ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓ ದೇವರೇ! ಸಿದ್ದರಾಮಯ್ಯ ಕಾಲೆಳೆದ ಸುರೇಶ್‌ ಕುಮಾರ್‌ಗೆ ಟ್ವಿಟ್ಟಿಗರ ತರಾಟೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 24: ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಚಿವ ಎಸ್ ಸುರೇಶ್ ಕುಮಾರ್ ಟಾಂಗ್ ನೀಡಿದ್ದಾರೆ.

'ಓ ದೇವರೇ! ರಾಜ್ಯದ ಪ್ರತಿಪಕ್ಷದ ನಾಯಕರು ವಿಧಾನಸಭೆಯ ಅಧಿವೇಶನದ ಸಮಯದಲ್ಲಿ ಸದನದಲ್ಲಿಯಾದರೂ ಮಾನ್ಯ ಸಭಾಧ್ಯಕ್ಷರನ್ನು ಏಕವಚನದಲ್ಲಿ ಸಂಬೋಧಿಸದಂತೆ ಬುದ್ದಿ ಕೊಡು' ಎಂದು ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

Recommended Video

Suresh Angadi praises BSY at Belagavi | Oneindia Kannada

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, 'ಅವನ್ಯಾರೋ ಒಬ್ಬ ಪುಣ್ಯಾತ್ಮನನ್ನು ಸ್ಪೀಕರ್ ಮಾಡಿಬಿಟ್ಟಿದ್ದಾರೆ. ಅವನು ಹೊಸಬ, ಏನೂ ಗೊತ್ತಿಲ್ಲ. ವಿರೋಧಪಕ್ಷದ ನಾಯಕ ಜಾಸ್ತಿ ಮಾತನಾಡುವಂತಿಲ್ಲ. ಕುಳಿತುಕೊಳ್ರೀ ಅಂತಾನೆ. ರಾಜ್ಯದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೀಡಾದವರ ಸ್ಥಿತಿಗತಿ ಮಾತನಾಡಲು ಬಿಡುತ್ತಿಲ್ಲ' ಎಂದು ಕಾಗೇರಿ ಹೆಸರು ಪ್ರಸ್ತಾಪಿಸದೆ ಹೇಳಿದ್ದರು.

ಅವರನ್ನು ಕ್ಷಮಿಸಿಬಿಡು ತಂದೆಯೇ; ಸಿದ್ದರಾಮಯ್ಯ ಟ್ವೀಟ್ಅವರನ್ನು ಕ್ಷಮಿಸಿಬಿಡು ತಂದೆಯೇ; ಸಿದ್ದರಾಮಯ್ಯ ಟ್ವೀಟ್

ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಅವರಂತಹವರು ಈ ಭೂಮಿ ಮೇಲೆ ಇರಬಾರದು ಎಂದು ಸಚಿವ ಶ್ರೀರಾಮುಲು ಹೇಳಿದ್ದರು.

ಅವರನ್ನು ಕ್ಷಮಿಸಿಬಿಡು ತಂದೆಯೇ

'ಸಿದ್ದರಾಮಯ್ಯ ಭೂಮಿ‌ ಮೇಲೆ ಇರಬಾರದು' ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ತನ್ನ ಸಾವು ಬಯಸಿದವರಿಗೆ ಏಸುಕ್ರಿಸ್ತ ಹೇಳಿದ್ದನ್ನೇ ಶ್ರೀರಾಮುಲು ಅವರಿಗೆ ಹೇಳುವೆ: "ಅವರನ್ನು ಕ್ಷಮಿಸಿಬಿಡು ತಂದೆಯೇ, ಅವರೇನು ಮಾಡುತ್ತಿದ್ದಾರೆ ಎನ್ನುವುದು ಅವರಿಗೆ ತಿಳಿದಿಲ್ಲ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಸಿದ್ದರಾಮಯ್ಯ ಮಾಡಿದ್ದ ಟ್ವೀಟ್‌ಗೆ ಮತ್ತು ಅವರ ಏಕವಚನದ ಸಂಬೋಧನೆಗೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿರುವ ಸುರೇಶ್ ಕುಮಾರ್, ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸದೆ ದೇವರೇ ಅವರಿಗೆ ಬುದ್ದಿ ನೀಡು ಎಂದು ಹೇಳಿದ್ದಾರೆ. ಸುರೇಶ್ ಕುಮಾರ್ ಅವರ ಟ್ವೀಟ್‌ಗೆ ತೀಕ್ಷ್ಣವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಸಚಿವ ಸಿ. ಟಿ. ರವಿಗೆ ಕನ್ನಡ ಪಾಠ ಮಾಡಿದ ಸಿದ್ದರಾಮಯ್ಯಸಚಿವ ಸಿ. ಟಿ. ರವಿಗೆ ಕನ್ನಡ ಪಾಠ ಮಾಡಿದ ಸಿದ್ದರಾಮಯ್ಯ

