ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಲಿತ ನಾಯಕ ಅರಕೇರಿ ಅವರಿಗೆ ಅಂಬೇಡ್ಕರ್ ಪ್ರಶಸ್ತಿ

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 15: ದಲಿತ ಸಮುದಾಯದ ಸಮಗ್ರ ಅಭಿವೃದ್ಧಿಗೆ ಹಾಗೂ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳನ್ನು ನಾಡಿಗೆ ಪರಿಚಯಿಸುವಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿರುವ ಮಾಜಿ ಡಾ: ಎಸ್.ಎಸ್. ಅರಕೇರಿ ಅವರಿಗೆ ಡಾ. ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಬುದ್ಧ, ಬಸವ ಹಾಗೂ ಡಾ: ಅಂಬೇಡ್ಕರ್ ತತ್ವರಾದಕರಾದ ಡಾ: ಎಸ್.ಎಸ್. ಅರಕೇರಿ ಅವರನ್ನು ಡಾ. ಅಂಬೇಡ್ಕರ್ ಅವರ 124 ನೇ ಜಯಂತೋತ್ಸವದ ಪ್ರಶಸ್ತಿಗಾಗಿ ಡಾ: ಸಿದ್ದಲಿಂಗಯ್ಯ ನೇತೃತ್ವದ ಸಮಿತಿ ಸರ್ವಾನುಮತದಿಂದ ಆಯ್ಕೆ ಮಾಡಿತ್ತು. ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಡಾ. ಎಸ್ .ಎಸ್ ಅರಕೇರಿ ಅವರಿಗೆ ಪ್ರಶಸ್ತಿ ಫಲಕ, ನೀಡಿ ಶಾಲು ಹೊದೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನಿಸಿದರು. [ಬಾಬಾಸಾಹೇಬ್ ಗೆ ಗೂಗಲ್ ನಮನ]

S.S. Arakeri, ex-MLA, gets Ambedkar Award,

ಡಾ. ಸಿದ್ದಲಿಂಗಯ್ಯ ಅವರು ಆಯ್ಕೆ ಸಮಿತಿಯ ಮುಂದೆ ಸುಮಾರು 51 ಅರ್ಜಿಗಳು ಬಂದಿತ್ತು. ಆಯ್ಕೆಗಾಗಿ ಎರಡು ಸಭೆಗಳಲ್ಲಿ ಸದಸ್ಯರ ಸರ್ವಾನುಮತದ ಅಭಿಪ್ರಾಯದಂತೆ ಅರಕೇರಿ ಅವರನ್ನು ಆಯ್ಕೆ ಮಾಡಲಾಯಿತು ಎಂದು ಸಿದ್ದಲಿಂಗಯ್ಯ ಹೇಳಿದ್ದಾರೆ.

ಆಯ್ಕೆ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆದಿದ್ದು ಸರ್ಕಾರದಿಂದ ಯಾವುದೇ ರೀತಿಯ ಒತ್ತಡಗಳು ಅಥವಾ ಹಸ್ತಕ್ಷೇಪ ಇರಲಿಲ್ಲ. ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಅವರು ಅರಕೇರಿ ಅವರು ಅಂಬೇಡ್ಕರ್ ಅನುಯಾಯಿಗಳು ಅವರ ಜೊತೆಯಲ್ಲೇ ಇದ್ದು ಅವರ ಹೋರಾಟದಲ್ಲಿ ಪಾಲ್ಗೊಂಡು ಶೋಷಿತರ ದನಿಯಾಗಿ ಕೆಲಸ ಮಾಡಿದ್ದಾರೆ ಎಂದರು.

S.S. Arakeri, ex-MLA, gets Ambedkar Award,

ಈ ಸಾಲಿನಿಂದ ಒಬ್ಬರಿಗೆ ಮಾತ್ರ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಪ್ರಶಸ್ತಿ ಮೊತ್ತವು 5.00 ಲಕ್ಷ ರೂ. ಗಳಾಗಿದ್ದು ಬಂಗಾರದ ಪದಕವನ್ನು ಕೂಡ ನೀಡಿ ಗೌರವಿಸಲಾಗುತ್ತಿದೆ.

ಆಯ್ಕೆ ಸಮಿತಿಯ ಸದಸ್ಯರಾದ ಲಕ್ಷ್ಮೀನಾರಾಯಣ ನಾಗವಾರ, ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಾದ ಮಂಜುನಾಥ ಪ್ರಸಾದ್, ಆಯುಕ್ತರಾದ ಶ್ರೀಮತಿ ಸಾವಿತ್ರಿ ಹಾಗೂ ಇತರೆ ಅಧಿಕಾರಿಗಳು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

English summary
Former MLA S.S. Arakeri has been awarded and felicitated with prestigious Dr. B.R. Ambedkar Award in an event held at Vidhana Soudha. This award instituted by the Karnataka government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X