ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯದಲ್ಲೇ ದುಬೈಯಲ್ಲಿ ರಾಫೆಲ್ ಜೊತೆ ರಮ್ಯಾ ಮದುವೆ! ಸುದ್ದಿ ನಿಜಾನಾ?

|
Google Oneindia Kannada News

ಬೆಂಗಳೂರು, ಆಗಸ್ಟ್ 14: ಕನ್ನಡ ನಟಿ, ಕಾಂಗ್ರೆಸ್ ನ ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರು ಸದ್ಯದಲ್ಲೇ ದುಬೈಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ತಮ್ಮ ಬಹುಕಾಲದ ಸ್ನೇಹಿತ ಪೋರ್ಚುಗಲ್ ನ ರಾಫೆಲ್ ಎಂಬ ಉದ್ಯಮಿಯನ್ನು ರಮ್ಯಾ ಕೈಹಿಡಿಯಲಿದ್ದಾರೆ ಎನ್ನಲಾಗುತ್ತಿದೆ.

ಒಂದು ತಿಂಗಳು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರಂತೆ ರಮ್ಯಾಒಂದು ತಿಂಗಳು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರಂತೆ ರಮ್ಯಾ

ಕನ್ನಡ ಚಿತ್ರರಂಗಕ್ಕೆ ಅಭಿ, ಅರಸು, ಜೊತೆ ಜೊತೆಯಲಿ, ಮುಸ್ಸಂಜೆ ಮಾತಲ್ಲಿ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನೀದಿದ್ದ ರಮ್ಯಾ, ಕೊನೆಯದಾಗಿ ಕಾಣಿಸಿಕೊಂಡಿದ್ದು ನಾಗರಹಾವು ಸಿನೆಮಾದಲ್ಲಿ. ನಂತರ ರಾಜಕೀಯ ಬದುಕಿನತ್ತಲೇ ಹೆಚ್ಚು ಗಮನ ಹರಿಸಿದ ಅವರು 2013 ರಲ್ಲಿ ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ ನಂತರ 2014 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರು.

Rumours Say Actor Ramya to Marry Her Boyfriend Rafale In Dubai Soon

ರಮ್ಯಾ ಟ್ವಿಟ್ಟರ್ ಗೆ ಗುಡ್ ಬೈ ಅಂದಿದ್ದಕ್ಕೆ ಅಸಲಿ ಕಾರಣ ಇದೇನಾ?ರಮ್ಯಾ ಟ್ವಿಟ್ಟರ್ ಗೆ ಗುಡ್ ಬೈ ಅಂದಿದ್ದಕ್ಕೆ ಅಸಲಿ ಕಾರಣ ಇದೇನಾ?

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಮ್ಯಾ, ಕಾಂಗ್ರೆಸ್ ನ ಸೋಶಿಯಲ್ ಮೀಡಿಯಾ ಹೆಡ್ ಆಗಿ ಸಾಕಷ್ಟು ಖ್ಯಾತಿ ಗಳಿಸಿದ್ದರು. ಆದರೆ 2019 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುಂಡ ನಂತರ ಅವರು ಇದ್ದಕ್ಕಿದ್ದಂತೆ ಟ್ವಿಟ್ಟರ್ ಖಾತೆಯನ್ನು ಮುಚ್ಚಿ, ನಾಪತ್ತೆಯಾಗಿದ್ದರು. ಅವರು ವಿಶ್ರಾತಿಗಾಗಿ ತೆರಳಿದ್ದಾರೆ ಎಂದು ಕಾಂಗ್ರೆಸ್ ನ ಕೆಲವು ಮೂಲಗಳು ತಿಳಿಸಿದ್ದವು. ಆದರೆ ಇದೀಗ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ ಎನ್ನಲಾಗುತ್ತಿದ್ದು, ಈ ಸುದ್ದಿಯ ಕುರಿತು ಖಚಿತ ಮಾಹಿತಿ ಲಭ್ಯವಾಗಿಲ್ಲ.

English summary
Some Rumours circulating in media, that saying Former Congress MP and Kannada Actor Ramya alias Divya Spandana will be marrying in Dubai, soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X