ಮಲ್ಟಿಪ್ಲೆಕ್ಸ್ ನಲ್ಲಿ 200 ರು. ದರ ನಿಗದಿಗೆ ಕೋರ್ಟ್ ನಿಂದ ಕೊಕ್ಕೆ

Posted By:
Subscribe to Oneindia Kannada

ಬೆಂಗಳೂರು, ಮೇ 11 : ರಾಜ್ಯದಲ್ಲಿನ ಮಲ್ಟಿಪ್ಲೆಕ್ಸ್ ಗಳು ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಏಕ ರೀತಿಯ 200 ರು. ದರ ನಿಗದಿ ಮಾಡಿದ್ದ ರಾಜ್ಯ ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದ ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಗೆ ಕೊಂಚ ಜಯ ಸಿಕ್ಕಿದೆ.

ವಾರದ ಅಂತ್ಯಕ್ಕೆ ಮತ್ತು ರಾಜ್ಯ ಸರ್ಕಾರಿ ರಜಾದಿನಗಳಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲಿ 200 ರು. ದರ ಅನ್ವಯಿಸುವುದಿಲ್ಲ ಎಂದು ಗುರುವಾರ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಹೇಳಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ.[ಸಿನಿಮಾ ಟಿಕೆಟ್ ದರ ಗರಿಷ್ಠ 200 ರು, ಆದೇಶ ಜಾರಿ, ಆದರೆ...]

Rs 200 ticket price cap will not be applicable on weekends and public holidays HC

ಒಂದೊಳ್ಳೆ ಸಿನಿಮಾ ಬಂದರೆ ಸಾಕು ಅದನ್ನೇ ಬಂಡವಾಳವಾಗಿಟ್ಟುಕೊಂಡು ಜನರ ಬಳಿ ನೂರಾರು ಗಟ್ಟಲೇ ಹಣವನ್ನು ಪೀಕುತ್ತಿದ್ದ ಮಲ್ಟಿಪ್ಲೆಕ್ಸ್ ಗಳಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮೇ 02ರಂದು ಏಕರೀತಿಯ ಪ್ರವೇಶ ದರ ನೀತಿ ಜಾರಿಯನ್ವಯ ಸಿನಿಮಾ ಮಂದಿರಗಳ ಪ್ರವೇಶ ದರದ ಗರಿಷ್ಠ ಮಿತಿಯನ್ನು ತೆರಿಗೆ ಹೊರತುಪಡಿಸಿ ರೂ. 200 ಗಳಿಗೆ ನಿಗದಿಪಡಿಸಿತ್ತು.

ಇದನ್ನು ವಿರೋಧಿಸಿ ಭಾರತ ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಮೇ ಹೈಕೋರ್ಟ್ ನಲ್ಲಿ ಅಪೀಲ್ ಮಾಡಿತ್ತು. ಇದನ್ನು ವಿಚಾರಣೆ ನಡೆಸಿದ ಕೋರ್ಟ್, ರಾಜ್ಯ ಸರ್ಕಾರ ನಿಗದಿ ಮಾಡಿ 200 ರು. ಟಿಕೆಟ್ ದರ ಎಲ್ಲಾ ದಿನಗಳಲ್ಲಿ ಅನ್ವಹಿಸುವುದಿಲ್ಲವೆಂದು ತಿಳಿಸಿದೆ.

ಈ ಬಗ್ಗೆ ತಕರಾರು ಇದ್ದಲ್ಲಿ ಅಪೀಲ್ ಮಾಡುವಂತೆ ರಾಜ್ಯ ಸರ್ಕಾಕ್ಕೆ ಹೈಕೋರ್ಟ್ ನಾಲ್ಕು ವಾರಗಳ ಕಾಲಾವಧಿಯನ್ನು ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In a major relief to movie theatres in the state, the Karnataka High Court has said that cap on price of movie tickets will not be applicable during weekends and state holidays.
Please Wait while comments are loading...