ವಿದ್ಯಾರ್ಥಿಗಳು ಪರದಾಡುವಂತಾಗಿದೆ

ಓ ದೇವರೇ!!, ಎಷ್ಟೋ ಹಳ್ಳಿಗಳ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಇಲ್ಲದೆ ಸರಿಯಾದ ಕೊಠಡಿಗಳು ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ದಯವಿಟ್ಟು ನಮ್ಮ ಸಚಿವರು ಹಾಗೂ ಅದಕ್ಕೆ ಸಂಬಂದಿಸಿದವರಿಗೆ ಬುದ್ದಿ ಕೊಡು ದೇವರೇ- ರಮೇಶ ಬಿಕೆ

ಮಂತ್ರಿಗಳು ವರ ಕೊಡುವಂತೆ ಬುದ್ದಿಕೊಡು

ಓ ದೇವರೇ, 2 ವರ್ಷದ ನಂತರ KPSC ವರ ಕೊಟ್ಟರೂ, ಲಿಸ್ಟ್ ಬಿಟ್ಟು 6 ತಿಂಗಳಾದರೂ KREIS ನ ಅಧಿಕಾರಿಗಳು ಮತ್ತು ಇಲಾಖೆಗೆ ಸಂಬಂಧಪಟ್ಟ ಮಂತ್ರಿಗಳು ವರ ಕೊಡುವಂತೆ ಬುದ್ಧಿ ಕೊಡು- ಸಿದ್ದು ಎನ್.

ಸಿದ್ದರಾಮಯ್ಯ ಕಾನೂನು ಓದಿದ್ದೂ ನಾಲಾಯಕ್; ಸಿ.ಟಿ. ರವಿ ಮತ್ತೆ ತಿರುಗೇಟುಸಿದ್ದರಾಮಯ್ಯ ಕಾನೂನು ಓದಿದ್ದೂ ನಾಲಾಯಕ್; ಸಿ.ಟಿ. ರವಿ ಮತ್ತೆ ತಿರುಗೇಟು

ಕಾಯಂ ಮಾಡಿ

ಓ ದೇವರೇ! ರಾಜ್ಯ ಶಿಕ್ಷಣ ಇಲಾಖೆಯಲ್ಲಿ 71,000 ಕಾಯಂ ಬೋಧಕರೇ ಇಲ್ಲದೆ ಇರುವಾಗ ಹೇಗೆ ಗುಣಮಟ್ಟ ಶಿಕ್ಷಣ ನೀಡಲಾಗುತ್ತಿದೆ? ಕಾಯಂ ಬೋಧಕರ ಬದಲಾಗಿ ಅತಿಥಿ ಶಿಕ್ಷಕರ/ಉಪನ್ಯಾಸಕ ಗಳಿಗೆ ನೇಮಕಾತಿ ಮಾಡಿಕೊಂಡು ಕನಿಷ್ಠ ವೇತನ ಸೇವಾ ಭದ್ರತೆ/ಕಾಯಂ ಮಾಡದೆ ಅತ್ಯಂತ ಕೀಳಾಗಿ ದುಡಿಸಿಕೊಂಡು ಇವರಿಂದ ಗುಣಮಟ್ಟ ಶಿಕ್ಷಣ ನೀಡಲಾಗುತ್ತಿದೆ. ಇದನ್ನು ಸರಿಪಡಿಸು- ಮಹಾಂತೇಶ್

ಮೋದಿ ಎದುರು ಮಾತಾಡೋ ಶಕ್ತಿ ಕೊಡು

ಓ ದೇವರೇ, ಇನ್ನು ಮೇಲಾದರೂ ಕರ್ನಾಟಕ ಬಿಜಿಪಿಗರು ಮೋದಿ ಮುಂದೆ ನಿಂತು ಮಾತಾಡೋ ಶಕ್ತಿ ಕೊಡು ತಂದೆ. ಕೈಕಟ್ಟಿಕೊಂಡು ನಿಲ್ಲುವ ಪರಿಸ್ಥಿತಿ ಆದರೂ ತಪ್ಪಲಿ- ದಿನೇಶ್ ಕುಮಾರ್

ಮೋದಿಗೆ ಕಾಣುವಂತೆ ಮಾಡು

ಓ ದೇವರೇ, ಈ ಬಾರಿಯಾದರೂ ನಮ್ಮ ದೇಶದ ಪ್ರಧಾನ ಸೇವಕರಿಗೆ ವಿದೇಶದಲ್ಲಿರುವ ಸಿರಿವಂತ NRI ಗಳ ಮಧ್ಯೆ ನಮ್ಮ ರಾಜ್ಯದ ನೆರೆ ಪೀಡಿತರು ಕಾಣುವಂತೆ ಮಾಡು.‌ ಈ ಬಾರಿಯಾದರೂ ನೆರೆಪೀಡಿತರಿಗೆ ದಯೆ ತೋರಿಸು ದೇವರೇ- ಗಂಗಾಧರ್

English summary
People slams Minister S Suresh Kumar in twitter after he trolled Congress leader Siddaramaiah for using sigulair for assembly speaker Vishweshwar Hegde Kageri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X