ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕ್ರಾಂತಿ, ಶಬರಿಮಲೆ ಯಾತ್ರೆ: ಬೆಂಗಳೂರು- ಬೆಳಗಾವಿ ಮಧ್ಯೆ ವಿಶೇಷ ರೈಲು

|
Google Oneindia Kannada News

ಬೆಂಗಳೂರು, ಜ.10: ಸಂಕ್ರಾಂತಿ ಹಾಗೂ ಶಬರಿಮಲೆ ಯಾತ್ರೆ ಪ್ರಯುಕ್ತ ಬೆಂಗಳೂರಿನಿಂದ ಬೆಳಗಾವಿಗೆ ಒಂದು ಬಾರಿಯ ವಿಶೇಷ ರೈಲು ಸಂಚಾರ ಆರಂಭಿಸಲಾಗಿದೆ.

ಹಬ್ಬದ ಜನದಟ್ಟಣೆ ಹೆಚ್ಚಾಗಿ ಇರುವುದರಿಂದ ಯಶವಂತಪುರ- ಬೆಳಗಾವಿ- ಯಶವಂತಪುರ (06597-06598) ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ.

ಯಶವಂತಪುರ ನಿಲ್ದಾಣದಿಂದ ಜ.13ರಂದು ರಾತ್ರಿ 9.30 (ರೈಲು ಸಂಖ್ಯೆ 06597) ಹೊರಡುವ ರೈಲು ಮರುದಿನ 8.25ಕ್ಕೆ ಬೆಳಗಾವಿ ನಿಲ್ದಾಣ ತಲುಪುತ್ತದೆ. ಮರಳಿ ಜ.16ರಂದು ರಾತ್ರಿ 9.20ಕ್ಕೆ (ರೈಲು ಸಂಖ್ಯೆ 06598) ಹೊರಟು ಮರುದಿನ ಬೆಳಗ್ಗೆ 8.30ಕ್ಕೆ ಯಶವಂತಪುರ ನಿಲ್ದಾಣ ತಲುಪುತ್ತದೆ.

Running of Festival special trains to Yesvantpur- Belagavi

ಈ ರೈಲು ಯಶವಂತಪುರ, ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ ಮಾರ್ಗವಾಗಿ ಬೆಳಗಾವಿ ತಲುಪುತ್ತದೆ. ಇದೇ ಮಾರ್ಗವಾಗಿ ಬೆಂಗಳೂರಿಗೆ ಮರಳುತ್ತದೆ.

ವಿಶೇಷ ರೈಲಿನಲ್ಲಿ ಎರಡು ಎಸಿ ತ್ರೀ ಟೈರ್ ಬೋಗಿ, ಎಂಟು ಸ್ಲೀಪರ್ ದರ್ಜೆ ಬೋಗಿ, ನಾಲ್ಕು ಸಾಮಾನ್ಯ ಎರಡನೇ ದರ್ಜೆ ಬೋಗಿಗಳ ಇರಲಿವೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಹುಬ್ಬಳ್ಳಿ- ವಿಜಯಪುರ ಮಧ್ಯೆ ಇಂಟರ್‌ಸಿಟಿ ರೈಲು:

ಎಸ್‌.ಎಸ್‌.ಎಸ್‌. ಹುಬ್ಬಳ್ಳಿ- ವಿಜಯಪುರ- ಎಸ್‌.ಎಸ್‌.ಎಸ್‌. ಹುಬ್ಬಳ್ಳಿ ನಡುವಿನ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಸಂಚಾರ ಜ.11ರಿಂದ ಆರಂಭವಾಗಲಿದೆ.

ಎರಡು ನಗರಗಳ ಮಧ್ಯೆ ರೈಲು (07329-07330) ನಿತ್ಯ ಸಂಚಾರ ಮಾಡುತ್ತದೆ. ಹುಬ್ಬಳ್ಳಿಯಿಂದ ಜ.11ರಿಂದ ಮತ್ತು ವಿಜಯಪುರದಿಂದ ಜ.12ರಿಂದ ರೈಲು ಸಂಚಾರ ಪುರನರಾರಂಭವಾಗಲಿದೆ.

ಎಸ್‌.ಎಸ್‌.ಎಸ್‌. ಹುಬ್ಬಳ್ಳಿ ನಿಲ್ದಾಣದಿಂದ ರೈಲು (ಸಂಖ್ಯೆ: 07329) ಪ್ರತಿದಿನ ಸಂಜೆ 4.45ಕ್ಕೆ ಹೊರಡುತ್ತದೆ. ರಾತ್ರಿ 10.10ಕ್ಕೆ ವಿಜಪುರ ತಲುಪುತ್ತದೆ. ವಿಜಯಪುರ ನಿಲ್ದಾಣದಿಂದ ರೈಲು (ಸಂಖ್ಯೆ- 07330) ಪ್ರತಿದಿನ ಬೆಳಗ್ಗೆ 5.45ಕ್ಕೆ ಹೊರಟು ಬೆಳಗ್ಗೆ 11ಕ್ಕೆ ಹುಬ್ಬಳ್ಳಿ ತಲುಪುತ್ತದೆ.

ಈ ರೈಲು ಎಸ್.ಎಸ್.ಎಸ್. ಹುಬ್ಬಳ್ಳಿ, ಗದಗ, ಮಲ್ಲಾಪುರ, ಹೊಳೆ ಆಲೂರು, ಬದಾಮಿ, ಗುಳೇದಗುಡ್ಡ ರೋಡ್, ಬಾಗಲಕೋಟ, ಆಲಮಟ್ಟಿ, ಬಸವನಬಾಗೇವಾಡಿ ರೋಡ್, ಇಬ್ರಾಹಿಂಪುರ ಹಾಲ್ಟ್ ಮೂಲಕ ವಿಜಯಪುರ ತಲುಪುತ್ತದೆ. ಇದೇ ಮಾರ್ಗವಾಗಿ ಹುಬ್ಬಳ್ಳಿಗೆ ಬರುತ್ತದೆ.

ಇಂಟರ್‌ಸಿಟಿ ರೈಲಿನಲ್ಲಿ ಐದು ಸ್ಲೀಪರ್ ದರ್ಜೆ ಮತ್ತು ಆರು ಜನರಲ್ ಎರಡನೇ ದರ್ಜೆ ಬೋಗಿಗಳು ಇರುತ್ತವೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Recommended Video

Rishabh Pant ಬಾಯಲ್ಲಿ ಬ್ಯಾಟ್ ಬೀಸುವುದನ್ನು ಬಿಡ್ಬೇಕು!!! ಬೇಕಿತ್ತಾ ಪಂತ್... | Oneindia Kannada

English summary
South Western Railway has decided to run Train No.06597/06598 Yesvantpur -Belagavi - Yesvantpur Festival Special Express (one trip only). In view of Pongal and Sabarimala festival season for the convenience of passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X