ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾತೋರಾತ್ರಿ ಹಟ್ಟಿ ಎಟಿಎಂ ಯಂತ್ರದಿಂದ 22.70 ಲಕ್ಷ ರೂ. ಮಂಗಮಾಯ

By Sachhidananda Acharya
|
Google Oneindia Kannada News

ರಾಯಚೂರು, ಅಕ್ಟೋಬರ್ 9: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಎಟಿಎಂ ಯಂತ್ರದಿಂದ 22.70 ಲಕ್ಷ ರೂಪಾಯಿ ನಾಪತ್ತೆಯಾಗಿದೆ. ಈ ಘಟನೆ ಭಾನುವಾರ ರಾತ್ರಿ ಲಿಂಗಸುಗೂರು ತಾಲೂಕಿನ ಹಟ್ಟಿಯಲ್ಲಿ ನಡೆದಿದೆ.

ಈ ಕುರಿತು ಎಸ್ಬಿಐ ಮ್ಯಾನೇಜರ್ ಅಶೋಕ್ ದರೋಡೆ ಪ್ರಕರಣ ದಾಖಲಿಸಿದ್ದಾರೆ. 'ದರೋಡೆಕೋರರು ಕೃತ್ಯಕ್ಕೂ ಮುನ್ನ ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕ ತಪ್ಪಿಸಿದ್ದಾರೆ' ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

Rupees 22 .70 lakh stolen from ATM in Hatti, Raichur

ದರೋಡೆಯಾಗಿದ್ದರೂ ಎಟಿಎಂ ಯಂತ್ರಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಬ್ಯಾಂಕ್ ವ್ಯವಸ್ಥಾಪಕರು ಹೇಳಿದ್ದು ಅನುಮಾನಗಳನ್ನು ಹುಟ್ಟು ಹಾಕಿದೆ.

ಪ್ರಕರಣದ ತನಿಖೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶರಣಬಸಪ್ಪ ತನಿಖಾ ತಂಡವನ್ನು ರಚಿಸಿದ್ದಾರೆ.

ಒಟ್ಟು 40 ಲಕ್ಷವನ್ನು ಎಟಿಎಂ ಯಂತ್ರಕ್ಕೆ ಹಾಕಲಾಗಿತ್ತು. ಇದರಲ್ಲಿ 18 ಲಕ್ಷವನ್ನು ಗ್ರಾಹಕರು ಟ್ರಾ ಮಾಡಿದ್ದು ಘಟನೆ ನಡೆದಾಗ 22 ಲಕ್ಷ ಎಟಿಎಂ ಯಂತ್ರದಲ್ಲಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಸ್ಥಳಕ್ಕೆ ಶ್ವಾನದಳ, ಬೆರಳಚ್ಚುಗಾರರು ಬಂದು ಪರಿಶೀಲನೆ ನಡೆಸಿದ್ದಾರೆ.

English summary
Robbers allegedly stole Rupees 22.70 lakh from an ATM of State Bank of India at Hatti in Lingasugur taluk of Raichur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X