ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಕೇಳಲಿಲ್ಲ, ನಾನೂ ಹೇಳಲಿಲ್ಲ: ಎಸ್.ಟಿ. ಸೋಮಶೇಖರ್

|
Google Oneindia Kannada News

ಬೆಂಗಳೂರು, ಫೆ. 10: ಖಾತೆ ಹಂಚಿಕೆ ಬಗ್ಗೆ ನೂತನ ಸಚಿವರಾದ ಎಸ್ ಟಿ ಸೋಮಶೇಖರ್ ಹಾಗೂ ಬೈರತಿ ಬಸವರಾಜ್ ಸಂತಸ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಇಬ್ಬರೂ ಸಚಿವರು ಖಾತೆ ಹಂಚಿಕೆ ಕುರಿತು ತಮ್ಮ ಅಭಿಪ್ರಾಯ ಕೊಟ್ಟಿದ್ದಾರೆ.

ಖಾತೆ ಹಂಚಿಕೆ ಬಗ್ಗೆ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದು:
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಬೇಕಾ ಎಂದು ಕೇಳಿದ್ದರೆ, ನಾನು ಹೇಳುತ್ತಿದ್ದೆ, ಅವರು ಕೇಳಲಿಲ್ಲ, ನಾನೂ ಹೇಳಲಿಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಖಾತೆ ಹಂಚಿಕೆ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ವಿಧಾನಸೌದಲ್ಲಿ ಮಾತನಾಡಿ ಸಹಕಾರ ಇಲಾಖೆ ಖಾತೆ ಕೊಟ್ಟಿರುವ ಕುರಿತು ಸೋಮಶೇಖರ್ ಅವರು ಹೇಳಿಕೆ ಕೊಟ್ಟಿದ್ದಾರೆ. ಸಹಕಾರ ಖಾತೆ ಸಿಕ್ಕಿದ್ದು ಸಂತೋಷ ತಂದಿದೆ. ಮೊದಲ ಬಾರಿಗೆ ಸಹಕಾರ ವಲಯದ ಸಚಿವನಾಗುವ ಅವಕಾಶ ಸಿಕ್ಕಿದೆ.

S T Somasekhar said he was happy to have a co-operative department

ಕ್ಷೇತ್ರದ ಜನತೆ ಮತ್ತು ಸಹಕಾರಿ ವಲಯದ ಪರವಾಗಿ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ. ಇಂಥದ್ದೇ ಖಾತೆ ಬೇಕು ಅಂತ ನಾನು ಕೇಳಿರಲಿಲ್ಲ. ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಹೇಳಿದ್ದೆ. ಸಿಎಂ ಯಡಿಯೂರಪ್ಪ ಅವರು, ಸಹಕಾರ ಖಾತೆ ಕೊಟ್ಟಿದ್ದಾರೆ. ಈ ವಲಯದಲ್ಲಿ ನನಗೆ ಅನುಭವ ಇದೆ, ನಿಭಾಯಿಸುತ್ತೇನೆ ಎಂದಿದ್ದಾರೆ.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಹೇಳಿಕೆ:

ನಗರಾಭಿವೃದ್ಧಿ ಇಲಾಖೆ ಸಿಕ್ಕ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಮಾತನಾಡಿರುವ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರು, ನನಗೆ ನಗರಾಭಿವೃದ್ಧಿ‌ ಇಲಾಖೆ ಕೊಟ್ಟಿದ್ದಾರೆ.

S T Somasekhar said he was happy to have a co-operative department

ಇದು ದೊಡ್ಡ ಖಾತೆ, ಪ್ರಾಮಾಣಿಕವಾಗಿ, ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತೇನೆ. ನಾನು ಇದೇ ಖಾತೆ ಬೇಕು ಎಂದು ಒತ್ತಡ ಹಾಕಿರಲಿಲ್ಲ. ಕೆಲವೊಂದು ಕಾರಣಗಳಿಗೆ ಖಾತೆ ಹಂಚಿಕೆ ವಿಳಂಬವಾಗಿದೆ ಅಷ್ಟೇ ಎಂದಿದ್ದಾರೆ.

ಒಂದು‌ ಮನೆ ಅಂದ್ರೆ ಸಣ್ಣಪುಟ್ಟದವೆಲ್ಲ‌ ಇರುತ್ತವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ‌ ಬಸವರಾಜು ಹೇಳಿಕೆ ಕೊಟ್ಟಿದ್ದಾರೆ.

English summary
Co operative minister S T Somasekhar said he was happy to have a co-operative department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X