ರಾಯಚೂರು: ನೋಟು ವಿನಿಮಯ, ಮೂವರ ಬಂಧನ, 16 ಲಕ್ಷ ವಶ

Written By: Ramesh
Subscribe to Oneindia Kannada
ರಾಯಚೂರು, ಫೆಬ್ರವರಿ. 17 : ರದ್ದಾಗಿರುವ 500, 1000 ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡುತ್ತಿದ್ದ ಮೂವರು ದಂಧೆಕೋರರನ್ನು ಶುಕ್ರವಾರ ರಾಯಚೂರು ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಧಾರವಾಡ ಮೂಲದ ರವಿಕುಮಾರ್, ರಾಯಚೂರಿನ ಅನ್ವರ್, ಮಾನ್ವಿಯ ಪರಶುರಾಮ ನೋಟು ವಿನಿಮಯ ವೇಳೆ ಸಿಕ್ಕಿಬಿದ್ದ ಆರೋಪಿಗಳು. ಬಂಧಿತರಿಂದ ಒಟ್ಟು 16 ಲಕ್ಷ 70 ಸಾವಿರ ರೂಪಾಯಿ ಹಳೆಯ ನೋಟು ಹಾಗೂ ಒಂದು ಕಾರನ್ನು ಜಪ್ತಿ ಮಾಡಿದ್ದಾರೆ.

Raichur

ಇದರಲ್ಲಿ 3 ಲಕ್ಷ 82 ರು. ಮೌಲ್ಯದ ಸಾವಿರದ ಮುಖಬೆಲೆಯ ನೋಟು, 12 ಲಕ್ಷ 88 ಸಾವಿರ ರು. 500 ಮುಖಬೆಲೆಯ ನೋಟುಗಳು ಇವೆ.

ರಾಯಚೂರಿನ ಮಂತ್ರಾಲಯ ರಸ್ತೆಯ ಅತಿಥಿ ಹೋಟೆಲ್ ಎದುರು ಆರೋಪಿಗಳು ಹಣ ವಿನಿಮಯಕ್ಕೆ ಮುಂದಾಗಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಪಶ್ಚಿಮ ಪೊಲೀಸ್ ಠಾಣೆ ಪೊಲೀಸರು ದಾಳಿ ಮಾಡಿದ್ದಾರೆ.

ರಾಯಚೂರಿನ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Raichur West Police detained 3 persons and seized Rs 16 lakh in old currency notes of Rs 500 and Rs 1,000 on February 17.
Please Wait while comments are loading...