಯ ನಮ್ಮ ಪಕ್ಷಕ್ಕಿಲ್ಲ. ಅಂಥವರಿಂದ ಕಾಂಗ್ರೆಸ್ ದೂರವಿರಲಿದೆ" ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಎಂತಹ ಸ್ವಾರ್ಥಿ, ಎಡಬಿಡಂಗಿ ರಾಜಕಾರಣಿ ಎಂದು ಇಡೀ ನಾಡಿಗೆ ಗೊತ್ತಿದೆ ಸಿದ್ದರಾಮಯ್ಯ ಎಂತಹ ಸ್ವಾರ್ಥಿ, ಎಡಬಿಡಂಗಿ ರಾಜಕಾರಣಿ ಎಂದು ಇಡೀ ನಾಡಿಗೆ ಗೊತ್ತಿದೆ

"ತಾವು ಬೆಳೆದು ಬಂದ ಪಕ್ಷಕ್ಕೆ ದ್ರೋಹ ಬಗೆದ, ಹತ್ತಿದ ಏಣಿಯನ್ನು ಒದೆಯುವ ಜಾಯಮಾನದ ಸಿದ್ದರಾಮಯ್ಯ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ" ಎಂದು ಸಾ. ರಾ. ಮಹೇಶ್ ಟ್ವೀಟ್ ಮಾಡಿದ್ದಾರೆ.

ಮೋದಿಗೆ ಖಡಕ್ ಆಗಿ ಇದನ್ನು ಕೇಳಿ; ಬಿಎಸ್‌ವೈಗೆ ಸಿದ್ದರಾಮಯ್ಯ ಸಲಹೆ ಮೋದಿಗೆ ಖಡಕ್ ಆಗಿ ಇದನ್ನು ಕೇಳಿ; ಬಿಎಸ್‌ವೈಗೆ ಸಿದ್ದರಾಮಯ್ಯ ಸಲಹೆ

ಜೆಡಿಎಸ್ ವಕ್ತಾರರಾಗಿದ್ದ ರಮೇಶ್ ಬಾಬು ಶನಿವಾರ ಕಾಂಗ್ರೆಸ್ ಸೇರಿದ್ದದರು. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಅವರು ರಮೇಶ್ ಬಾಬು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದರು. ಈ ಬೆಳವಣಿಗೆ ಬಳಿಕ ಎರಡೂ ಪಕ್ಷಗಳ ನಾಯಕರ ನಡುವೆ ವಾಕ್ಸಮರ ನಡೆಯುತ್ತಿದೆ.

ಉದ್ಯೋಗ ನೀಡುವ ಭರವಸೆ; ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ ಉದ್ಯೋಗ ನೀಡುವ ಭರವಸೆ; ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ

ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ

"ಅಧಿಕಾರದ ಆಸೆಗಾಗಿ ಪಕ್ಷಾಂತರ ಮಾಡಿ ಸಮಾಜವಾದದ ಸೋಗನ್ನು ಕಳಚಿಕೊಂಡ ಸಿದ್ದರಾಮಯ್ಯನವರು ಹುಸಿ ಸ್ವಾಭಿಮಾನದ ಕಾಗೆ ಬಂಗಾರ. ಸ್ವಾರ್ಥ ರಾಜಕಾರಣಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿ ಸನ್ಯಾಸಿ ಆದವರಂತೆ ಮಾತನಾಡುತ್ತಿರುವ ಸಿದ್ದರಾಮಯ್ಯ ನಮ್ಮ ಪಕ್ಷದ ಬಗ್ಗೆ ಮಾತನಾಡುವ ಕನಿಷ್ಠ ನೈತಿಕತೆಯೂ ಇಲ್ಲ" ಎಂದು ಸಾ. ರಾ. ಮಹೇಶ್ ಟ್ವೀಟ್ ಮಾಡಿದ್ದಾರೆ.

ಆತ್ಮಾವಲೋಕನ ಮಾಡಿಕೊಳ್ಳಿ

"ಹತ್ತಿದ ಏಣಿಯನ್ನು ಒದೆಯುವ ಜಾಯಮಾನದ ಸಿದ್ದರಾಮಯ್ಯ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ" ಎಂದು ಸಾ. ರಾ. ಮಹೇಶ್ ಟ್ವೀಟ್ ಮಾಡಿದ್ದಾರೆ.

ಎಚ್. ಡಿ. ಕುಮಾರಸ್ವಾಮಿ ವಾಗ್ದಾಳಿ

ಎಚ್. ಡಿ. ಕುಮಾರಸ್ವಾಮಿ ವಾಗ್ದಾಳಿ

ಎಚ್. ಡಿ. ಕುಮಾರಸ್ವಾಮಿ ಅವರು ಸಹ ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಮಾಡಿದ್ದರು. "ಅಧಿಕಾರದ ಲಾಲಸೆಯಿಂದ ಕಾಂಗ್ರೆಸ್‌ಗೆ ಜಿಗಿದ ಸಿದ್ದರಾಮಯ್ಯ ಅವರು 'ಜೆಡಿಎಸ್ ಅವಕಾಶವಾದಿ ಪಕ್ಷ' ಎನ್ನುವ ಮೂಲಕ ತಮ್ಮ ಊಸರವಳ್ಳಿ ರಾಜಕಾರಣದ ನಿಜಬಣ್ಣ ಬಯಲು ಮಾಡಿಕೊಂಡಿದ್ದಾರೆ" ಎಂದು ಟೀಕಿಸಿದ್ದರು.

Recommended Video

IPL 2020 DC VS KXIP : ಪಂದ್ಯದ ಬಳಿಕ Mayank Agarwal ಮಾಧ್ಯಮದವರ ಮುಂದೆ ಹೇಳಿದ್ದೇನು | Oneindia Kannada

ಸಿದ್ದರಾಮಯ್ಯ ಮಾಡಿದ್ದೇನು?

ಸಿದ್ದರಾಮಯ್ಯ ಅವರು "ನಾವಾಗಿಯೇ ಯಾರನ್ನು ನಮ್ಮ ಪಕ್ಷಕ್ಕೆ ಬನ್ನಿ ಎಂದು ಕೈಹಿಡಿದು ಎಳೆದುಕೊಂಡು ಬರೋದಿಲ್ಲ. ನಮ್ಮ ಪಕ್ಷದ ಸಿದ್ಧಾಂತಗಳನ್ನು, ಪಕ್ಷದ ನಾಯಕತ್ವವನ್ನು ಒಪ್ಪಿ ಬರುವವರಿಗೆ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ" ಎಂದು ಟ್ವೀಟ್ ಮಾಡಿದ್ದರು.

English summary
K. R. Nagar MLA and Janata Dal (Secular) leader Sa Ra Mahesh tweet against Karnataka former CM Siddaramaiah. For power Siddaramaiah changed the party alleged JD(S) leader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X